Phone Tapping: "ಬಿಜೆಪಿಯಿಂದ ಫೋನ್ ಕದ್ದಾಲಿಕೆ" ಕಾಂಗ್ರೆಸ್ ಪ್ರಭಾವಿ ಶಾಸಕ!
Phone Tapping: ರಾಜ್ಯದಲ್ಲಿ ಹನಿಟ್ರ್ಯಾಪ್‌ನೊಂದಿಗೆ ಪೋನ್ ಕದ್ದಾಲಿಕೆಯ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಪೋನ್ ಕದ್ದಾಲಿಕೆ ಆಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಗಂಭೀರ ಆರೋಪ ಮಾಡಿದ ಮೇಲೆ ಈ ಇದೀಗ ಕಾಂಗ್ರೆಸ್‌ನಿಂದಲೂ ಇದೇ ರೀತಿಯ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕಾಂಗ್ರೆಸ್‌ನ ಪ್ರಭಾವಿ ಶಾಸಕರು ಬಿಜೆಪಿಯಿಂದಲೇ ಪೋನ್ ಕದ್ದಾಲಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ರಾಜಕೀಯದಲ್ಲಿ ಹನಿಟ್ರ್ಯಾಪ್ ಹಾಗೂ ಪೋನ್ ಕದ್ದಾಲಿಕೆ ಎರಡೂ ವಿಷಯಗಳು ಏಕಕಾಲಕ್ಕೆ ಚರ್ಚೆಯಾಗುತ್ತಿವೆ. ರಾಜ್ಯದಲ್ಲಿ ಸಿಡಿ ಪ್ರಕರಣ ಈ ಹಿಂದೆ ಭಾರೀ ಸದ್ದು ಮಾಡಿತ್ತು. ಇದೀಗ ಪೋನ್ ಕದ್ದಾಲಿಕೆ ವಿಚಾರ ಮುನ್ನೆಲೆಗೆ ಬಂದಿದೆ.

ಇವತ್ತಿಗೂ ಬಿಜೆಪಿಯವರು ಫೋನ್ ಕದ್ದಾಲಿಕೆ ಮಾಡುತಿದ್ದಾರೆ ಎಂದು ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಫೋನ್ ಕದ್ದಾಲಿಕೆ ವಿಚಾರವಾಗಿ ಬಹಳ ಆತಂಕ ಇದ್ದು ಬಿಜೆಪಿಯವರೇ ಹೆಚ್ಚು ಮಾಡಿದ್ದಾರೆ. ಈಗ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ಫೋನ್ ಕದ್ದಾಲಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪ್ರವಾಸದಲ್ಲಿ ಇದ್ದೇನೆ. ಅದಕ್ಕೆ ಆ ವಿಚಾರ ಗಮನಕ್ಕೆ ಬಂತು ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರತಿಕ್ರಿಯೆ ಕೊಟ್ಟ ಅವರು, ಅದನ್ನು ಸಿಬಿಐಗೆ ಕೊಡುವ ಅವಶ್ಯಕತೆ ಏನಿಲ್ಲ. ನಮ್ಮಲ್ಲೇ ಒಳ್ಳೆ ಪೊಲೀಸ್ ಅಧಿಕಾರಿಗಳು ಇದ್ದಾರೆ. ಅದನ್ನ ನಿಭಾಯಿಸುವ ಅಧಿಕಾರಿಗಳು ಇದ್ದಾರೆ. ಹನಿಟ್ರ್ಯಾಪ್ ಮಾಡೊದು ರಾಜಕಾರಣದಲ್ಲಿ ಕೀಳುಮಟ್ಟದ್ದು ಅದನ್ನು ಮಾಡಬಾರದು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂವಿಧಾನದ ಪರ ಇದ್ದಾರೆ. ಅವರು ಯಾವತ್ತೂ ವಿರುದ್ಧ ಇದ್ದವರಲ್ಲಾ. ಗಾಂಧಿ ಕಾರ್ಯಕ್ರಮದಲ್ಲಿ ಅವರು ಏನೆಲ್ಲಾ ಮಾಡಿದ್ದರು ನೋಡಿದ್ದಿರಿ. ಅವರು ಏಕೆ ಸಂವಿಧಾನದ ಬಗ್ಗೆ ಹೇಳ್ತಾರೆ. ಅವರು ಯಾವತ್ತೂ ಅದನ್ನ ಹೇಳಲು ಸಾಧ್ಯವಿಲ್ಲ ಎಂದರು.
ಶಾಸಕರಿಗೆ ಅನುದಾನ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಸ್ಪೇಷಲ್ ಗ್ರ್ಯಾಂಟ್ ಏನು ನಮಗೆ ಬಂದಿಲ್ಲ
ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾವು ಮಾತಾಡಿದ್ದೇವೆ. ನಮಗೆ ಹೆಚ್ಚು ಅನುದಾನ ಕೊಡುವ ಮಾತನ್ನು ಸಿಎಂ ಕೊಟ್ಟಿದ್ದಾರೆ. ನಮ್ಮ ಭಾಗದ ಕಿತ್ತೂರು ಕರ್ನಾಟಕ ಭಾಗದ ಶಾಸಕರಿಗೆ ಹೆಚ್ಚು ಅನುದಾನದ ಭರವಸೆ ಇದೆ. ಇನ್ನು ಹೈದರಾಬಾದ್ ಕರ್ನಾಟಕ ಭಾಗದವರಿಗೆ ಐದು ಸಾವಿರ ಕೋಟಿ ಇಟ್ಟಿದ್ದಾರೆ. ಹಲವು ಕಾರ್ಯಕ್ರಮದ ಬಗ್ಗೆ ಕೊಡಲಾಗಿದ್ದು ನಮಗೆ ಅನುದಾನ ಕೊರತೆ ಅನಿಸುತ್ತಿದೆ ಅದನ್ನ ಸರಿ ಮಾಡುವುದಾಗಿ ಹೇಳಿದ್ದಾರೆ.
8 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಬ್ಯಾಲೆನ್ಸ್ ಮಾಡಿ ಕೊಡ್ತೆನೆ ಎಂದಿದ್ದಾರೆ. ಹುಬ್ಬಳ್ಳಿ - ಧಾರವಾಡ ಪಾಲಿಕೆ ಪ್ರತ್ಯೇಕ ಆಗಿದ್ದು ನಾನು ಅದಕ್ಕೆ ನೂರು ಕೋಟಿ ಕೇಳಿದ್ದೇನೆ. ಎರಡು ನೂರು ಕೋಟಿ ಕೊಡಬಹುದು ಎಂದು ಅವರು ಹೇಳಿದರು.












Click it and Unblock the Notifications