ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಮಸಿ ಇನ್ಸ್‌ಪೆಕ್ಟರ್ ಅರ್ಹತಾ ನಿಯಮ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಫೆಬ್ರವರಿ 14: ರಾಜ್ಯದಲ್ಲಿ ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಕ್ಕೆ ಅರ್ಹತಾ ನಿಯಮಗಳನ್ನು ರೂಪಿಸುವ ಸಂಬಂಧ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಹೈಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಸಂಬಂಧಿಸಿದ ಸಚಿವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕೇ ಎಂದು ಎಚ್ಚರಿಕೆಯನ್ನೂ ಸಹ ನೀಡಿದೆ.

ಕೊನೆಗೆ ನ್ಯಾಯಪೀಠ, ರಾಜ್ಯದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ. ನಿಯಮದ ಕರಡು ಅಂತಿಮಗೊಳಿಸುವ ಕಡತಕ್ಕೆ ಎರಡು ತಿಂಗಳಾದರೂ ಸಚಿವರು ಸಹಿ ಹಾಕಿಲ್ಲ. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ಗಮನಹರಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಆನ್‌ಲೈನ್ ಗೇಮ್ಸ್ ನಿಷೇಧಗೊಳಿಸಿ ಸರ್ಕಾರ ನೀಡಿದ್ದ ಆದೇಶ ರದ್ದುಆನ್‌ಲೈನ್ ಗೇಮ್ಸ್ ನಿಷೇಧಗೊಳಿಸಿ ಸರ್ಕಾರ ನೀಡಿದ್ದ ಆದೇಶ ರದ್ದು

ರಾಜ್ಯದಲ್ಲಿ ಫಾರ್ಮಸಿ ಕಾಯಿದೆ-1948ರ ವಿವಿಧ ನಿಯಮಗಳನ್ನು ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅಶೋಕ್ ಸ್ವಾಮಿ ಹೇರೂರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಸರಕಾರಿ ವಕೀಲರು, ಇನ್ನೂ ಕರಡು ನಿಯಮಗಳನ್ನು ಅಂತಿಮಗೊಳಿಸುವ ಕಡತಕ್ಕೆ ಸಂಬಂಧಿಸಿದ ಸಚಿವರು ಸಹಿ ಹಾಕಿಲ್ಲ. ಸ್ವಲ್ಪ ಕಾಲಾವಕಾಶ ನೀಡಬೇಕೆಂದರು.

Pharmacy inspector appointment issue: Shall we summon minister, HC warns state

ಆಗ ಸಿಟ್ಟಾದ ಸಿಜೆ, ಇದೇನಿದು ಡಿ. 14ರಂದೇ ಇದೇ ಅಂಶವನ್ನು ಹೇಳಿದ್ದೀರಿ, ಸಚಿವರಿಗೆ ನ್ಯಾಯಾಲಯವೇ ಸಮನ್ಸ್ ಮಾಡಬೇಕೆ? ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕೋರ್ಟ್ ಆದೇಶವಿದ್ದರೂ ಹೀಗೆ ವಿಳಂಬ ಮಾಡಿದರೆ ಹೇಗೆ, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೇ ಗಮನಹರಿಸಲಿ ಎಂದು ಆದೇಶಿಸಬೇಕೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಕೊನೆಗೆ ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿ ವಿಚಾರಣೆಯನ್ನು ಎರಡು ವಾರ ಮುಂದೂಡಿತು.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ 184 'ಫಾರ್ಮಸಿ ಇನ್ಸ್‌ಪೆಕ್ಟರ್'ಗಳನ್ನು ಅರೆಕಾಲಿಕ ಆಧಾರದ ಮೇಲೆ ನೇಮಕ ಮಾಡಲಾಗಿತ್ತು. ಆದರೆ, ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆ ಅಡಿ ಡ್ರಗ್ ಇನ್ಸ್‌ಪೆಕ್ಟರ್ ಅವರಂತೆ ಫಾರ್ಮಸಿ ಇನ್ಸ್‌ಪೆಕ್ಟರ್ ಪ್ರಾಸಿಕ್ಯೂಷನ್ ಅಧಿಕಾರ ಹೊಂದಿರಲಿಲ್ಲ. ಆದ ಕಾರಣ ಅರೆಕಾಲಿಕ ಆಧಾರದ ಮೇಲೆ ಫಾರ್ಮಸಿ ಇನ್ಸ್‌ಪೆಕ್ಟರ್‌ಗಳ ನೇಮಕ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ ಎಂದು ರಾಜ್ಯ ಫಾರ್ಮಸಿ ಕೌನ್ಸಿಲ್ ಹೈಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು.

ಫಾರ್ಮಸಿ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಲ್ಲಿ ಫಾರ್ಮಸಿ ಇನ್ಸ್‌ಪೆಕ್ಟರ್ ಪಾತ್ರ ಮುಖ್ಯವಾಗಿದೆ. ಫಾರ್ಮಸಿ ಕಂಪನಿಗಳು ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವ ಕುರಿತು ಸಲ್ಲಿಕೆಯಾಗುವ ದೂರುಗಳನ್ನು ತನಿಖೆ ನಡೆಸುವ ಅಧಿಕಾರ ಫಾರ್ಮಸಿ ಇನ್ಸ್‌ಪೆಕ್ಟರ್ ಹೊಂದಿರುತ್ತಾರೆ. ಆದ್ದರಿಂದ ಅವರ ನೇಮಕಕ್ಕೆ ಅರ್ಹತಾ ನಿಯಮಗಳನ್ನು ರೂಪಿಸಬೇಕು ಎಂದು ಸರ್ಕಾರ ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್‌ಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.

Recommended Video

IPL 2022 ಆಡಲಿರುವ ಕನ್ನಡಿಗ ಆಟಗಾರರು ಇವರೇ | Oneindia Kannada

English summary
Pharmacy inspector appointment issue: Shall we summon minister, Karnataka High Court warns state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X