ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಇಳಿಯಿತು ಡೀಸೆಲ್, ಪೆಟ್ರೋಲ್ ಬೆಲೆ

|
Google Oneindia Kannada News

ಬೆಂಗಳೂರು, ಡಿ.16 : ವಾಹನ ಸವಾರರಿಗೆ ಹೊಸ ವರ್ಷದ ಕೊಡುಗೆ ಸಿಕ್ಕಿದ್ದು ಪೆಟ್ರೋಲ್‌, ಡೀಸೆಲ್‌ ಬೆಲೆ ಸೋಮವಾರ ಮಧ್ಯ ರಾತ್ರಿಯಿಂದ ತಲಾ 2 ರೂ. ಕಡಿಮೆಯಾಗಿದೆ. ಕಳೆದ ಆಗಸ್ಟ್‌ನಿಂದ ಪೆಟ್ರೋಲ್‌ ದರ ಸತತ 8ನೇ ಬಾರಿ ಇಳಿಕೆ ಕಂಡಿದ್ದು, ಡೀಸೆಲ್‌ ಬೆಲೆ 4ನೇ ಬಾರಿ ಕಡಿಮೆಯಾಗಿದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಲೀಟರ್‌ಗೆ ತಲಾ 2 ರೂ. ಕಡಿಮೆಯಾಗಿದೆ. ನೂತನ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೋರೆಷನ್‌ ತಿಳಿಸಿದೆ. ಡೀಸೆಲ್ ದರದಲ್ಲಿ ಇಳಿಕೆಯಾದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಕಡಿಮೆಯಾಗುವ ನಿರೀಕ್ಷೆಯೂ ಇದೆ.

Petrol

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಗಳ ಬೆಲೆ ಇಳಿಕೆಯಾಗಿದ್ದರಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆಯಾಗಿದೆ. ಈವರೆಗೆ ಪೆಟ್ರೋಲ್‌ ದರ ಬೆಂಗಳೂರಿನಲ್ಲಿ 69.45 ರೂ. ಮತ್ತು ಡೀಸೆಲ್‌ ಬೆಲೆ 57.04 ರೂ. ಇತ್ತು. [ತೈಲ ಬೆಲೆ ಇಳಿಕೆಯಿಂದ ರಾಜ್ಯಕ್ಕೆ 400 ಕೋಟಿ ನಷ್ಟ]

ಅಕ್ಟೋಬರ್‌ನಿಂದ ಡೀಸೆಲ್ ದರದಲ್ಲಿ ಇದು ನಾಲ್ಕನೇ ಕಡಿತವಾಗಿದೆ. ತೈಲ ಕಂಪನಿಗಳು, ಡಿಸೆಂಬರ್ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀಟರ್‌ಗೆ 91 ಪೈಸೆ ಹಾಗೂ 84 ಪೈಸೆಗೆ ಇಳಿಸಿದ್ದವು.[ಅಬಕಾರಿ ಸುಂಕ ಹೆಚ್ಚಳ: ಗ್ರಾಹಕರಿಗಿಲ್ಲ ಹೊರೆ]

ಬಸ್ ದರ ಕಡಿಮೆ ಇಲ್ಲ : ಪೆಟ್ರೋಲ್ ಹಾಗೂ ಡೀಸೆಲ್ ದರ ಆಧರಿಸಿ ಬಸ್ ಪ್ರಯಾಣ ದರ ಇಳಿಕೆ ಮಾಡುವುದು ಅಸಾಧ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಳಗಾವಿಯ ಚಳಿಗಾದಲ ಅಧಿವೇಶನದಲ್ಲಿ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಸೋಮವಾರ ರಾಮಚಂದ್ರ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಡೀಸೆಲ್ ದರ ಇಳಿಕೆಯಾದರೂ ಬಸ್ ಪ್ರಯಾಣ ದರದಲ್ಲಿ ಏಕೆ ಇಳಿಕೆಯಿಲ್ಲ. ದೇಶದ ಯಾವ ರಾಜ್ಯಗಳಲ್ಲೂ ಪ್ರಯಾಣ ದರ ಇಳಿಕೆಯಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಇನ್ನು ಪ್ರತಿಪಕ್ಷ ಬಿಜೆಪಿ ಇಂದು ಸದನದಲ್ಲಿ ಕೆಎಸ್ಆರ್‌ಟಿಸಿ ಪ್ರಯಾಣ ದರ ಇಳಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಿದೆ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆಯೇ? ಕಾದು ನೋಡಬೇಕು.

English summary
Petrol and diesel prices were cut by Rs 2 per liter. This is the eighth straight reduction in petrol prices since August, and fourth in diesel. New rates will be effective from Monday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X