ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆನ್ನಾರ್‌ ನದಿ ವಿವಾದ: ಕೇಂದ್ರದ ಧೋರಣೆಗೆ ಸುಪ್ರೀಂಕೋರ್ಟ್‌ ಆಕ್ಷೇಪ

|
Google Oneindia Kannada News

ನವದೆಹಲಿ, ನವೆಂಬರ್‌ 17: ದಕ್ಷಿಣ ಪಿನಾಕಿನಿ (ಪೆನ್ನಾರ್‌) ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಕಾಲಹರಣ ಮಾಡುತ್ತಿರುವ ಕೇಂದ್ರ ಸರ್ಕಾರದ ನಿಲುವಿಗೆ ಸುಪ್ರೀಂಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.

ಪೆನ್ನಾರ್‌ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ನಿರ್ಮಾಣ ಇದು ಕೋಲಾರ ಬಂಗಾರಪೇಟೆ, ಮಾಲೂರಿನ ಕೆಲವು ಗ್ರಾಮಗಳಿಗೆ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದೆ. ಎಲೆಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಪೇಟೆಯವರೆಗೆ ನೀರು ಹರಿಸುವ ಕಾಮಗಾರಿ ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೊನ್ನೆಯಾರ್‌ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ನಡೆಸುತ್ತಿದೆ.

ಮೇಕೆದಾಟು ಯೋಜನೆ ನೆರವೇರಲು ಬಿಡುವುದಿಲ್ಲ: ತಮಿಳುನಾಡು ಹಠಮೇಕೆದಾಟು ಯೋಜನೆ ನೆರವೇರಲು ಬಿಡುವುದಿಲ್ಲ: ತಮಿಳುನಾಡು ಹಠ

ದಕ್ಷಿಣ ಪಿನಾಕಿನ ನದಿಯ ನೀರು ಬಳಸಿಕೊಳ್ಳುವ ಕರ್ನಾಟಕದ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ 2018ರಲ್ಲಿ ದಾವೆ ಹೂಡಿತ್ತು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಆರ್‌.ಶಾ ಅವರನ್ನು ಒಳಗೊಂಡ ದ್ವಿಸದಸ್ಯರ ಪೀಠ ನಡೆಸಿತ್ತು.

ಪೆನ್ನಾರ್‌ ನದಿ ನೀರು ಹಂಚಿಕೆಗೆ ನ್ಯಾಯಾಧೀಕರಣ ಸ್ಥಾಪಿಸಬೇಕು ಎಂದು ತಮಿಳುನಾಡು ಸರ್ಕಾರವು 2019ರ ನವೆಂಬರ್‌ 30ರಂದು ಮನವಿ ಮಾಡಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥ್ಯಪಡಿಸಲು ಸಂಧಾನ ಸಮಿತಿ ರಚಿಸಲಾಗಿದೆ. ಈ ನ್ಯಾಯಾಧೀಕರಣ ಸಮಿತಿ ರಚಿಸಲು ತಾತ್ವಿಕ ಅನುಮೋದನೆ ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿತು.

ಅಂತರರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅಂತರರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅಂತಾರಾಜ್ಯ ನದಿ ನೀರು ವಿವಾದ ಬಗೆಹರಿಸಲು ನ್ಯಾಯಾಧೀಕರಣ ಸ್ಥಾಪನೆ ಮಾಡಬೇಕು ಎಂದು ತಮಿಳುನಾಡು ಸರ್ಕಾರ ಮನವಿ ಮಾಡಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಈ ಸಂಬಂಧ ನಾಲ್ಕು ವಾರಗಳಲ್ಲಿ ಸ್ಥಿತಿಗತಿಯ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠವು ಕೇಂದ್ರಕ್ಕೆ ನಿರ್ದೇಶನ ನೀಡಿದೆ.

2020ರ ಜುಲೈ 7ರಿಂದ ಯಾವುದೇ ಬೆಳವಣಿಗೆ ಇಲ್ಲ

2020ರ ಜುಲೈ 7ರಿಂದ ಯಾವುದೇ ಬೆಳವಣಿಗೆ ಇಲ್ಲ

ಈ ಜಲ ವಿವಾದದಲ್ಲಿ ಸಂಧಾನ ಪ್ರಕ್ರಿಯೆ ಎಷ್ಟು ಸಮಯ ಮುಂದುವರಿಯುತ್ತದೆ ಎಂದು ನ್ಯಾಯಪೀಠವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. ಸಂಧಾನ ಸಮಿತಿಯು 2020ರ ಜುಲೈ 7ರಂದು ಸಭೆ ನಡೆಸಿದ ಬಳಿಕ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ತಮಿಳುನಾಡು ವಕೀಲರು ಗಮನ ಸೆಳೆದರು. ಆಗ ನ್ಯಾಯಪೀಠ ಈ ಮಾತುಕತೆ 10 ವರ್ಷಗಳವರೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿತು. ಆಗ ಮಧ್ಯಪ್ರವೇಶಿಸಿದ ಕರ್ನಾಟಕ ಸರ್ಕಾರದ ಪರ ವಕೀಲ ಮೋಹನ್‌ ವಿ. ಕಾತರಕಿ ಇಂದೊಂದು ಸಣ್ಣ ವಿಷಯವಾಗಿದ್ದು, ಮಾತುಕತೆಯ ಮೂಲಕವೇ ಬಗೆಹರಿಸಬಹುದು ಎಂದರು.

ನ್ಯಾಯಾಧೀಕರಣ ರಚನೆಗೆ ವಿರೋಧ

ನ್ಯಾಯಾಧೀಕರಣ ರಚನೆಗೆ ವಿರೋಧ

1956ರ ಅಂತರ್‌ ರಾಜ್ಯ ನದಿ ನೀರು ವಿವಾದ ಕಾಯ್ದೆ ಸೆಕ್ಷನ್‌ 4 (1) ಪ್ರಕಾರ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆಯಾದಲ್ಲಿ ಮಾತ್ರ ನ್ಯಾಯಾಧೀಕರಣವನ್ನು ರಚಿಸಬಹುದು ಎಂದು ಗಮನ ಸೆಳೆದರು. ವಿವಾದ ಏನಿದೆ ಎಂಬುದನ್ನು ತಮಿಳುನಾಡು ಸರ್ಕಾರ ದೂರಿನಲ್ಲಿ ಬಹಿರಂಗಪಡಿಸಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರವು ನ್ಯಾಯಾಧೀಕರಣ ರಚನೆಯನ್ನು ವಿರೋಧಿಸುತ್ತದೆ ಎಂದು ಕಾತರಕಿ ಹೇಳಿದರು.

ನಾಲ್ಕು ವಾರಗಳ ಕಾಲಾವಕಾಶ ಕೋರಿಕೆ

ನಾಲ್ಕು ವಾರಗಳ ಕಾಲಾವಕಾಶ ಕೋರಿಕೆ

ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಟರ್‌ ಜನರಲ್‌ ಐಶ್ವರ್ಯ ಭಾಟಿ ತಮಿಳುನಾಡು ಸರ್ಕಾರದ ದೂರನ್ನು ಸಂಧಾನ ಸಮಿತಿಗೆ ವಹಿಸಲಾಗಿದೆ ಎಂದು ಹೇಳಿದರು. ವಿವಾದದಲ್ಲಿ ನಿಲುವು ಸ್ಪಷ್ಟಪಡಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದೂ ಕೋರಿದರು. ಬಳಿಕ ನ್ಯಾಯಪೀಠವು ವಿಚಾರಣೆಯನ್ನು ಡಿ. 14ಕ್ಕೆ ಮುಂದೂಡಿತು.

ಸಂಧಾನ ಸಮಿತಿಯಿಂದ ಎರಡು ಸಭೆ

ಸಂಧಾನ ಸಮಿತಿಯಿಂದ ಎರಡು ಸಭೆ

ಈ ದಾವೆಗೆ ಸಂಬಂಧಿಸಿದಂತೆ ಕರ್ನಾಟಕವು ತನ್ನ ಲಿಖಿತ ಆಕ್ಷೇಪಣೆಗಳ ಹೇಳಿಕೆ ದಾಖಲಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ತಮಿಳುನಾಡು ರಾಜ್ಯವು ಸಲ್ಲಿಸಿದ ಪ್ರತಿ ಹೇಳಿಕೆಗೆ ಕರ್ನಾಟಕ ಸರ್ಕಾರವು ಮರು ಉತ್ತರ ನೀಡಿದೆ. ಈಗಾಗಲೇ ಸಂಧಾನ ಸಮಿತಿಯು ಎರಡು ಸಭೆಗಳನ್ನು ನಡೆಸಿದೆ. ಈ ಪ್ರಕರಣದಲ್ಲಿ ನ್ಯಾಯಾಧೀಕರಣ ರಚನೆ ಅವಶ್ಯಕತೆ ಇಲ್ಲವೆಂದು ಕರ್ನಾಟಕವು ಈಗಾಗಲೇ ತನ್ನ ನಿಲುವನ್ನು ಪ್ರತಿಪಾದಿಸಿದೆ. ಈ ನಿಲುವನ್ನೇ ರಾಜ್ಯವು ಮುಂದುವರೆಸುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

English summary
The Supreme Court has objected to the central government's delay in resolving the dispute between the states of Karnataka and Tamil Nadu regarding the sharing of Dakshina Pinakini (Pennar) river water through negotiation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X