ಅಪರಾಧದ ಪರ ವಕಾಲತ್ತು ಬೇಡ: ಪೇಜಾವರ ಶ್ರೀ ಅಭಿಮತ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಜನವರಿ. 11: ಅಪರಾಧ ಮಾಡಿದ ವ್ಯಕ್ತಿಯ ಅಪರಾದ ಮೊದಲೇ ಸಾಬೀತಾದರೆ ಅಂತಹ ವ್ಯಕ್ತಿಗಳ ವಕಾಲತ್ತನ್ನು ವಕೀಲರು ಪಡೆದುಕೊಳ್ಳಬಾರದು ಎಂದು ಉಡುಪಿ ಮಠದ ವಿಶ್ವೇಶ ತೀರ್ಥ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.

ಐತಿಹಾಸಿಕ ಐದನೇ ಪರ್ಯಾಯ ಪೀಠಾರೋಹಣ ಮಾಡುವ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ಗೌರವಿಸುವ ಕಾರ್ಯಕ್ರಮ ಉಡುಪಿ ಜಿಲ್ಲಾ ಬಾರ ಅಸೋಸಿಯೇಶನ್ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ನಡೆಯಿತು. ಮಾಜಿ ಅಡ್ವಕೇಟ್ ಜನರಲ್ ಬಿವಿ ಆಚಾರ್ಯ ಮತ್ತು ಆಶೋಕ್ ಹಾರ್ನಲ್ಲಿ ಪೇಜಾವರ ಸ್ವಾಮೀಜಿಗಳಿಗೆ ಗೌರವಿಸಿದರು.[ಚಿತ್ರಗಳು : ಮುಂಬೈ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನೆ]

Pejawar seer

ಗೌರವಾರ್ಪಣೆಯಲ್ಲಿ ಸ್ವೀಕರಿಸಿ ಮಾತನಾಡಿದ ಪೇಜಾವರ ಶ್ರೀ, 'ವಕೀಲರು ಇಲ್ಲದಿದ್ದರೆ ಇದುವರೆಗೆ ಯಾರಿಗೂ ನ್ಯಾಯ ಸಿಗುತ್ತಿರಲಿಲ್ಲ. ವಕೀಲರ ಕಾರಣದಿಂದ ತಪ್ಪು ಮಾಡುವವರಿಗೆ ಶಿಕ್ಷೆ ಸಿಗುತ್ತಿದೆ. ಕೆಲವೊಂದು ತಪ್ಪುಗಳು ಮೊದಲೇ ಗೊತ್ತಿರುತ್ತದೆ. ಅಂತಹ ಅಪರಾಧ ಮಾಡಿದವರ ಪರ ವಕಾಲತ್ತನ್ನು ವಕೀಲರು ಸ್ವೀಕರಿಸಬಾರದು' ಎಂದು ಸಲಹೆ ನೀಡಿದರು. ಈ ಸಮಾರಂಭದಲ್ಲಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.[ಪೇಜಾವರ ಮಠಕ್ಕೆ 600 ಕೋಟಿ ದೇಣಿಗೆಯ ವಿಷಯ ಏನಾಯ್ತು?]

ಸೆಟಪ್ ಬಾಕ್ಸ್ ಬೆಲೆ ಗಗನಕ್ಕೆ, ಗ್ರಾಹಕರು ಕಂಗಾಲು

ಮಂಗಳೂರು, ಜನವರಿ,12: ನಗರಾದ್ಯಂತ ಸೆಟಪ್ ಬಾಕ್ಸ್ ಅಳವಡಿಕೆ ಕಡ್ಡಾಯವಾದ್ದರಿಂದ ಈ ಸೆಟಪ್ ಬಾಕ್ಸ್ ಗಳ ಬೆಲೆಯು ಗಗನಕ್ಕೇರಿ ಸಾಮಾನ್ಯ ಗ್ರಾಹಕರು ಕಂಗಾಲಾಗಿದ್ದಾರೆ. ಹಿಂದೆ ಸುಮಾರು 1,400ರಷ್ಟು ಇದ್ದ ಸೆಟ್‌ಟಾಪ್ ಬಾಕ್ಸ್‌ನ ದರ ಇದೀಗ 2,000ಕ್ಕೆ ಏರಿಸಲಾಗಿದೆ.

ಹೆಚ್‍ ಡಿ ಹೈ ಎಂಡ್ ವರ್ಷನ್ ಎಂದೆಲ್ಲಾ ವಿವಿಧ ರೀತಿಯ ಬಾಕ್ಸ್‌ಗಳನ್ನು ತೋರಿಸಿ ಜನರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಅಲ್ಲದೆ ಗ್ರಾಹಕರಿಗೂ ಕೂಡಾ ಇದೀಗ ಅಸಹಾಯಕ ಪರಿಸ್ಥಿತಿ. ಎಷ್ಟೇ ದರವಾದರೂ ಖರೀದಿಸಲೇ ಬೇಕು. ಅಷ್ಟೇ ಅಲ್ಲದೆ ಸೆಟ್‍ಟಾಪ್ ಬಾಕ್ಸ್ ಅಳವಡಿಕೆಯಾದ ನಂತರ ತಿಂಗಳ ಬಾಡಿಗೆಯಲ್ಲಿಯೂ ಕೂಡಾ ಹೆಚ್ಚಳ ಮಾಡಲಾಗಿದೆ.[441 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಮೆಸ್ಕಾಂ]

ಕೇಬಲ್ ವಿತರಕರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ನಿರ್ದಿಷ್ಟ ದರ ನಿಗದಿಪಡಿಸಬೇಕಾದ ಅನಿವಾರ್ಯತೆ ಇದೆ. ಬಾಯಿಗೆ ಬಂದ ದರ ಹೇಳುವವರ ವಿರುದ್ಧ ಕ್ರಮ ಜರುಗಿಸಿ, ಕೇಬಲ್ ಹಂಚಿಕೆದಾರರು ಗ್ರಾಹಕರು ತಮ್ಮ ಮೇಲೆ ಇಟ್ಟಿರುವ ಭರವಸೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pejawar seer gave suggestions to lawyer in Udupi, on Monday, January 11th. Set up box price increased suddenly in Mangaluru.
Please Wait while comments are loading...