ಪ್ರಾರಬ್ಧ ಅನುಭವಿಸಲು ಜನ್ಮ ದೊರೆತಿದೆ ಅನ್ನಬೇಡಿ: ಕಾಶೀಮಠ ಶ್ರೀ
ದೇವರು ಲೋಕದ ಗುರುವಾಗಿದ್ದಾರೆ, ಆದರೆ ದೇವರ ಅನುಗ್ರಹವಾಗಬೇಕಾದರೆ ಗುರುವಿನ ದಯೆ ಅಗತ್ಯವಿದೆ. ಗುರು ಭಕ್ತಿ ಮತ್ತು ಪ್ರೀತಿಯಿಂದ ಮಾತ್ರ ದೇವರ ಪ್ರೀತಿ ಸಂಪಾದಿಸಲು ಸಾಧ್ಯ ಎಂದು ಶ್ರೀ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಭಾರತದ ಗಂಗಾನದಿಯ ತಟದಲ್ಲಿರುವ ಹರಿದ್ವಾರದ ಶ್ರೀ ವ್ಯಾಸ ಮಂದಿರದ ಆವರಣದಲ್ಲಿ ವೃಂದಾವನಸ್ಥರಾಗಿರುವ ಸುಧೀಂದ್ರ ತೀರ್ಥ ಶ್ರೀಗಳ ಆರಾಧನಾ ಮಹೋತ್ಸವದ ನಂತರ ನಡೆದ ಸಂಸ್ಥಾನದ ಶಿಷ್ಯವರ್ಗದ ಮಹಾಸಭೆಯ ಸಮಾರಂಭದಲ್ಲಿ ಕಾಶೀಮಠದ 21ನೇ ಪೀಠಾಧಿಪತಿಯಾಗಿ ಪೀಠಾರೋಹಣಗೈದು ಗುರುಗುಣಗಾನದೊಂದಿಗೆ ಶ್ರೀಗಳು ಆಶೀರ್ವಚನ ನೀಡಿದರು. (ಕಾಶೀ ಮಠದ ನೂತನ ಪೀಠಾಧಿಪತಿ)
ಗುರು ಸೇವೆ ಎನ್ನುವುದು ಕೇವಲ ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಡೆಯುವಂತಹದ್ದು. ಪ್ರತಿಯೊಂದನ್ನು ಏಕೆ ಮಾಡಬೇಕು ಮತ್ತು ಅದರಿಂದೇನು ಸಿಗುತ್ತದೆ ಎನ್ನುವವರೂ ಗುರು ಸೇವೆ ಕರ್ತವ್ಯ ಎನ್ನುವುದನ್ನು ಅರಿತುಕೊಳ್ಳಬೇಕು.
ಸಂಪಾದನೆ ಶಾಶ್ವತವಲ್ಲದಿರಬಹುದು. ಆದರೆ ದೇವರ ದಯೆ ಶಾಶ್ವತ. ಅದಕ್ಕಾಗಿಯೇ ವಿಶ್ವಾಸವಿಟ್ಟು ಪ್ರಾರಬ್ಧ ಅನುಭವಿಸಲು ಜನ್ಮ ದೊರೆತಿದೆ ಎನ್ನುವುದರ ಬದಲಾಗಿ ದೇವರ ದಯೆ ಸಂಪಾದಿಸಲು ಬಳಸಿಕೊಳ್ಳಬೇಕು ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. (ಕಾಶೀಮಠದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ವಿಧಿವಶ)
ವೃಂದಾವನಸ್ಥರಾಗಿರುವ ಸುಧೀಂದ್ರ ತೀರ್ಥರು ಸಮಾಜ ಮತ್ತು ಕಾಶೀಮಠ ಸಂಸ್ಥಾನದ ನಡುವೆ ಪ್ರೀತಿಯ ಬಾಂಧ್ಯವ್ಯವನ್ನು ಎತ್ತರಕ್ಕೇರಿಸಿದ್ದಾರೆ. ಪ್ರೀತಿಗೆ ಯೋಗ್ಯರಲ್ಲದವರನ್ನೂ ದ್ವೇಷದಿಂದ ಕಾಣಬಾರದು ಎನ್ನುವ ತತ್ವಾದರ್ಶವನ್ನು ನೀಡಿದ್ದಾರೆ ಎಂದು ಸಂಯಮೀಂದ್ರ ಶ್ರೀಗಳು ಹೇಳಿದ್ದಾರೆ. (ಚಿತ್ರಗಳು: ಮಂಜು ನೀರೇಶ್ವಾಲ್ಯ)

ಸಂಯಮೀಂದ್ರ ಶ್ರೀಗಳ ಅಶೀರ್ವಚನ
ಸುಧೀಂದ್ರ ತೀರ್ಥರ ಜೀವಮಾನವೇ ಅದು ದಿವ್ಯ ಮತ್ತು ದೈವಿಕ. ಗುರು ಪ್ರೀತಿಯನ್ನು ಉಳಿಸಿಕೊಂಡು ಅವರ ಅನುಗ್ರಹದಿಂದ ಸಂಸ್ಥಾನವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ತಮ್ಮ ಮುಂದಿದೆ. ಗುರು ದಯೆಯಿಂದ ದೇವರು ಮತ್ತು ಧರ್ಮಪ್ರೀತಿಯಿಂದ ಮುಂದೆಯೂ ನಿರಂತರ ಹರಿಗುರು ಸೇವೆ ಮಾಡುವ ಭಾಗ್ಯ ಎಲ್ಲರದ್ದಾಗಲಿ ಎಂದು ಸಂಯಮೀಂದ್ರ ಶ್ರೀಗಳು ಹರಸಿದರು.

ವೈಭವದ ಪೀಠಾರೋಹಣ ಕಾರ್ಯಕ್ರಮ
ಸಂಯಮೀಂದ್ರ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ವೈಭವದಿಂದ, ಭಕ್ತಿಬಾವದಿಂದ ನಡೆಯಿತು. ವ್ಯಾಸ ಮಂದಿರದಲ್ಲಿ ವ್ಯಾಸ ಪೂಜೆ ಸಲ್ಲಿಸಿ ಆವರಣದಲ್ಲಿರುವ ಸದ್ಗುರುಗಳ ವೃಂದಾವನದಲ್ಲಿ ಪೂಜೆ ನಡೆಸಿ ಸಂಸ್ಥಾನದ ಬಿರುದಾವಳಿಗಳಿಂದ ಕೂಡಿ ಗುರುಗಳ ಭಾವಚಿತ್ರ ಸಹಿತ ರಾಜೋಪಚಾರದ ಗೌರವಗಳೊಂದಿಗೆ ಶ್ರೀಗಳವರು ವ್ಯಾಸಮಂದಿರದಲ್ಲಿ ಶಿಷ್ಯವರ್ಗದ ಮಹಾಸಭೆಗೆ ಚಿತ್ತೈಸಿದರು.

ಶ್ರೀಗಳಿಗೆ ಜಯಘೋಷ
ವ್ಯಾಸ ಮಂದಿರದಲ್ಲಿ ಜಯ ಘೋಷಗಳೊಂದಿಗೆ ಶ್ರೀಗಳವರನ್ನು ಸಮಾರಂಭಕ್ಕೆ ಬರಮಾಡಿಕೊಳ್ಳಲಾಯಿತು.ಅಲ್ಲಿ ಗುರುಗಳಾದ ಸುಧೀಂದ್ರ ತೀರ್ಥರ ಭಾವಚಿತ್ರವನ್ನು ರಜತ ಸಿಂಹಾಸನದಲ್ಲಿರಿಸಿ ದೀಪ ಪ್ರಜ್ವಲನ, ಹಾರಾರ್ಪಣೆಯೊಂದಿಗೆ ಸಂಯಮೀಂದ್ರ ಶ್ರೀಗಳು ಆರತಿ ಬೆಳಗಿದರು.

ವೈದಿಕರ ಪ್ರಾರ್ಥನೆ
ವೈದಿಕರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಸಂಸ್ಕೃತ ಭಾರತಿಯ ಪ್ರಮುಖ ದಿನೇಶ್ ಕಾಮತ್ ಶ್ರೀಗಳವರನ್ನು ಸ್ವಾಗತಿಸಿದರು. ಸದ್ಗುರು ಸುಧೀಂದ್ರ ತೀರ್ಥರಂತೆ ನೂತನ ಪೀಠಾಧೀಶರೂ ಸಮಾಜವನ್ನು ಉನ್ನತಿಯೆಡೆಗೆ ಮುನ್ನಡೆಸುವಂತೆ ಅವರು ವಿನಂತಿಸಿದರು. ಸಂಸ್ಥಾನದ ಪೀಠಾರೋಹಣಗೈದು ಶಿಷ್ಯವರ್ಗವನ್ನು ಸಂಸ್ಥಾನವನ್ನು ಮುನ್ನಡೆಸುವಂತೆ ಸಮಾಜದ ಎಲ್ಲರ ಪರವಾಗಿ ಪಂಡಿತ ನರಸಿಂಹ ಆಚಾರ್ಯ ಶ್ರೀಗಳವರನ್ನು ಗೌರವಾದರ ಪೂರ್ವಕ ವಿನಂತಿಸಿದರು.

ಮೂಲ್ಕಿ ದೇವಾಲಯಕ್ಕೆ ಶ್ರೀಗಳು
ವೃಂದಾವನಸ್ಥರಾಗಿರುವ ಸುಧೀಂದ್ರ ಶ್ರೀಗಳು ಕರಾವಳಿ ಮೂಲ್ಕಿಯ ದೇವಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಇದೀಗ ನೂತನ ಪೀಠಾಧಿಪತಿ ಸಂಯಮೀಂದ್ರ ತೀರ್ಥರು ತಮ್ಮ ಪೀಠಾರೋಹಣದ ಬಳಿಕ ಫೆ7ರಂದು ಮೊದಲ ಭೇಟಿಯನ್ನು ಮೂಲ್ಕಿ ದೇವಳಕ್ಕೆ ನೀಡುತ್ತಿರುವುದು ವಿಶೇಷವಾಗಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications