ಅಂತರ ಜಿಲ್ಲಾ ಸಂಚಾರ ಪಾಸು; ಪೊಲೀಸರ ಮಹತ್ವದ ಆದೇಶ

ಬೆಂಗಳೂರು, ಮೇ 21 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಳಿಸಲಾಗಿದೆ. ಅಂತರ ಜಿಲ್ಲೆಗಳ ನಡುವೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ಶುಕ್ರವಾರದಿಂದ ರೈಲುಗಳ ಸಂಚಾರ ಆರಂಭವಾಗುತ್ತಿದೆ.

Recommended Video

      ರಾಜೀವ್ ಗಾಂಧಿಯವರಿಗೆ ನಮನ ಸಲ್ಲಿಸಿದ ಡಿಕೆ ಶಿವಕುಮಾರ್

      ಅಂತರ ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಜನರಿಗೆ ಪಾಸುಗಳನ್ನು ಪಡೆಯುವ ವಿಚಾರದಲ್ಲಿ ಗೊಂದಲಗಳಿವೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.

      ಕರ್ನಾಟಕದಲ್ಲಿ ಅಂತರ ಜಿಲ್ಲೆಗಳ ನಡುವೆ ಸಂಚಾರ ನಡೆಸಲು ಪಾಸುಗಳನ್ನು ಪಡೆಯುವ ಅಗತ್ಯವಿಲ್ಲ ಎಂದು ಡಿಜಿ& ಐಜಿಪಿ ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಮೂಲಕ ಹಲವಾರು ದಿನದಿಂದ ಇದ್ದ ಗೊಂದಲ ಬಗೆಹರಿದಿದೆ.

      Pass Not Required For Inter District Movement In Karnataka

      'ಅಂತರ ಜಿಲ್ಲೆಗಳ ಸಂಚಾರಕ್ಕೆ ಪಾಸುಗಳ ಅಗತ್ಯವಿಲ್ಲ. ಆದರೆ, ತುರ್ತು ಅಗತ್ಯವಿದ್ದರೆ ಮಾತ್ರ ಸಂಚಾರ ನಡೆಸಿ. ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಮಾತ್ರ ಸಂಚಾರ ನಡೆಸಬಹುದು" ಎಂದು ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

      ಸರ್ಕಾರಿ ಬಸ್, ರೈಲು, ಖಾಸಗಿ ವಾಹನ ಮುಂತಾದವುಗಳ ಮೂಲಕ ನೀವು ಕರ್ನಾಟಕದ ಯಾವುದೇ ಜಿಲ್ಲೆಗೆ ಪ್ರಯಾಣ ಮಾಡಬಹುದು. ಖಾಸಗಿ ವಾಹನದಲ್ಲಿಯೂ ಸಂಚಾರ ನಡೆಸಲು ಪಾಸು ಅಗತ್ಯವಿಲ್ಲ. ಆದರೆ, ಸಾಮಾಜಿಕ ಅಂತರದ ನಿಯಮ ಪಾಲಿಸಬೇಕು.

      ಇನ್ನು ಜಿಲ್ಲೆಗಳ ಗಡಿ ಭಾಗದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಒಂದು ವೇಳೆ ನಿಮಗೆ ಸೋಂಕಿನ ಲಕ್ಷಣ ಕಂಡು ಬಂದರೆ ಕ್ವಾರಂಟೈನ್‌ಗೆ ಹಾಕಲಾಗುತ್ತದೆ. ಬೇರೆ ಜಿಲ್ಲೆಯಿಂದ ಆಗಮಿಸಿದವರಿಗೆ ಹೋಂ ಕ್ವಾರಂಟೈನ್ ಮಾಡುವ ನಿಯಮ ಹಲವು ಜಿಲ್ಲೆಯಲ್ಲಿ ಜಾರಿಯಲ್ಲಿದೆ.

      pass

      ಸಂಚಾರ ನಡೆಸಲು ಅವಕಾಶವಿದೆ ಎಂದು ಸುಮ್ಮನೆ ತಿರುಗಾಡಬೇಡಿ. ಅಗತ್ಯವಿದ್ದರೆ ಮಾತ್ರ ಸಂಚಾರ ನಡೆಸಿ. ಬೇರೆ ಜಿಲ್ಲೆಗಳಿಗೆ ಹೋದಾಗ ಅಲ್ಲಿಯ ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲನೆ ಮಾಡಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+