ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಸಹಚರರಿಗೆ ಪರಮೇಶ್ವರ್ ಲವ್ ಲೆಟರ್!

|
Google Oneindia Kannada News

ಬೆಂಗಳೂರು, ಸೆ. 18 : ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸರ್ಕಾರದ ನಡುವಿನ ಹೊಂದಾಣಿಕೆ ಕೊರತೆ ಮತ್ತೊಮ್ಮೆ ಬಹಿರಂಗಗೊಂಡಿದೆ. ಪಕ್ಷದ ಕಚೇರಿಗೆ ಆಗಮಿಸಿದ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರಿಗೆ ಪತ್ರ ತಲುಪಿದ್ದು, ಗುರುವಾರ ಪಕ್ಷದ ಕಚೇರಿಗೆ ಗೃಹ ಸಚಿವರು ಆಗಮಿಸಿದ್ದರು.

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಧಿಸುವ ದೃಷ್ಟಿಯಿಂದ ಪ್ರತಿ ದಿನ ಒಬ್ಬರು ಸಚಿವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಹಿಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಇದನ್ನು ಮರೆತ ಸಚಿವರು ಪಕ್ಷದ ಕಚೇರಿಯತ್ತ ಸುಳಿದ ಕಾರಣ ಪರಮೇಶ್ವರ್ ಪತ್ರ ಬರೆದಿದ್ದಾರೆ.

Parameshwar

ಪರಮೇಶ್ವರ್ ಪತ್ರ ಬರೆದ ಸಚಿವರಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್, ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ರಮಾನಾಥ ರೈ ಮುಂತಾದವರು ಸೇರಿದ್ದಾರೆ. ಪಕ್ಷದ ಕಚೇರಿಗೆ ಏಕೆ ಆಗಮಿಸುತ್ತಿಲ್ಲ, ಕಾರ್ಯಕರ್ತರನ್ನು ಏಕೆ ಭೇಟಿಯಾಗುತ್ತಿಲ್ಲ? ಎಂದು ಪತ್ರದಲ್ಲಿ ಪರಮೇಶ್ವರ್ ಕಾರಣ ಕೇಳಿದ್ದರು. [ಬಯಲಾದ ಸಿಎಂ ಸಿದ್ದು, ಪರಮೇಶ್ವರ್ ಗುದ್ದಾಟ]

ಪರಮೇಶ್ವರ್ ಪತ್ರ ತಲುಪುತ್ತಿದ್ದಂತೆ ಕೆಲವು ಸಚಿವರು ಪಕ್ಷದ ಕಚೇರಿಗೆ ಆಗಮಿಸಿದ್ದಾರೆ. ಗುರುವಾರ ಬೆಳಗ್ಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದು. ಸಂಜೆ ಅರಣ್ಯ ಸಚಿವ ರಮಾನಾಥ ರೈ ಕಚೇರಿಗೆ ಆಗಮಿಸುವುದಾಗಿ ಹೇಳಿದ್ದಾರೆ. ಪರಮೇಶ್ವರ್ ಬರೆದ ಪತ್ರ ಕೆಲವು ಸಚಿವರಿಗೆ ಪಕ್ಷದ ಕಚೇರಿಗೆ ಹೋಗಬೇಕೆನ್ನುವುದನ್ನು ನೆನಪು ಮಾಡಿಕೊಟ್ಟಿದೆ. [ಉಪ ಮುಖ್ಯಮಂತ್ರಿ ಹುದ್ದೆ, ನಿರ್ಧಾರವೇ ಅಂತಿಮ]

ವಾರದಲ್ಲಿ ಎರಡು ದಿನ ಸಚಿವರು ಕಡ್ಡಾಯವಾಗಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ವಿಧಾನಸೌಧದದ ಕಚೇರಿಯಲ್ಲಿದ್ದು, ಕಡತ ವಿಲೇವಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಇದನ್ನು ಸಚಿವರು ಪಾಲಿಸುತ್ತಾರಾ? ಕಾದು ನೋಡಬೇಕು.

English summary
Karnataka Pradesh Congress Committee president G. Parameshwar written a letter to Chief Minister Siddaramaiah cabinet ministers for not visiting party office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X