ಮುಂದಿನ ಸಿಎಂ ಆಯ್ಕೆ ಸಿಎಲ್ ಪಿಯಲ್ಲೇ ನಿರ್ಧಾರ: ಪರಂ ಕುತೂಹಲಕರ ಹೇಳಿಕೆ
ಬೆಂಗಳೂರು, ಮೇ 13:ರಾಜ್ಯ ವಿಧಾನಸಭೆಯ ಚುನಾವಣೆಯ ಮತ ಎಣಿಕೆಗೆ ಕೇವಲ ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕಾಂಗ್ರೆಸ್ ಬಹುಮತ ಗಳಿಸಿದರೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಜಿ. ಪರಮೇಶ್ವರ್ ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ದಲಿತರು ಮುಖ್ಯಮಂತ್ರಿಯಾಗಬಹುದು ಎಂದ ಬೆನ್ನಲ್ಲೇ ಪರಮೇಶ್ವರ್ ಈ ಹೇಳಿಕೆ ನೀಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಚುನಾವಣಾತೋತ್ತರ ಸಮೀಕ್ಷೆ ಅಲ್ಲ ನಮ್ಮ ಕಾರ್ಯಕರ್ತರು ಮುಖಂಡರು ಕೊಟ್ಟಿರುವ ಮಾಹಿತಿಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ, ನಾವು 113ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ. ಅವರು ಹೇಳಿರಬಹುದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು, ಆದರೆಯಡಿಯೂರಪ್ಪರ ಅವರ ಕನಸ್ಸು ನನಸಾಗುವುದಿಲ್ಲ ಎಂದರು.

ನಾವೇ ಸರ್ಕಾರ ರಚಿಸುವುದು ನಾನು ತುಂಬಾ ವಿಶ್ವಾಸದಿಂದ ಹೇಳುತ್ತಿದ್ದೇನೆ, ನಾವೇ ಸರ್ಕಾರ ರಚಿಸುವುದು ಇನ್ನೊಂದು ಹೆಜ್ಜೆಯಲ್ಲಿ ಚುನಾವಣೆ ಅಂತ್ಯ ಗೊಳ್ಳುತ್ತದೆ .ಕೌಟಿಂಗ್ ಮುಗಿದ ನಂತರ ಚುನಾವಣೆ ಮುಕ್ತಾಯ ವಾಗಲಿದೆ. ಇದು ಒಂದು ಮಹತ್ವವಾದ ಚುನಾವಣೆ. ಈ ಮಹತ್ವದ ವಾದ ತೀರ್ಪನ್ನು ಜನರು ಕೊಡುತ್ತಿದ್ದಾರೆ. ಅದಕ್ಕಾಗಿ ರಾಜ್ಯದ ಜನರಿಗೆ ಕೃತಜ್ಞತೆ ತಿಳಿಸುತ್ತೇನೆ.












Click it and Unblock the Notifications