Get Updates
Get notified of breaking news, exclusive insights, and must-see stories!

6,000 ಕೊಡವ ಕುಟುಂಬದಿಂದ ಗಿನ್ನಿಸ್ ದಾಖಲೆಯ ಸಾಧನೆ

ಮಡಿಕೇರಿ, ಡಿಸೆಂಬರ್‌ 26: ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಕೊಡವ ಸಮುದಾಯದ 6000ಕ್ಕೂ ಅಧಿಕ ಮಂದಿ ಒಟ್ಟಿಗೆ ಸೇರಿದ್ದರು.

ಒಂದೇ ಸೂರಿನಡಿ ಅತಿ ದೊಡ್ಡ ಕುಟುಂಬ ಕೂಟದ ವಿಶ್ವ ದಾಖಲೆಯನ್ನು ಮುರಿಯಲು ಅವರು ಒಟ್ಟುಗೂಡಿದರು. ಕೊಡವ ಕ್ಲಾನ್ ಪೋರ್ಟಲ್ ಈ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ಒಕೂಟ ಎಂದು ಕರೆಯಲಾಯಿತು. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಸಾಬೀತುಪಡಿಸಲು ಸುಮಾರು 6500 ಜನರು ಒಂದೇ ಸೂರಿನಡಿ ಜಮಾಯಿಸಿದರು ಎಂದು ಕೊಡವ ಕ್ಲಾನ್ ಪೋರ್ಟಲ್ ಸಂಸ್ಥಾಪಕ ಜಿ ಕಿಶೂ ಉತ್ತಪ್ಪ ತಿಳಿಸಿದ್ದಾರೆ. ಮೂರು ತಲೆಮಾರಿನ ಜನರು ಈ ಕಾರ್ಯಕ್ರಮಕ್ಕೆ ಜಮಾಯಿಸಿದ್ದು, ವರ್ಲ್ಡ್ ರೆಕಾರ್ಡ್ ಅಸೋಸಿಯೇಷನ್‌ನ ಪ್ರತಿನಿಧಿಗಳು ಇದನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಈ ಕಾರ್ಯಕ್ರಮ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದೆಯೇ ಎಂದು ಖಚಿತಪಡಿಸಲು ಪರಿಶೀಲನೆ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ. ಕೊಡವ ಸಮುದಾಯವು ಪೂರ್ವಜರ ವಂಶಾವಳಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಕೊಡವ ಕ್ಲಾನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. 21,000 ಕ್ಕೂ ಹೆಚ್ಚು ಕೊಡವ ವ್ಯಕ್ತಿಗಳ ದೊಡ್ಡ ಕುಟುಂಬ ವೃಕ್ಷವನ್ನು ರಚಿಸುವಲ್ಲಿ ಪೋರ್ಟಲ್ ಯಶಸ್ವಿಯಾಗಿದೆ.

Over 6000 Kodava people gather Bittangala to create Guinness World record, Largest Family Gathering

ಪೋರ್ಟಲ್ ಮೂಲಕ ಅವರು ಎಫ್‌ಎಂಕೆಎಂ ಕಾರಿಯಪ್ಪ ಅಥವಾ ಸಮುದಾಯದ ಬೇರೆಯವರೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಹ ಕಂಡುಹಿಡಿಯಬಹುದು. ಪೋರ್ಟಲ್ ಅತಿದೊಡ್ಡ ಕುಟುಂಬ ವೃಕ್ಷಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಗೆದ್ದಿದೆ ಮತ್ತು ಅದು ಈಗ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯಲು ಪ್ರಯತ್ನಿಸಿದೆ.

ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದೇವೆಯೇ ಎಂದು ಕಂಡುಹಿಡಿಯಲು ನಾವು ಈಗ ಕಾರ್ಯಕ್ರಮದ ಭಾಗವಾಗಿರುವ ಪ್ರತಿಯೊಬ್ಬರನ್ನು ಪೋರ್ಟಲ್‌ನಲ್ಲಿರುವ ಕುಟುಂಬ ವೃಕ್ಷಕ್ಕೆ ಲಿಂಕ್ ಮಾಡುತ್ತಿದ್ದೇವೆ. ಒಂದೇ ಕುಟುಂಬದ ಒಟ್ಟು 4,514 ಜನರು ಈ ಹಿಂದೆ ಫ್ರಾನ್ಸ್‌ನಲ್ಲಿ ಒಟ್ಟುಗೂಡಿದ ಅತಿದೊಡ್ಡ ಕುಟುಂಬ ಕೂಟದ ವಿಶ್ವದಾಖಲೆಯನ್ನು ಸೃಷ್ಟಿಸಿದ್ದರು. ಈ ದಾಖಲೆಯನ್ನು ಮುರಿಯುವ ಗುರಿಯನ್ನು ಕೊಡವ ಕುಟುಂಬ ಹೊಂದಿದೆ ಎಂದು ಕಿಶೂ ವಿವರಿಸಿದರು.

Over 6000 Kodava people gather Bittangala to create Guinness World record, Largest Family Gathering

ಏತನ್ಮಧ್ಯೆ, ಕಾರ್ಯಕ್ರಮವು ಕೊಡವ ಸಾಹಿತ್ಯಾಸಕ್ತರಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿ ಪುಸ್ತಕ ಮಾರಾಟವನ್ನು ಆಯೋಜಿಸಿತ್ತು. ಸುತ್ತಮುತ್ತಲಿನ 30ಕ್ಕೂ ಹೆಚ್ಚು ಮಳಿಗೆಗಳು ಕೊಡವ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತವೆ. ವಾಲಗಥಾಟ್ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು, ಗಾಯನ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+