ಬೆಳಗಾವಿ ಬಗ್ಗೆ ಮಾತಾಡೋ ʼಉಡಾಳ್ ಪವ್ಯಾʼ ಅಂದ್ರ, ಬಣ್ಣದ ಬಗ್ಗೆ ಮಾತಾಡಿದ!
ಬೆಳಗಾವಿ ವಿಚಾರ ಇದೀಗ ಕರ್ನಾಟಕದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಭಾಷಾ ವಿವಾದ ಸದ್ಯಕ್ಕೆ ತಣ್ಣಗಾಗಿದೆಯಾದರೂ. ಕನ್ನಡಿಗರ ಮೇಲೆ ಮಹಾರಾಷ್ಟ್ರದ ಮರಾಠಿಪರ ಸಂಘಟನೆಗಳು ಹಾಗೂ ಎಂಇಎಸ್ ಪುಂಡರು ಕಪ್ಪು ಮಸಿ ಬಳಿಯುವುದು. ಬಸ್‌ಗಳಿಗೆ ಹಾನಿ ಮಾಡುವುದು ಮುಂದುವರಿದಿದೆ. ಇದೀಗ ಬೆಳಗಾವಿ ವಿಚಾರವಾಗಿ ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಅದರಲ್ಲೂ ಉತ್ತರ ಕರ್ನಾಟಕದ ಕಂಟೆಂಟ್ ಕ್ರಿಯೇಟರ್ಸ್ ಮಾತನಾಡಬೇಕು ಎನ್ನುವ ವಿಚಾರದಲ್ಲಿ ಭಾರೀ ಚರ್ಚೆಗಳು ನಡೆದಿವೆ. ಈ ನಡುವೆ ಉಡಾಳ್ ಪವ್ಯಾ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾನೆ. ಕೊನೆಗೂ ಈ ವಿಚಾರವಾಗಿ ಕ್ಷಮೆ ಕೇಳಿದ್ದಾನಾದರೂ. ಈ ಬಗ್ಗೆ ಕನ್ನಡಿಗರ ಅಸಮಾಧಾನ ಮುಂದುವರಿದಿದೆ.
ಕನ್ನಡದ ಬಗ್ಗೆ ಮಾತನಾಡೋ ಉಡಾಳ್ ಪವ್ಯಾ ಅಂದ್ರ ಅವರ ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ಉಡಾಳ್ ಪವ್ಯಾ ಅವರನ್ನು ಅನ್ ಫಾಲೋ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಕನ್ನಡ ಕಂಟೆಂಟ್ ಕ್ರಿಯೇಟರ್ ಹರೀಶ್ ಅವರು, ಬೆಳಗಾವಿ ವಿಚಾರವಾಗಿ ವಿಡಿಯೋ ಮಾಡಿದ್ದರು. ಇದರಲ್ಲಿ ಉತ್ತರ ಕರ್ನಾಟಕದ ಯೂಟ್ಯೂಬ್ ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ಕನ್ನಡ ಪರವಾಗಿ ಧ್ವನಿ ಎತ್ತುವಂತೆ ಆಗ್ರಹಿಸಿದ್ದರು. ಅಲ್ಲದೆ ನನ್ ಮಿನಿ ರೇಡಿಯೋ ಎನ್ನುವ ಖಾತೆಯ ಮೂಲಕ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ "ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗೆ ಏನೇ ಸಮಸ್ಯೆ ಆದ್ರೂ, ಅನ್ಯಾಯ ಆದ್ರೂ ಅಲ್ಲಿರೋ Youtuber ಗಳು content creator ಗಳು ಧ್ವನಿ ಏನಿಕ್ಕೆ ಎತ್ತೋದಿಲ್ಲ ನಿಮ್ಮ ಅನಿಸಿಕೆಗಳನ್ನ ತಿಳಿಸಿ" ಎಂದು ಸಹ ಪೋಸ್ಟ್ ಮಾಡಿದ್ದರು.
ಆದರೆ ಹರೀಶ್ ಅವರ ಮನವಿಗೆ ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಉಡಾಳ್ pavvya ಅವರ ಬಣ್ಣದ ಬಗ್ಗೆ ಮಾತನಾಡಿದ್ದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕನ್ನಡಿಗರಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಉಡಾಳ್ ಪವ್ಯಾ, " ನನ್ನ ಕಡೆಯಿಂದ ಗೊತ್ತಿದ್ದು, ಗೊತ್ತಿಲ್ದಂಗ ಆದ ತಪ್ಪಿನಿಂದ ಬೇಜಾರು ಆದ ಎಲ್ಲಾ ಸಹ ಕನ್ನಡಿಗರಿಗೆ ನನ್ನ ಕಡೆ ಇಂದ ಹೃದಯಪೂರರ್ವಕ ಕ್ಷಮೆ" ಎಂದು ಪವ್ಯಾ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕನ್ನಡ ಬರಹಗಾರ ಸುನೀಲ್ ಜೆ ಅವರು, ನಾನು ನನ್ ಮಿನಿ ರೇಡಿಯೋ ಹರೀಶ್ ಅವರ ಜೊತೆ ಒಂದು ಸಲ ನೇರವಾಗಿ ಮಾತಾಡಿದೀನಿ. ಅದು ಕರ್ಣಾಟಬಲ -KarnataBala ಚಾನಲ್‌ನ ಒಂದು ವಿಡಿಯೋಗೆ ವಾಯ್ಸ್ ಕೊಡೋಕೆ ಅವರು ಬಂದಾಗ.
ಹರೀಶ್ ನಿಜವಾದ ಜಂಟಲ್‌ಮ್ಯಾನ್. ಯಾರೊಬ್ಬರ ಬಗ್ಗೆ ಕೀಳಾಗಿ ಮಾತಾಡದ, ಆಡಿಕೊಳ್ಳದ, ಎಲ್ಲರನ್ನೂ ಸಮಾನವಾಗಿ ಕಾಣುವ ಓರ್ವ ಪ್ರಬುದ್ಧ ವ್ಯಕ್ತಿ. ತಮ್ಮದೇ ಸ್ವಂತ ಚಾನಲ್ ಕೆಲಸ ಇದ್ದರೂ ಕನ್ನಡಕ್ಕಾಗಿ ಎಂದ ಕೂಡಲೇ ಬಿಡುವು ಮಾಡಿಕೊಂಡು, ಇಡೀ ದಿನ ಎಷ್ಟೇ ರಿಟೇಕ್ ಕೇಳಿದರೂ ಒಂದಿನಿತು ಬೇಸರ ಮಾಡಿಕೊಳ್ಳದೆ ಡಬ್ಬಿಂಗ್ ಮಾಡಿಕೊಟ್ಟಿದ್ರು. ಪ್ರತಿಬಾರಿ ಕನ್ನಡಿಗರ ಸಮಸ್ಯೆಗೆ ದನಿಯಾಗುವ ಕೆಲವೇ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳಲ್ಲಿ ಇವರು ಕೂಡ ಒಬ್ಬರು.
ಇಂತಹ ವ್ಯಕ್ತಿಗಳನ್ನು ಕಂಡರೆ ಉಡಾಳರಿಗೆ ಉರಿ ಬೀಳೋದು ಸಹಜ. ಚರ್ಮದ ಬಣ್ಣದ ಮೇಲೆ ಒಬ್ಬ ವ್ಯಕ್ತಿಯನ್ನು ಆಡಿಕೊಳ್ಳೋದರಲ್ಲೇ ಆತನ ಯೋಗ್ಯತೆ ಏನು ಅಂತ ಆತ ತೋರಿಸಿದ್ದಾನೆ ಅಷ್ಟೇ ಎಂದು ಹೇಳಿದ್ದಾರೆ.
ಹರೀಶ್‌ಗೆ ಹರಿದು ಬರ್ತಿದೆ ಬೆಂಬಲ: ಇನ್ನು ಈ ರೀತಿ ಹರೀಶ್ ಅವರ ಬಣ್ಣದ ಬಗ್ಗೆ ಮಾತನಾಡುತ್ತಿದ್ದಂತೆಯೇ ಹಲವು ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ಹರೀಶ್ ಅವರಿಗೆ ಬೆಂಬಲ ಸೂಚಿಸಿದ್ದು, ಉಡಾಳ್ ಪವ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕನ್ನಡಿಗ ಕುನಾಲ್ ಎನ್ನುವ ಇನ್ಸಟಾ ಪೇಜ್‌ನಿಂದಲೂ ಹರೀಶ್ ಅವರನ್ನು ಬೆಂಬಲಿ ವಿಶೇಷ ವಿಡಿಯೋ ಮಾಡಲಾಗಿದೆ.
ಕನ್ನಡಿಗರಲ್ಲೇ ವೈಮನಸ್ಸು: ಇನ್ನು ಈ ವಿಚಾರವಾಗಿ ಕನ್ನಡ ಕಂಟೆಂಟ್ ಕ್ರಿಯೇಟರ್ಸ್‌ಗಳಲ್ಲೇ ವೈಮನ್ಸು ಮೂಡಿರುವುದು ಕನ್ನಡಿಗರಲ್ಲಿ ಬೇಸರವನ್ನುಂಟು ಮಾಡಿದೆ. ಕನ್ನಡದಿಂದ ಬೆಳೆದವರು ಕನ್ನಡಕ್ಕಾಗಿ ಧ್ವನಿ ಎತ್ತಬೇಕಾಗಿರುವುದು ಕರ್ತವ್ಯ ಎಂದು ಕನ್ನಡಿಗರು ಹೇಳುತ್ತಿದ್ದಾರೆ.












Click it and Unblock the Notifications