RSS ಚಡ್ಡಿ ಮತ್ತು ಹಿಂದೆ ಸಿದ್ದರಾಮಯ್ಯ ಪಂಚೆ ಕಳಚಿದ್ದ ಘಟನೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಡ್ಡಿ ಸುಟ್ಟು ಹಾಕುತ್ತೇವೆ ಎನ್ನುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಬಿಜೆಪಿಯಿಂದ ವ್ಯಾಪಕ ಆಕ್ರೋಶ ಹೊರಬರುತ್ತಿದ್ದರೆ, ಸಾಮಾಜಿಕ ಜಾಲತಾಣದಲ್ಲೂ ತರಹೇವಾರಿ ಮೀಮ್ಸ್ ಗಳು ಹರಿದಾಡುತ್ತಿವೆ.
Recommended Video
ಇದರ ಜೊತೆಗೆ, ಬಿಜೆಪಿಯ ಐಟಿ ಘಟಕ ಚಡ್ಡಿಯ ಮಹತ್ವ ಏನು ಎನ್ನುವುದನ್ನು ಟ್ವೀಟ್ ಮೂಲಕ, ಕೆಪಿಸಿಸಿ ಮತ್ತು ವಿರೋಧ ಪಕ್ಷದ ನಾಯಕರಿಗೆ ವ್ಯಂಗ್ಯವಾಗಿ ತಿಳಿ ಹೇಳಿದೆ. ಈ ವಿಚಾರದಲ್ಲಿ ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರ ಹೇಳಿಕೆಯೂ ಟ್ರೋಲ್ ಆಗುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ವಿಚಾರದ ಬಗ್ಗೆ ಮಾತನಾಡುತ್ತಾ, "ಎರಡು ರಾಷ್ಟ್ರೀಯ ಪಕ್ಷಗಳು ತಮ್ಮತಮ್ಮ ಚಡ್ಡಿಯನ್ನು ಉದುರಿಸಿಕೊಳ್ಳಲಿ, ಆದರೆ ರಾಜ್ಯದ ಜನತೆಯ ಚಡ್ಡಿಯನ್ನು ಉದುರಿಸಬಾರದು, ಅವರು ಗೌರವಯುತವಾಗಿ ಬದುಕವಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಡಲಿ"ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇವೆಲ್ಲ ಪರವಿರೋಧ ಹೇಳಿಕೆಯ ನಡುವೆ ಸಿದ್ದರಾಮಯ್ಯನವರ ಪಂಚೆ ಈ ಹಿಂದೆ ಅಸೆಂಬ್ಲಿ ಅಧಿವೇಶನದಲ್ಲಿ ಕಳಚಿದ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದೆ. ಅದಕ್ಕೆ ಬೇರೆಬೇರೆ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸರ್ ಪಂಚೆ ಬಿಚ್ಚೋಗಿದೆ
"ಪಂಚೆ ಬಿದ್ದ ನಂತರ ಮಾನ ಕಾಪಾಡಿದ್ದೇ ಚಡ್ಡಿ! ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ!" ಎನ್ನುವ ಒಕ್ಕಣೆಯನ್ನು ಹಾಕಿ ಬಿಜೆಪಿ ಐಟಿ ಘಟಕ, ವಿಡಿಯೋ ಒಂದನ್ನು ಟ್ವೀಟ್ ಮಾಡಿದೆ. ಈ ಹಿಂದೆ, ಸಿದ್ದರಾಮಯ್ಯನವರು ಸದನದಲ್ಲಿ ವೀರಾವೇಶದಿಂದ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರ ಪಂಚೆ ಕಳಚಿತ್ತು, ಆದರೆ ಅದು ಅವರಿಗೆ ಅದು ತಿಳಿದಿರಲೇ ಇಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರ್ ಪಂಚೆ ಬಿಚ್ಚೋಗಿದೆ, ಸರಿ ಮಾಡಿಕೊಳ್ಳಿ ಎಂದು ಕಿವಿಯಲ್ಲಿ ಹೇಳಿದ ನಂತರ, ಅದನ್ನು ಸಿದ್ದರಾಮಯ್ಯ ಸರಿಪಡಿಸಿಕೊಳ್ಳುತ್ತಾರೆ. ಸ್ವಲ್ಪ ಪಂಚೆ ಕಳಚಿಕೊಂಡು ಬಿಟ್ಟಿದೆ, ಒಂದು ನಿಮಿಷ ಎಂದು ಸಿದ್ದರಾಮಯ್ಯ, ಪಂಚೆ ಸರಿಪಡಿಸಿಕೊಂಡು ಭಾಷಣ ಮುಂದುವರಿಸುತ್ತಾರೆ.
|
ನಲಪಾಡ್ ಅವನಂಥಹ ಬೀದಿ ರೌಡಿಗಳು ಬೇರೆಯವರ ಚಡ್ಡಿ ಕದ್ದು ಸುಡುವ ಅಪಾಯವಿದೆ
"ತುಂಡುಬಟ್ಟೆ ಇದ್ದರೆ ಸಾಕು ಮಾನ ಮುಚ್ಚೋಕೆ...! ಅದನ್ನೇ ಸುಟ್ಟು ಏನು ಸಾಧಿಸಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ? ಸಿದ್ದರಾಮಯ್ಯನವರೇ, ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಕ್ಕೆ ಮುನ್ನ ನಿಮ್ಮ ಕಾರ್ಯಕರ್ತರಿಗೆ ಒಂದು ಎಚ್ಚರಿಕೆ ನೀಡಿ. ನಲಪಾಡ್ ಅವನಂಥಹ ಬೀದಿ ರೌಡಿಗಳು ಬೇರೆಯವರ ಚಡ್ಡಿ ಕದ್ದು ಸುಡುವ ಅಪಾಯವಿದೆ. ಚಡ್ಡಿ ಸುಡುವುದು ಸಾಂಕೇತಿಕ ಪ್ರತಿಭಟನೆ ಎಂದು ವ್ಯಾಖ್ಯಾನಿಸುವ @siddaramaiah ಅವರೇ, ಜವಾಹರ್ ಲಾಲ್ ನೆಹರೂ ಅವರೂ ಚಡ್ಡಿ ತೊಟ್ಟಿದ್ದು ಗೊತ್ತೇ? ಹಾಗಾದರೆ ನಿಮ್ಮ ಪ್ರತಿಭಟನೆಯ ವ್ಯಾಪ್ತಿಯಲ್ಲಿ ನೆಹರೂ ಅವರೂ ಇದ್ದಾರಾ?" ಎಂದು ಬಿಜೆಪಿ ಸರಣಿ ಟ್ವೀಟ್ ಅನ್ನು ಮಾಡಿದೆ.

ಹಳೆಯ ಚಡ್ಡಿಗಳಿವೆ, ಪುರುಷೋತ್ತಿನಲ್ಲಿ ಅದನ್ನು ಸಿದ್ದರಾಮಯ್ಯ ಸುಟ್ಟುಕೊಂಡಿರಲಿ
"ಕಾಂಗ್ರೆಸ್ಸಿನವರಿಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲ, ನಮ್ಮ ಹಳೆಯ ಚಡ್ಡಿಗಳಿವೆ, ಪುರುಷೋತ್ತಿನಲ್ಲಿ ಅದನ್ನು ಸಿದ್ದರಾಮಯ್ಯ ಸುಟ್ಟುಕೊಂಡಿರಲಿ. ಸಿದ್ದರಾಮಯ್ಯನವರಿಗೆ ಸರಿಯಾಗಿ ಇರುವುದು ಲುಂಗಿ ಮಾತ್ರ ಅದನ್ನಾದರೂ ಸರಿಯಾಗಿ ಇಟ್ಟುಕೊಳ್ಳಲಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ RSS ಚಡ್ಡಿಯನ್ನು ಹಾಕಿಕೊಳ್ಳಲಿ, ಆಗ ಇಬ್ಬರಿಗೂ ದೇಶಭಕ್ತಿ, ಪರೋಪಕಾರ, ಸಂಸ್ಕಾರ, ಸಂಸ್ಕೃತಿಯ ಅರಿವಾಗುತ್ತದೆ"ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಮಾನ ಕಾಪಾಡಿದ್ದು ಇದೇ BJP ಚಡ್ಡಿ ಇರಬಹುದು
"ರಮೇಶ್ ಜಾರಕಿಹೊಳಿ ಮಾನ ಕಾಪಾಡಿದ್ದು ಇದೇ BJP ಚಡ್ಡಿ ಇರಬಹುದು. ಪಂಚೆ ಜಾರೋದಕ್ಕೂ, ಪ್ಯಾಂಟ್ ತಾವಾಗೇ ಕಳಚೋದಕ್ಕು ಸಾಕಷ್ಟು ವ್ಯತ್ಯಾಸವಿದೆ. ಮಾನವರಿಗೆ ಚಡ್ಡಿ ಗೌರವದ ಸಂಕೇತ, ಶಕ್ತಿಯ ಸಂಕೇತ, ನಿಮ್ಮ ಹೆಸರಿನ (ರಾಮ), ಭಕ್ತಿಯ(ಹನುಮಂತ) ಸಂಕೇತ. ಎಲ್ಲ ಚಡ್ಡಿಗಳನ್ನ ಸುಟ್ಟರೇ ನಿಮ್ನ ಗೌರವವನ್ನು ನೀವೇ ಸುಟ್ಟು ಕೊಂಡಂತೆ. ಹೃದಯ ಮುಟ್ಟಿ ನೋಡಿಕೊಳ್ಳಿ.
ಚಡ್ಡಿ ನಾಗಪುರದ ಸಂಕೇತ ಅನ್ನೋದು ಬಿಟ್ರಲ್ಲಾ!" ಈ ರೀತಿಯ ಕಾಮೆಂಟುಗಳು ಬಿಜೆಪಿಯ ಟ್ವೀಟಿಗೆ ಬರುತ್ತಿವೆ.












Click it and Unblock the Notifications