ಚಾಟ್‌ಜಿಪಿಟಿ ಬಳಕೆದಾರರಿಗೆ ಭಾರಿ ಭರ್ಜರಿ ಅವಕಾಶ ಸೃಷ್ಟಿಸಿದ OpenAI
ತಂತ್ರಜ್ಞಾನ ಬದಲಾಗುತ್ತಿದೆ, ಜಗತ್ತು ಇದೀಗ ತಂತ್ರಜ್ಞಾನದ ಜೊತೆಗೆ ರೇಸ್ ಮಾಡುವಂತೆ ಮುಂದಕ್ಕೆ ನುಗ್ಗುತ್ತಿದೆ. ಇಂತಹ ಸಮಯದಲ್ಲಿ ಮನುಷ್ಯರಿಗೆ ಸಾಕಷ್ಟು ಒಳ್ಳೆಯದು ಆಗುತ್ತಿದ್ದರೂ, ಭವಿಷ್ಯದಲ್ಲಿ ಇದರಿಂದ ಸಮಸ್ಯೆ ಗ್ಯಾರಂಟಿ ಅನ್ನೋ ಆರೋಪ & ಚರ್ಚೆಗಳು ಕೂಡ ಜೋರಾಗಿವೆ. ಇದೆಲ್ಲಾ ಏನೇ ಇದ್ದರೂ ತಂತ್ರಜ್ಞಾನ ಬೆಳವಣಿಗೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆಯ ಮೂಲಕ ಮನುಷ್ಯರು ಹೊಸ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದು, ಚಾಟ್‌ಜಿಪಿಟಿ ಬಳಕೆದಾರರಿಗೆ ಭಾರಿ ಭರ್ಜರಿ ಅವಕಾಶ ಸೃಷ್ಟಿಸಿದೆ OpenAI...
ಅಂದಹಾಗೆ ಇದೀಗ OpenAI ತನ್ನ ChatGPT ಆಪ್ ಮೂಲಕ ನೇರ ಖರೀದಿ ಮಾಡಲು ಅವಕಾಶವನ್ನು ಕಲ್ಪಿಸುವ ಹೊಸ ಆಪ್ಷನ್ ನೀಡಿದೆ. Instant Checkout ವೈಶಿಷ್ಟ್ಯವನ್ನು ಅಮೆರಿಕದ ಬಳಕೆದಾರರಿಗೆ ಪರಿಚಯಿಸಿ ಅತ್ಯಂತ ದೊಡ್ಡ ಇ-ಕಾಮರ್ಸ್ ಹೆಜ್ಜೆ ಇಟ್ಟಿದೆ. ಇದು ಜಾಗತಿಕ ಇ-ಕಾಮರ್ಸ್ ವಲಯವೇ ಅಲ್ಲಾಡಿ ಹೋಗುವಂತೆ ಮಾಡಿದೆ. ಹಾಗಾದರೆ ಇದು ಹೇಗೆ ಕೆಲಸ ಮಾಡಲಿದೆ? ಬಳಕೆದಾರರಿಗೆ ಇದರ ಲಾಭ ಹೇಗೆ ಆಗಬಹುದು? ಬನ್ನಿ ತಿಳಿಯೋಣ.

ಹೊಸ ಆಪ್ಷನ್ ಹೇಗೆ ಕೆಲಸ ಮಾಡುತ್ತೆ?
ಓಪನ್‌ಎಐ "Instant Checkout" ಅನ್ನು ChatGPT ಅಪ್ಲಿಕೇಷನ್‌ನಲ್ಲಿ ಪರಿಚಯಿಸಿದೆ, ಈ ಮೂಲಕ ಅಮೆರಿಕ ಬಳಕೆದಾರರು ಬೇರೆ ವೆಬ್‌ಸೈಟ್‌ಗಳಿಗೆ ಹೋಗದೆ ನೇರ ಖರೀದಿ ಮಾಡಲು ಚಾನ್ಸ್ ಸಿಕ್ಕಂತಾಗಿದೆ. ಅಮೆರಿಕದ ಇ-ಕಾಮರ್ಸ್ ಸಂಸ್ಥೆ Etsy, ಪೈಲಟ್ ಯೋಜನೆಯಲ್ಲಿ ಮೊದಲ ಸಂಸ್ಥೆಯಾಗಿ ಹೆಜ್ಜೆಯನ್ನು ಇಟ್ಟಿದೆ. ಇನ್ನು ಶೀಘ್ರದಲ್ಲೇ ಇತರ ಸಂಸ್ಥೆಗಳು ಕೂಡ ChatGPT ಅಪ್ಲಿಕೇಷನ್ ಮೂಲಕ ತಮ್ಮ ವ್ಯಾಪಾರ & ವಹಿವಾಟು ಆರಂಭಿಸುವ ಸಾಧ್ಯತೆ ಇದೆ. ಹಾಗಾದ್ರೆ ಇದರಲ್ಲಿ ಯಾವೆಲ್ಲಾ ಅವಕಾಶಗಳು ಇರಲಿದೆ? ಮುಂದೆ ಓದಿ.
ಒಂದೇ ವೇದಿಕೆಯಲ್ಲಿ ಸಿಗಲಿದೆ ಸೇವೆ
OpenAI 2025 ಏಪ್ರಿಲ್‌ನಲ್ಲಿ ಶಾಪಿಂಗ್ ಹುಡುಕಾಟ ವೈಶಿಷ್ಟ್ಯ ಅಳವಡಿಸಿತ್ತು. ಬಳಕೆದಾರರು ವಸ್ತುಗಳ ಬಗ್ಗೆ ಬ್ರೌಸ್ ಮಾಡಬಹುದು, ವಿಮರ್ಶೆ ಓದಬಹುದು, ಫೋಟೋ ನೋಡಬಹುದು, ಆದರೆ ಅಂತಿಮ checkout ಹಂತವನ್ನು ಬೇರೆ ವ್ಯಾಪಾರಿ ವೆಬ್‌ಸೈಟ್‌ಗಳಲ್ಲೇ ಮಾಡಬೇಕಾಗುತ್ತಿತ್ತು. ಆದರೆ ಇದೀಗ ಎಲ್ಲಾ ಒಂದೇ ವೇದಿಕೆಯಲ್ಲಿ ನಡೆಯಲಿದ್ದು, ಇದರಿಂದ ಬಳಕೆದಾರರಿಗೆ ಭರ್ಜರಿ ಲಾಟರಿ ಸಿಕ್ಕಂತಾಗಿದೆ. ಈ ಹೊಸ ಹೆಜ್ಜೆ ಇದೀಗ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಹಾಗೇ ಭಾರತದಲ್ಲಿ ಕೂಡ ಶೀಘ್ರವೇ ಈ ಹೊಸ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಎಐ ತಂತ್ರಜ್ಞಾನ ಮತ್ತೊಮ್ಮೆ ಜಾಗತಿಕ ಇ-ಕಾಮರ್ಸ್ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications