Onion Price Hike: ಈರುಳ್ಳಿ ದರ ಏರಿಕೆ-ಅಂಕಿಅಂಶಗಳ ವಿವರ ಇಲ್ಲಿದೆ
Onion Price Hike: ಈರುಳ್ಳಿ ದರ ಏರಿಕೆಯಾಗಿದ್ದು, ಇದರಿಂದ ಬೆಳಗಾರರ ಮುಖದಲ್ಲಿ ಸಂತಸ ಮೂಡಿದಂತಾಗಿದೆ. ಮತ್ತೊಂದೆಡೆ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೆ.ಜಿ. ಈರುಳ್ಳಿ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಲ್ಲಿ ಕೆ.ಜಿ. ಈರುಳ್ಳಿ ದರ 100 ರೂಪಾಯಿ ಮುಟ್ಟುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ, ಯಶವಂತಪುರ ಎಪಿಎಂಸಿ ಸೇರಿ ಬೆಂಗಳೂರು ಮಹಾನಗರದ ಹಲವು ಮಾರುಕಟ್ಟೆಗಳಲ್ಲಿ ಹಳೇ ಈರುಳ್ಳಿ ಬೆಲೆ ಏರಿಕೆಯಾಗಿದೆ.

ಅದರಲ್ಲೂ ಮಹಾರಾಷ್ಟ್ರದಿಂದ ಪೂರೈಕೆ ಆಗುತ್ತಿರುವ ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ದರ ವಾರಗಳ ಹಿಂದೆ ಕ್ವಿಂಟಾಲ್‌ಗೆ 5,000 ರೂಪಾಯಿ ಇದ್ದು, ಇದೀಗ 7,500 ರೂಪಾಯಿ ಆಸುಪಾಸು ಬಂದಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿ ದರ 70-90 ರೂಪಾಯಿ ಇದೆ. ಇನ್ನೂ ಕೆಲವೇ ದಿನಗಳಲ್ಲಿ 100 ರೂಪಾಯಿ ಮುಟ್ಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರ, ನಾಗಪುರದಿಂದ ಬರುವ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲವು ವಾರಗಳ ಹಿಂದೆ ಈ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 5000 ರೂಪಾಯಿ ಇತ್ತು. ಇದೀಗ 7,200-7500 ರೂಪಾಯಿಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಅಕಾಲಿಕ ಮಳೆ ಹಿನ್ನೆಲೆ ಈರುಳ್ಳಿ ಬೆಳೆ ಹಾನಿಯಾಗಿದ್ದು, ಅವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಗಿದೆ.
ಇದೀಗ ಹಳೇ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಹೋಟೆಲ್ ಉದ್ಯಮವು ಹೆಚ್ಚು ದಿನ ಬಾಳಿಕೆ ಬರುವ ಈರುಳ್ಳಿಯನ್ನೇ ಕೇಳುತ್ತಿದೆ. ಆದ್ದರಿಂದ ಮಹಾರಾಷ್ಟ್ರದ ಈರುಳ್ಳಿ ಕಡೆಗೆ ಗಮನಹರಿಸಿದ್ದು, ಬೆಂಗಳೂರಿಗೆ ಬೇಕಾದ ಈರುಳ್ಳಿ ಮಹಾರಾಷ್ಟ್ರದಿಂದಲೇ ಪೂರೈಕೆ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಶವಂತಪುರದ ಎಪಿಎಂಸಿಗೆ ಮಹಾರಾಷ್ಟ್ರದಿಂದ ಈಗಾಗಲೇ 500 ಟ್ರಕ್ ಈರುಳ್ಳಿ ಪೂರೈಕೆ ಆಗಿದೆ. ಅಂದರೆ, 1,00,480 ಚೀಲ ಈರುಳ್ಳಿ ಯಶವಂತಪುರ ಎಪಿಎಂಸಿಗೆ ಪೂರೈಕೆ ಆಗಿದೆ. ಇದರಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5,000-5,500 ರೂಪಾಯಿ ದರದಲ್ಲಿ ಖರೀದಿ ಆಯಿತು. ನಾಗಪುರ ಭಾಗದ ಈರುಳ್ಳಿ ಹಳೇ ಈರುಳ್ಳಿ ಆಗಿದ್ದು, ಇವುಗಳನ್ನೇ ಹೋಟೆಲ್‌ನವರು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.
ರಾಜ್ಯದ ಹಲವು ಭಾಗಗಳಿಂದ ಒಟ್ಟು 485 ಟ್ರಕ್‌ಗಳಲ್ಲಿ ಈರುಳ್ಳಿ ಪೂರೈಕೆಯಾಗಿದೆ. ಇದು ಹೊಸ ಈರುಳ್ಳಿಯಾಗಿದ್ದು, ಕೂಡಲೇ ಬಳಸಬೇಕಾಗುತ್ತದೆ. ಆದ್ದರಿಮದ ಇದಕ್ಕೆ ಬೇಡಿಕೆ ಕಡಿಮೆಯಿದೆ. ಈ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5,000-5,500 ರೂಪಾಯಿ ವರೆಗೂ ಮಾರಾಟ ಆಗಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications