ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಒಯು ಮಾನ್ಯತೆ ರದ್ದು : ಏಕೆ, ಏನು, ಮುಂದೇನು?

By ಭಾಸ್ಕರ್ ಭಟ್
|
Google Oneindia Kannada News

2012-13ರ ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಒಯು) ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿ ಯುಜಿಸಿ ಆದೇಶ ಹೊರಡಿಸಿದೆ. ಈ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಇತ್ತ ವಿಶ್ವವಿದ್ಯಾಲಯ ಕಾನೂನು ಹೋರಾಟಕ್ಕೆ ಸಿದ್ಧತೆ ಆರಂಭಿಸಿದೆ.

ಜೂನ್ 18ರ ಗುರುವಾರ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೆಎಸ್‌ಒಯು ಕೋರ್ಸ್‌ಗಳ ಮಾನ್ಯತೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ವ್ಯಾಪ್ತಿ ಮೀರಿ ಚಟುವಟಿಕೆ ವಿಸ್ತರಣೆ, ನಿಯಮ ಉಲ್ಲಂಘಿಸಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ ಆರಂಭಿಸಿರುವ ಕಾರಣ ಮಾನ್ಯತೆ ರದ್ದುಗೊಳಿಸಲಾಗಿದೆ.

ಯುಜಿಸಿ ನೀಡಿರುವ ವಿವರಣೆಗಳು : ಕೆಎಸ್‌ಒಯು ಮಾನ್ಯತೆ ರದ್ದುಪಡಿಸಿ ಆದೇಶ ಹೊರಡಿಸಿರುವ ಯುಜಿಸಿ ಕಾರ್ಯದರ್ಶಿ ಜಸ್ಪಾಲ್‌ ಎಸ್‌. ಸಂಧು ಅವರು, ಯುಜಿಸಿ ದೂರ ಶಿಕ್ಷಣದ ಭೌಗೋಳಿಕ ವ್ಯಾಪ್ತಿಗೆ ಸಂಬಂಧಿಸಿದಂತೆ 2013ರ ಜೂನ್‌ 27ರಂದು ಹೊರಡಿಸಿರುವ ಆದೇಶವನ್ನು ಕೆಎಸ್‌ಒಯು ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದಾರೆ. [ಹೊರ ರಾಜ್ಯಗಳಲ್ಲಿ ಕೆಎಸ್ ಒಯು ಕೋರ್ಸಿಗೆ ಪ್ರವೇಶವಿಲ್ಲ]

mysuru

ಕೆಎಸ್‌ಒಯು ತನ್ನ ವ್ಯಾಪ್ತಿಯನ್ನು ಮೀರಿ ಹೊರ ರಾಜ್ಯಗಳಲ್ಲಿ ಖಾಸಗಿ ಸಂಸ್ಥೆಗಳು, ಕೋಚಿಂಗ್‌ ಕೇಂದ್ರಗಳ ಸಹಯೋಗದಲ್ಲಿ ದೂರ ಶಿಕ್ಷಣದಡಿ ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿದೆ. ಮಾನವ ಸಂಪನ್ಮೂಲ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ನಡೆಸುತ್ತಿದೆ. ಇವುಗಳಿಗೆ ಯುಜಿಸಿ ಮಾನ್ಯತೆ ಇಲ್ಲ. [ಕೆಎಸ್ ಒಯು ಮಾನ್ಯತೆ ರದ್ದು]

ಶೋಕಾಸ್ ನೋಟಿಸ್ : ಯುಜಿಸಿ ನಿಯಮಗಳನ್ನು ಕೆಎಸ್‌ಒಯು ಗಾಳಿಗೆ ತೂರಿದೆ ಎಂದು 2011ರ ಜೂನ್‌ 10ರಂದು ಯುಜಿಸಿ ಶೋಕಾಸ್ ನೋಟಿಸ್ ಜಾರಿಮಾಡಿತ್ತು. ಈ ನೋಟಿಸ್‌ಗೆ ವಿವಿ ನೀಡಿದ ಉತ್ತರದ ಆಧಾರದ ಮೇಲೆಯೇ 2012-12ರ ಸಾಲಿನಿಂದ ಕೆಎಸ್‌ಒಯು ಕೋರ್ಸ್‌ಗಳ ಮಾನ್ಯತೆಗಳನ್ನು ರದ್ದುಪಡಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ವರದಿ ಕೇಳಿತ್ತು : 2009ರಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಯುಜಿಸಿ ಮಾನದಂಡ ಉಲ್ಲಂಘನೆ ಮಾಡಿ ಎಂ.ಫಿಲ್ ಮತ್ತು ಪಿಎಚ್‌ಡಿ ಕಾರ್ಯಕ್ರಮ ನಡೆಸುವ ವಿವಿ ಕ್ರಮವನ್ನು ಪ್ರಶ್ನಿಸಿ ವರದಿ ನೀಡುವಂತೆ ಕೇಳಿತ್ತು. ಆದರೆ, ಕೆಎಸ್‌ಒಯು ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂಬ ಆರೋಪವೂ ಇದೆ.

ಸುಪ್ರೀಂ ಕೋರ್ಟ್ ತೀರ್ಪು : ಸುಪ್ರೀಂಕೋರ್ಟ್ ಛತ್ತೀಸ್‌ಗಢ ರಾಜ್ಯ ಸರ್ಕಾರದ ಪ್ರಕರಣದಲ್ಲಿ ನೀಡಿದ್ದ ತೀರ್ಪಿನ ಅನ್ವಯ ಯುಜಿಸಿ ದೂರ ಶಿಕ್ಷಣದ ಭೌಗೋಳಿಕ ವ್ಯಾಪ್ತಿಯ ಮಾರ್ಗಸೂಚಿ ರಚಿಸಿತ್ತು. ಮುಕ್ತ ವಿಶ್ವವಿದ್ಯಾಲಯಗಳು ಈ ವ್ಯಾಪ್ತಿ ಮೀರಿ ಕೋರ್ಸ್‌ಗಳನ್ನು ಆರಂಭಿಸುವಂತಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿತ್ತು.

UGC

ವಿವಿಯಿಂದ ಕಾನೂನು ಹೋರಾಟ : ಕೆಎಸ್‌ಒಯು ಕೋರ್ಸ್‌ಗಳ ಮಾನ್ಯತೆ ರದ್ದುಪಡಿಸಿರುವ ಯುಜಿಸಿ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ವಿವಿ ಸಿದ್ಧವಾಗಿದೆ, ನಾವು ಕಾನೂನು ಹೋರಾಟ ನಡೆಸುತ್ತೇವೆ, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಎಸ್‌ಒಯು ಕುಲಪತಿ ಎಂ.ಜಿ. ಕೃಷ್ಣನ್‌ ಹೇಳಿದ್ದಾರೆ.

ಯುಜಿಸಿ ನಿಯಮಗಳನ್ನು ವಿವಿ ಉಲ್ಲಂಘನೆ ಮಾಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಮುಕ್ತ ವಿವಿ ಭೌಗೋಳಿಕ ವ್ಯಾಪ್ತಿ ನಿರ್ಧರಿಸಲು ಯುಜಿಸಿಗೆ ಅಧಿಕಾರವಿಲ್ಲ. ಇತರ ಮುಕ್ತ ವಿವಿಗಳಿಗೆ ಅನ್ವಯವಾಗದ ನಿಯಮಗಳು ಕೆಎಸ್‌ಒಯುಗೆ ಏಕೆ? ಎಂದು ಕೃಷ್ಣನ್ ಪ್ರಶ್ನಿಸಿದ್ದಾರೆ.

ಪ್ರವೇಶ ಪ್ರಕ್ರಿಯೆ ಸ್ಥಗಿತ : ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಹೊರ ರಾಜ್ಯಗಳಲ್ಲಿ ಕೆಎಸ್‌ಒಯು ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ವಿವಿಗೆ ಪತ್ರಬರೆದಿದೆ. ವಿಶ್ವವಿದ್ಯಾಲಯ ಹೊರ ರಾಜ್ಯದಲ್ಲಿ ನಡೆಸುತ್ತಿರುವ ಎಲ್ಲ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ವಿವಿಗೆ ಇಲಾಖೆ ಬರೆದ ಪತ್ರದಲ್ಲಿ ಸೂಚನೆ ನೀಡಲಾಗಿದೆ.

English summary
University Grants Commission (UGC) has withdrawn its recognition to the academic programmes run by the Karnataka State Open University (KSOU), Mysuru. The courses offered beyond 2012-13 stands De-recognized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X