Get Updates
Get notified of breaking news, exclusive insights, and must-see stories!

ಓಣಂ ವಿಶೇಷ: ಕರ್ನಾಟಕದಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ

ಬೆಂಗಳೂರು ಆಗಸ್ಟ್ 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಕ್ಕೆ ವಿಶೇಷ ಸೇವೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದೆ. ವಿಶೇಷ ಅಂತಾರಾಜ್ಯ ಸೇವೆಗಳು ಆಗಸ್ಟ್ 26 ರಿಂದ ಸೆಪ್ಟೆಂಬರ್ 11 ರವರೆಗೆ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಿಂದ ಕೇರಳದ ವಿವಿಧ ನಗರಗಳಿಗೆ ತೆರಳುವ ಮತ್ತು ಹಿಂದಿರುಗುವ ಸಾಧ್ಯತೆಯಿದೆ.

ಬೆಂಗಳೂರು ಸೆಂಟ್ರಲ್‌ನ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಪ್ರಕಾರ, ಈ ವಿಶೇಷ ಸೇವೆಗಾಗಿ 20 ಕ್ಕೂ ಹೆಚ್ಚು ಬಸ್‌ಗಳನ್ನು ನಿಗದಿಪಡಿಸಲಾಗಿದೆ. ವಿಶೇಷ ಬಸ್ ಸೇವೆಗಳು ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಡುವೆ ಕಣ್ಣೂರು, ಎರ್ನಾಕುಲಂ, ಪಾಲ್ಘಾಟ್, ಕೋಝಿಕ್ಕೋಡ್, ತ್ರಿಶೂರ್ ಮತ್ತು ತಿರುವನಂತಪುರಂಗಳಿಗೆ ಕಾರ್ಯನಿರ್ವಹಿಸಲಿವೆ. ಬೇಡಿಕೆ ಮತ್ತಷ್ಟು ಹೆಚ್ಚಾದರೆ ಇನ್ನಷ್ಟು ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು. ಪ್ರಯಾಣಿಕರು ಆನ್‌ಲೈನ್‌ನಲ್ಲಿ www.ksrtc.in ಅಥವಾ ಫ್ರಾಂಚೈಸಿ ರಿಸರ್ವೇಶನ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.

ಸಾಮಾನ್ಯ ದರಕ್ಕಿಂತ ಶೇ 10-20 ಹೆಚ್ಚು ಶುಲ್ಕ

ಸಾಮಾನ್ಯ ದರಕ್ಕಿಂತ ಶೇ 10-20 ಹೆಚ್ಚು ಶುಲ್ಕ

ವಾರಾಂತ್ಯ ಮತ್ತು ಓಣಂ ಸೀಸನ್‌ನಲ್ಲಿ ಅಂತಾರಾಜ್ಯ ಬಸ್‌ಗಳ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ಹೆಚ್ಚಿಸಿದೆ. ಈ ವರ್ಷದ ಸೆಪ್ಟೆಂಬರ್ 2 ರಿಂದ 12 ರವರೆಗೆ ಇರುವ ಓಣಂ ಸೀಸನ್‌ನಲ್ಲಿ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಸೀಸನ್‌ನಲ್ಲಿ ಪರಿಚಯಿಸಲಾದ ಹೆಚ್ಚುವರಿ ಬಸ್‌ಗಳಿಗೆ ಪ್ರಯಾಣಿಕರು ಕೌಂಟರ್‌ ಬುಕಿಂಗ್ ಅಥವಾ ಡಿಜಿಟಲ್ ಬುಕಿಂಗ್ ಅನ್ನು ಅವಲಂಬಿಸಿ ಸಾಮಾನ್ಯ ದರಕ್ಕಿಂತ ಶೇ 10-20 ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಎಸಿ, ಎಕ್ಸ್‌ಪ್ರೆಸ್ ಮತ್ತು ಡಿಲಕ್ಸ್ ಸೇವೆಗಳಿಗೆ ಶುಲ್ಕಗಳು ಅನ್ವಯಿಸುತ್ತವೆ.

ಸಾಮಾನ್ಯ ಅಂತರ-ರಾಜ್ಯ ಬಸ್‌ಗಳಿಗೆ, Kerala State Road Transport Corporation (KSRTC) ಕೌಂಟರ್‌ ಬುಕಿಂಗ್‌ಗೆ ಶೇ 10ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ. ಈ ಅವಧಿಯಲ್ಲಿ ಆನ್‌ಲೈನ್ ಬುಕಿಂಗ್‌ಗೆ ಶೇ 30 ರಿಯಾಯಿತಿ ನೀಡದಿರಲು ನಿರ್ಧರಿಸಿದೆ. ಎಕ್ಸ್‌ಪ್ರೆಸ್ ಮತ್ತು ಡಿಲಕ್ಸ್ ಸೇವೆಗಳಿಗೆ, ಪ್ರಯಾಣಿಕರು ಶೇ 5 ರಿಂದ 10 ಹೆಚ್ಚು ಪಾವತಿಸಬೇಕಾಗುತ್ತದೆ. ಆಗಸ್ಟ್‌ನಿಂದ ವಾರಾಂತ್ಯದಲ್ಲಿ ಹೆಚ್ಚಿನ ಶುಲ್ಕ ವಿಧಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಕೇರಳ-ಕರ್ನಾಟಕಕ್ಕೆ ಬಸ್ ವ್ಯವಸ್ಥೆ

ಕೇರಳ-ಕರ್ನಾಟಕಕ್ಕೆ ಬಸ್ ವ್ಯವಸ್ಥೆ

ಓಣಂ ಕೇರಳದಲ್ಲಿ ಆಚರಿಸಲಾಗುವ ಹತ್ತು ದಿನಗಳ ಹಬ್ಬವಾಗಿದೆ. ಸಾವಿರಾರು ಮಲಯಾಳಿಗಳು ಕರ್ನಾಟಕದಾದ್ಯಂತ ವಿಶೇಷವಾಗಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಈ ಹಬ್ಬಕ್ಕಾಗಿ ಮನೆಗೆ ಹಿಂದಿರುಗುತ್ತಾರೆ. ಪ್ರತಿ ಋತುವಿನಲ್ಲಿ, ರೈಲುಗಳು, ಬಸ್ಸುಗಳು ಮತ್ತು ವಿಮಾನಗಳು ಸಹ ಸಂಪೂರ್ಣವಾಗಿ ಬುಕ್ ಮಾಡಲ್ಪಡುತ್ತವೆ. ಕೋವಿಡ್-19 ಭೀತಿಯನ್ನು ಕಡಿಮೆ ಮಾಡಲು, ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಮತ್ತು ರಶ್ ಕಡಿಮೆ ಮಾಡಲು ಎರಡೂ ರಾಜ್ಯಗಳು ಬಸ್‌ಗಳ ಆವರ್ತನವನ್ನು ಹೆಚ್ಚಿಸಲು ನೋಡುತ್ತಿವೆ.

ಸೆಪ್ಟೆಂಬರ್ 2 ರಿಂದ 12 ರವರೆಗೆ ಓಣಂ ಸಂಭ್ರಮ

ಸೆಪ್ಟೆಂಬರ್ 2 ರಿಂದ 12 ರವರೆಗೆ ಓಣಂ ಸಂಭ್ರಮ

ಕೇರಳದಲ್ಲಿ ಅತಿದೊಡ್ಡ ಹಬ್ಬ ದಕ್ಷಿಣ ಭಾರತದ ರಾಜ್ಯಗಳು ತಮ್ಮ ಸಾಂಸ್ಕೃತಿಕ, ಸಾಂಪ್ರದಾಯಿಕ ಭಿನ್ನತೆಯಿಂದಾಗಿಯೇ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಹಳ ಪ್ರಸಿದ್ಧಿ ಪಡೆದಿವೆ. ಕರ್ನಾಟಕದ ನವರಾತ್ರಿ (ದಸರಾ), ಯುಗಾದಿ, ಕೇರಳದ ಓಣಂ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದ ಹಬ್ಬ ಹಾಗೂ ಆಚರಣೆಗಳು ಬೇರೆ ರಾಜ್ಯಗಳಿಗಿಂತ ಬಹಳ ವಿಭಿನ್ನವಾಗಿವೆ. ಸೆಪ್ಟೆಂಬರ್ 2 ರಿಂದ ಕೇರಳದಲ್ಲಿ ಓಣಂ ಹಬ್ಬ ಶುರುವಾಗಿದೆ. ಮಲಯಾಳಿಗರಿಗೆ ಓಣಂ ಬಹಳ ಪ್ರಮುಖ ಹಾಗೂ ಅತಿದೊಡ್ಡ ಹಬ್ಬ. ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬವಾದ ಯುಗಾದಿಯನ್ನು ಹೇಗೆ ಆಚರಿಸುತ್ತಾರೋ ಅದೇರೀತಿ ಮಲಯಾಳಿಗರಿಗೆ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಸಂದರ್ಭದಲ್ಲಿ ಆಚರಿಸಲಾಗುವ ಮೊದಲ ಹಬ್ಬ ಓಣಂ. ಸೆಪ್ಟೆಂಬರ್ 2 ರಿಂದ 12 ರವರೆಗೆ ಓಣಂ ಸಂಭ್ರಮಾಚರಣೆ ಇರುತ್ತದೆ.

ಮಲಯಾಳಂ ಸಮುದಾಯಕ್ಕೆ ವಿಶೇಷ ಹಬ್ಬ

ಮಲಯಾಳಂ ಸಮುದಾಯಕ್ಕೆ ವಿಶೇಷ ಹಬ್ಬ

ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್​- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ತಿರು-ಓಣಂ ಅಥವಾ ತಿರುವೋಣಂ, ಓಣಂ ಎಂದು ಕರೆಯುತ್ತಾರೆ. ವರ್ಷದ ಮೊದಲ ಪೈರು ಅಥವಾ ಬೆಳೆಯ ಖುಷಿಯನ್ನು ಓಣಂ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ, ರೈತ ಸಮುದಾಯ ಸೇರಿದಂತೆ ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಈ ಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ವಿಶ್ವದೆಲ್ಲೆಡೆ ಇರುವ ಮಲಯಾಳಂ ಸಮುದಾಯದವರು ಓಣಂ ಹಬ್ಬದಂದು ರಾಜ ಮಹಾಬಲಿ (ಬಲಿ ಚಕ್ರವರ್ತಿ) ಓಣಂ ಹಬ್ಬದಂದು ಪಾತಾಳ ಲೋಕದಿಂದ ಭೂಮಿಗೆ ವಾಪಾಸ್ ಬರುತ್ತಾನೆ ಎಂದು ನಂಬುತ್ತಾರೆ. ಕರ್ನಾಟಕದಲ್ಲಿ ದಸರಾವನ್ನು ಹೇಗೆ ವಿಶೇಷವಾಗಿ ಆಚರಿಸುತ್ತೀವೋ ಅದೇ ರೀತಿ ಕೇರಳದಲ್ಲಿ ಓಣಂ ಆಚರಿಸಲಾಗುತ್ತದೆ.

Recommended Video

      ಇಂಡೋ-ಪಾಕ್ ಆಟಗಾರರ ಮಾತಿನ ಸಮರ | Asia Cup 2022 | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+