ಹಬ್ಬದ ದಿನವೂ ಡಿಕೆಶಿಗೆ 'ಇಡಿ ಡ್ರಿಲ್' : ಕುಮಾರಸ್ವಾಮಿ ಟ್ವೀಟ್

Recommended Video

      ಮತ್ತೆ ಡಿಕೆಶಿ ಬೆಂಬಲಕ್ಕೆ ನಿಂತ ಕುಮಾರಣ್ಣ..? | DK Shivakumar | Oneindia Kannada

      ಬೆಂಗಳೂರು, ಸೆ 2: ಗಣೇಶ ಚತುರ್ಥಿಯ ದಿನದಂದೂ, ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದಕ್ಕೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

      ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ಡಿಕೆ, " ಗೌರಿಗಣೇಶ ಹಿಂದೂಗಳ ಬಹುಮುಖ್ಯವಾದ ಹಬ್ಬ. ಈ ಹಬ್ಬವನ್ನು ಆಚರಿಸಲು ಒಂದು ದಿನದ ಅವಕಾಶವನ್ನು ಡಿ ಕೆ ಶಿವಕುಮಾರ್ ಕೇಳಿದ್ದರು. ಆದರೆ, ಇಡಿ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ. ಇದು ಪ್ರತೀಕಾರದ ವರ್ತನೆ ಅಲ್ಲದೆ ಇನ್ನೇನು" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

      ಇದಕ್ಕೂ ಮೊದಲು ಎಚ್ಡಿಕೆ ಹಬ್ಬದ ಶುಭಾಶಯವನ್ನು ಕೋರಿದ್ದರು." ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗೋಣ. ವಿಘ್ನ ವಿನಾಶಕನು ಎಲ್ಲರ ಬಾಳಲ್ಲೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ" ಎಂದು ಎಚ್ಡಿಕೆ ಟ್ವೀಟ್ ಮಾಡಿದ್ದರು.

      On Festival Day ED Enquirty Continued To DK Shivakumar: HD Kumaraswamy Tweet

      ಇಡಿ ವಿಚಾರಣೆಗೆ ತೆರಳುವ ಮುನ್ನಾ ಎದುರಾದ ಮಾಧ್ಯಮಗಳ ಎದುರು ಮಾತನಾಡಿದ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಗದ್ಗದಿತರಾದರು. "ಇಂದು ನಮ್ಮ ತಂದೆಯವರಿಗೆ ಹಿರಿಯರಿಗೆ ಪೂಜೆ ಮಾಡುವ ದಿನ. ಆದರೆ, ಅವರಿಗೆ ಇಂದು ಎಡೆ ಸಹ ಇಡಲು ಆಗುತ್ತಿಲ್ಲ, ಇವರು ಅವಕಾಶ ನೀಡಲಿಲ್ಲ, ನಾನೂ ನನ್ನ ತಮ್ಮ ಇಬ್ಬರೂ ಸಹ ಇಂದು ಇಲ್ಲೇ ಇದ್ದೇವೆ " ಎಂದುಡಿ ಕೆ ಶಿವಕುಮಾರ್ ಗದ್ಗಿತರಾದರು.

      "ನನ್ನ ಮಗನ ಏಳಿಗೆಯನ್ನು ನೊಡಲಾರದೆ ಬಿಜೆಪಿಯವರು ಅವನ ಮೇಲೆ ತಂತ್ರ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗುವುದಿಲ್ಲ" ಎಂದು ಡಿಕೆಶಿ ತಾಯಿ ಗೌರಮ್ಮ ಬಿಜೆಪಿಗೆ ಶಾಪ ಹಾಕಿದ್ದರು.

      ಡಿ.ಕೆ.ಶಿವಕುಮಾರ್ ಅವರ ತಂದೆ ಸಮಾಧಿಗೆ ಎಡೆ ಇಡುವ ಕಾರ್ಯವನ್ನು ಡಿಕೆ ಶಿವಕುಮಾರ್ ಪುತ್ರ ನಡೆಸಿಕೊಟ್ಟರು. ಪ್ರತಿವರ್ಷ ಡಿಕೆ.ಶಿವಕುಮಾರ್ ಮತ್ತು ಅವರ ಸಹೋದರರು ಈ ಕಾರ್ಯ ನಡೆಸಿಕೊಡುತ್ತಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+