ಹಳೇ ಹುಬ್ಬಳ್ಳಿ ಗಲಭೆ: "ಅಲ್ಲಿ ಕೊಲೆ, ಪೊಲೀಸ್ ಠಾಣೆಗೆ ಬೆಂಕಿ ಹಾಕಿಲ್ಲ; ಸಣ್ಣ ಗಲಾಟೆ"
Old Hubli riot case: ರಾಜ್ಯ ಕಾಂಗ್ರೆಸ್ ಸರ್ಕಾರವು ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದ ಕೇಸ್‌ಗಳನ್ನು ವಾಪಸ್ ಪಡೆದಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣ ಹಿಂಪಡೆದ ವಿಚಾರಕ್ಕೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರ ಮುಂದುವರಿದಿದೆ. ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆಯು ಪೂರ್ವ ನಿಯೋಜಿತ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ. ಈ ನಡುವೆ ಕಾಂಗ್ರೆಸ್ ನಾಯಕ ನೀಡಿರುವ ಹೇಳಿಕೆ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ. ಕಾಂಗ್ರೆಸ್ ನಾಯಕ ಹಳೇ ಹುಬ್ಬಳ್ಳಿಯಲ್ಲಿ ಯಾವ ಕೊಲೆ ಆಗಿಲ್ಲ, ದೇಶ ದ್ರೋಹದ ಕೆಲಸವೂ ಆಗಿಲ್ಲ ಎಂದಿದ್ದಾರೆ.
ಇರುವ ವಿವಾದಗಳ ನಡುವೆ ರಾಜ್ಯ ಕಾಂಗ್ರೆಸ್ ಸರ್ಕರದ ಕೆಲವು ನಿರ್ಧಾರಗಳು ತೀವ್ರ ಚರ್ಚೆಗೆ ಕಾರಣವಾಗಿದೆ. ಇದೀಗ ಧಾರವಾಡದ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಹಳೇ ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಇದು ಇದೀಗ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕೆಲವು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ಸಮರ್ಥನೆಗೆ ಬಳಸುತ್ತಿರುವ ಹೇಳಿಕೆಗಳೂ ವಿವಾದಕ್ಕೆ ಕಾರಣವಾಗಿದೆ.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ - ಧಾರವಾಡ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಅಂಜುಮನ್ ಇಸ್ಲಾಂ ಸಮಿತಿ ಉಪಾಧ್ಯಕ್ಷ ಅಲ್ತಾಫ್ ಹಳ್ಳೂರು ಮಾತನಾಡಿದ್ದಾರೆ. ನಾವು ಈ ಪ್ರಕರಣವನ್ನು ಯಾಕೆ ಎನ್‌ಎಐ ಕೊಟ್ರೀ ಅಂತಾ ನಾವ ಕೇಳಿದ್ವಿ. ಅಲ್ಲಿ ನಡೆದಿದ್ದು ಸಣ್ಣ ಗಲಾಟೆಯಾಗಿದ್ದು, ಯಾವುದೇ ರೀತಿಯ ಪೊಲೀಸ್ ಠಾಣೆಗಳನ್ನು ಸುಟ್ಟಿಲ್ಲ. ಮಹ್ಮದ್ ಪೈಗಂಬರ್ ಅವರಿಗೆ ಅಪಮಾನ ಮಾಡಿದ ಕೆಲಸ ಆಗಿತ್ತು. ಅಮಾಯಕರನ್ನು ಬಂಧನ ಮಾಡಿದ್ರು ಕೂಲಿ ಮಾಡಿಕೊಂಡವರು ಅಮಾಯಕರು ಬಂಧನ ಮಾಡಲಾಯಿತು.ಅವತ್ತು ಗಲಾಟೆಯಾದಾಗ ಹುಡಗರನ್ನು ಪೊಲೀಸರಿಗೆ ಕೊಟ್ಟಿದ್ದೇ ಮುಸ್ಲಿಂ ಸಮುದಾಯದ ಮುಖಂಡರು ಎಂದಿದ್ದಾರೆ.
ದಿನಗೂಲಿ ಮಾಡೋ ಯುವಕರನ್ನು ಅರೆಸ್ಟ್ ಮಾಡಲಾಗಿತ್ತು. ಅಲ್ಲದೇ ಬೇರೆ ರಾಜ್ಯದವರನ್ನು ಅರೆಸ್ಟ್ ಮಾಡಿದ್ದರು. ಈ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಅಮಾಯಕರನ್ನು ಅರೆಸ್ಟ್ ಮಾಡಲಾಗಿತ್ತು. ಕಳೆದ ಎರಡು ವರ್ಷದಿಂದ ಅವರು ಜೈಲಲ್ಲಿ ಇದ್ದರು. ಅಂಜುಮನ್ ಸಂಸ್ಥೆ ಸೇರಿ ಅನೇಕ ಸಂಘಟನೆ ಕೇಸ್ ವಾಪಸ್ ಪಡೆಯಲು ಮನವಿ ಕೊಟ್ಟಿದ್ವಿ. ಇದೀಗ ಎನ್‌ಐಎ ಕೇಸ್ ವಾಪಸ್ ಪಡೆದಿರೋ ಮಾಹಿತಿ ಇದೆ. ಬಿಜೆಪಿ ಹೋರಾಟ ಮಾಡಲು,ಬರೀ ಹಿಂದೂ - ಮುಸ್ಲಿಂ ವಿಭಜಿಸುವ ಕೆಲಸ ಆಗಿದೆ. ಗಲಭೆಯಲ್ಲಿ ಕೇವಲ 2 ರಿಂದ ಮೂರು ಪರ್ಸೆಂಟ್ ಜನ ಗಲಾಟೆ ಮಾಡಿದವರು. ಉಳಿದವರು ಅಮಾಯಕರು ಎಂದರು. ಸರ್ಕಾರದ ನಿರ್ಧಾರ ಸ್ವಾಗತ ಎಂದಿದ್ದಾರೆ.
13ಕ್ಕೆ ಹುಬ್ಬಳ್ಳಿಯಲ್ಲಿ ಹೋರಾಟ
ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇದೇ 13ರಂದು ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ. ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿದ್ದಾರೆ. ಈ ಸರ್ಕಾರ ಏನು ಹೇಳಲು ಹೊರಟಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಒಂದೂವರೆ ಆಡಳಿತ ನೋಡಿದರೆ, ದುರ್ದೈವದ ಘಟನೆ ಹೊರಗೆ ಬರ್ತಿವೆ ಎಂದಿದ್ದಾರೆ.
ಹುಬ್ಬಳ್ಳಿ ಗಲಭೆಯ ಕೇಸ್ ವಾಪಸ್ ಪಡೆಯುತ್ತಿರುವುದು ದುರ್ದೈವ. ಈ ಗಲಭೆ ಪೂರ್ವ ನಿಯೋಜಿತ ಕೃತ್ಯ. ಕಾಂಗ್ರೆಸ್ ಸರ್ಕಾರ ದೇಶದ ಜನತೆಗೆ ಏನ ಹೇಳೋಕೆ ಹೊರಟಿದೆ ಎಂದು ಪ್ರಶ್ನಿಸಿದ್ದಾರೆ. ಅಂದು ಗಲಭೆಕೋರರು ಕಲ್ಲು ಹೊಡೆದರೂ,ಪೊಲೀಸ್ ಠಾಣೆಗೆ ನುಗ್ಗಿದ್ದರು. ನೀವು ಅಂತವರನ್ನು ನಿರಪರಾಧಿ ಮಾಡಲು ಹೊರಟಿದ್ದೀರಿ. ಈ ಘಟನೆ ಖಂಡಿಸಿ ಮೊದಲ ಹಂತದ ಹೋರಾಟ ಮಾಡ್ತೀವಿ. 13 ರಂದು ಹುಬ್ಬಳ್ಳಿಯಲ್ಲಿ ಹೋರಾಟ ಮೊದಲ ಹಂತದ ಹೋರಾಟ ಹುಬ್ಬಳ್ಳಿಯಿಂದಲೇ ಆರಂಭ ಮಾಡುವುದಾಗಿ ಹೇಳಿದ್ದಾರೆ.
ಗಲಭೆ ಕೋರರ ಹಿನ್ನಲೆ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ನಿರ್ಧಾರ ಪೊಲೀಸ್ ಇಲಾಖೆ ಅಧೋಗತಿಗೆ ತಗೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಪೊಲೀಸರ ಮೇಲೆ ಕಲ್ಲು ತೂರಿದವರನ್ನು ಹೊರಗೆ ಬಿಡುವುದು ಎಂದರೆ ಅರ್ಥವೇನು. ಇದು ಮುಸ್ಲಿಂ ಓಲೈಕೆಯ ಪರೋಮಚ್ಚ ಹಂತ. ಕ್ಯಾಬಿನೆಟ್‌ನಲ್ಲಿ ತಗೆದುಕೊಂಡು ತೀರ್ಮಾನವನ್ನು ನಾವು ವಿರೋಧಿಸುತ್ತೇವೆ. ಈ ಸಂಬಂಧ ನಾವು ರಾಜ್ಯದಾದ್ಯಾಂತ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications