Jog Falls Tour Package: ಕರ್ನಾಟಕ ಇಲ್ಲಿಂದ ಜೋಗಕ್ಕೆ ವೇಗಧೂತ ಬಸ್ ವ್ಯವಸ್ಥೆ: ಟಿಕೆಟ್ ದರ, ವಿವರ
Jog Falls Tour Package: ಉತ್ತರ ಕರ್ನಾಟಕ ಭಾಗದ ಹಲವು ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಒದಗಿಸುತ್ತಿರುವ ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾವೇರಿ ಜಿಲ್ಲೆಯಿಂದ ವಿಶೇಷ ಟೂರ್ ಪ್ಯಾಕೇಜ್ (Tour Package) ಘೋಷಣೆ ಮಾಡಿದೆ. ನಿರಂತರ ಮಳೆಯಿಂದ ವಿಶ್ವ ವಿಖ್ಯಾತ ಜೋಗ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುವವರಿಗೆ ಇದು ಸೂಕ್ತ ಕಾಲ ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ 'ವೇಗದೂತ ಸಾರಿಗೆ ಸೇವೆ' ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲಿಂದ, ನಿಲ್ದಾಣ ಹಾಗೂ ಸಮಯದ ಪೂರ್ಣ ಮಾಹಿತಿ ಇಲ್ಲಿದೆ.
ಮಧ್ಯಹ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಜಿಲ್ಲೆಯಾಗಿರುವ ಏಲಕ್ಕಿ ಕಂಪನಿ ಹಾವೇರಿ ವಿಭಾಗದಿಂದ ಜೋಗ ಫಾಲ್ಸ್ ಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ವಿಶೇಷವೆಂದರೆ ಜಿಲ್ಲೆಯ ಎರಡು ಭಾಗಗಳಿಂದ ಶಿವಮೊಗ್ಗ ಜಿಲ್ಲೆ ಜೋಗ ಫಾಲ್ಸ್‌ಗೆ ಬಸ್ ಕಾರ್ಯಾಚರಣೆ ಮಾಡಲಿವೆ. ಇವು ಪ್ರತಿ ಭಾನುವಾರ ಮತ್ತು ರಜಾದಿನಗಳಂದು ಪ್ರಯಾಣಿಕರಿಗೆ ಸೇವೆ ನೀಡಲಿವೆ.

ಇದೇ ಜುಲೈ 13ರಿಂದ ಜೋಗ್ ಜಲಪಾತ ಪ್ರವಾಸ ಪ್ರಯಾಣ ಸೇವೆ ಆರಂಭವಾಗಲಿದೆ. ಪ್ರತಿ ಭಾನುವಾರ ಮತ್ತು ರಜಾ ದಿನಗಳಂದು ಹಾವೇರಿ ಬಸ್ ನಿಲ್ದಾಣ ಹಾಗೂ ರಾಣೇಬೆನ್ನೂರು ನಿಲ್ದಾಣದಿಂದ ಜೋಗ ಫಾಲ್ಸ್ ಗೆ ವೇಗದೂತ ಬಸ್ ಓಡಾಡಲಿವೆ. ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳುವಂತೆ NWKRTC ವಿಭಾಗದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಬಸ್ ಬಿಡುವ ಸಮಯ, ಟಿಕೆಟ್ ದರ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವೇಗದೂತ ಬಸ್ ಜುಲೈ 13ರಂದು ಹಾವೇರಿಯಿಂದ ಬೆಳಗ್ಗೆ 08 ಗಂಟೆಗೆ ಬಿಡಲಿದೆ. ಮಧ್ಯಾಹ್ನ 12 ಗಂಟೆಗೆ ಜೋಗಕ್ಕೆ ತಲುಪಲಿದೆ. ಮರಳಿ ಅಲ್ಲಿಂದ ಸಂಜೆ 4 ಗಂಟೆಗೆ ಬಿಡಲಿದ್ದು, ಅಲ್ಲಿಂದ 7.30ಕ್ಕೆ ಹಾವೇರಿ ತಲುಪುತ್ತದೆ. ಶಿರಸಿ, ಸಿದ್ಧಾಪುರ ಮಾರ್ಗವಾಗಿ ಬಸ್ ತೆರಳಲಿದ್ದು, ಬೆಳಗ್ಗೆ ಹೋಗುವಾಗ ಮಾರ್ಗ ಮಧ್ಯ ಶಿರಸಿ ಮಾರಿಕಾಂಬ ಸನ್ನಿಧಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಅಲ್ಲಿಂದ ನೇರ ಜೋಗಕ್ಕೆ ಹೋಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ರಾಣಿಬೆನ್ನೂರು ಬಸ್ ನಿಲ್ದಾಣದಿಂದ ಜೋಗ ಜಲಪಾತಕ್ಕೆ ಜುಲೈ 13ರಂದು ಬೆಳಗ್ಗೆ 08 ಗಂಟೆಗೆ ಹೊರಟು ಮಧ್ಯಾಹ್ನ 11.30ಕ್ಕೆ ಜೋಗಕ್ಕೆ ತಲುಪಲಾಗುತ್ತದೆ. ಮರಳಿ ಅಲ್ಲಿಂದ ಸಂಜೆ 4 ಗಂಟೆಗೆ ಬಿಟ್ಟು ರಾತ್ರಿ 7.30 ಗಂಟೆಗೆ ರಾಣಿಬೆನ್ನೂರು ಬಸ್ ನಿಲ್ದಾಣಕ್ಕೆ ಬರಲಾಗುವುದು. ಈ ಬಸ್ ಹಿರೇಕೆರೂರು, ಶಿರಾಳಕೊಪ್ಪ, ಸೊರಬ ಹಾಗೂ ಸಿದ್ದಾರಪುರ ಮಾರ್ಗವಾಗಿ ತೆರಳುತ್ತದೆ.
ಟಿಕೆಟ್ ಶುಲ್ಕ ಎಷ್ಟು?, ಮಹಿಳೆಯರಿಗೆ ವಿಶೇಷ ಸೂಚನೆ
ಹಾವೇರಿಯಿಂದ ತೆರಳುವ ಜೋಗ ಟೂರ್ ಪ್ಯಾಕೇಜ್ ಬಸ್ ಒಬ್ಬ ಪ್ರಯಾಣಿಕರಿಗೆ ತಲಾ 390 ರೂಪಾಯಿ ಹಾಗೂ ರಾಣಿಬೆನ್ನೂರಿನಿಂದ ತೆರಳುವ ಮಾರ್ಗಕ್ಕೆ 370 ರೂಪಾಯಿ ಇದೆ. ವಿಶೇಷ ಸೂಚನೆಯೆಂದರೆ ಈ ವಿಶೇಷ ಬಸ್‌ಗಳಲ್ಲಿ 'ಶಕ್ತಿ ಯೋಜನೆ' ಅಡಿ ಉಚಿತ ಬಸ್ ಸಂಚಾರ, ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಇರುವುದಿಲ್ಲ. ಇದನ್ನು ಗಮನಿಸಿ ಮಹಿಳೆಯರು ಸಂಚಾರ ಮಾಡುವಂತೆ NWKRTC ಪ್ರಕಟಣೆಯಲ್ಲಿ ಕೋರಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications