ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಲಭವಾಗಿ ಕನ್ನಡ ಕಲಿಯಲು ಬಂತು ವೆಬ್‌ ಸೈಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡೇತರರು ಕನ್ನಡ ಕಲಿಯಲು ಅನುಕೂಲವಾಗುವಂತೆ ನೂತನವಾಗಿ ಅಭಿವೃದ್ಧಿ ಪಡಿಸಿರುವ ವೆಬ್‍ಸೈಟ್ ಹಾಗೂ ಇಲಾಖೆಯ ಆನ್‍ಲೈನ್ ಸಕಾಲ ಸೇವೆಯನ್ನು ಇಂದು ಲೋಕಾರ್ಪಣೆ ಮಾಡಿದೆ.

ಗುರುವಾರ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ. ಜಯಮಾಲ ರಾಮಚಂದ್ರ ಅವರು ವೆಬ್‌ಸೈಟ್‌ಗೆ ಚಾಲನೆ ನೀಡಿದರು. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಕನ್ನಡ ಕಲಿಯಬಹುದಾಗಿದೆ.

ಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿ

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, 'ಇದೇ ಮೊಟ್ಟ ಮೊದಲ ಬಾರಿಗೆ ಸಕಾಲ ಸೇವೆಯನ್ನು ಆನ್‍ಲೈನ್ ಮೂಲಕ ತರಲಾಗಿದೆ. ಇದರಿಂದ ಆಡಳಿದಲ್ಲಿ ಪಾರದರ್ಶಕತೆ ಬರುವುದಲ್ಲದೆ, ಜನರಿಗೆ ಸುಲಭದಲ್ಲಿ ಸೇವೆಗಳು ಲಭ್ಯವಾಗಲಿವೆ' ಎಂದರು.

ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್

kannadakalike website

ಕನ್ನಡೇತರರಿಗೆ ಕನ್ನಡ ಕಲಿಸುವ ವೆಬ್ ಸೈಟ್‌ ಅನ್ನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ರೂಪಿಸಿದ್ದು, ಇದರಿಂದ ಜನರು ಕಷ್ಟವಿಲ್ಲದೆ ಕನ್ನಡ ಕಲಿಯಬಹುದಾಗಿದೆ. ಇದರಲ್ಲಿ ಪದ್ಯ, ಹಾಡು, ನಿರೂಪಣೆ, ಅನುಕರಣೆ ಇದ್ದು ಇದರಲ್ಲಿ ಒಟ್ಟು 30 ವಿಡಿಯೋಗಳಿವೆ.

ಕನ್ನಡ ಭಾಷೆ ಕಲಿಕೆ ಕಡ್ಡಾಯ: ಖಾಸಗಿ ಶಾಲೆಗಳಿಗೆ ಖಡಕ್ ಆದೇಶಕನ್ನಡ ಭಾಷೆ ಕಲಿಕೆ ಕಡ್ಡಾಯ: ಖಾಸಗಿ ಶಾಲೆಗಳಿಗೆ ಖಡಕ್ ಆದೇಶ

ಅಲ್ಲದೆ, ಕನ್ನಡ ವ್ಯಾಕರಣ, ನೂತನ ಭಾಷಾ ಕಲಿಕೆ ವಿಧಾನದಿಂದ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ಇದಕ್ಕೆ ಇಲಾಖೆ 30 ಲಕ್ಷ ಅನುದಾನ ಈಗಾಗಲೇ ನೀಡಿದ್ದು, ಇನ್ನೂ ಹೆಚ್ಚು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು, '2015 ರಿಂದ ಕನ್ನಡ ಪೀಠವು ಅಸ್ತಿತ್ವದಲ್ಲಿದ್ದು, ಕನ್ನಡದ ಮೇರುಕೃತಿಗಳಾದ ಕವಿರಾಜಮಾರ್ಗ, ವಡ್ಡಾರಾದನೆ ಹಾಗೂ ಗದಾಯುದ್ಧವನ್ನು ಇಂಗ್ಲೀಶ್‌ಗೆ ಅನುವಾದ ಮಾಡಿ ಯಶಸ್ವಿಯಾಗಿದೆ' ಎಂದರು.

'ಕನ್ನಡೇತರರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಕನ್ನಡ ಕಲಿಕೆ ವೆಬ್‍ಸೈಟ್‍ನಲ್ಲಿ ಜನರಿಗೆ ಅರ್ಥವಾಗುವ ಸುಲಭ ರೀತಿಯಲ್ಲಿ ಕನ್ನಡ ಕಲಿಕೆಯ ಪಠ್ಯ ರೂಪಿಸಲಾಗಿದೆ. ಇದರಲ್ಲಿ ಕರ್ನಾಟಕ ಇತಿಹಾಸ, ಜಾನಪದ ಸಾಹಿತ್ಯ, ವರ್ತಮಾನ, ರಂಗಭೂಮಿ, ಉದ್ಯಮ, ಮಾರುಕಟ್ಟೆ, ಕೃಷಿ, ಆಹಾರ, ಉಡುಗೆ, ತೊಡುಗೆ, ಚಿತ್ರಕಲೆ, ಭೌಗೋಳಿಕತೆ ಮುಂತಾದ ವಿಷಯಗಳನ್ನು ಸೇರಿಸಲಾಗಿದೆ.

English summary
Jawaharlal Nehru University (JNU) Kannada bench designed website for easy learning of Kannada. Kannada and culture department minister Dr. Jayamala inaugurated the www.kannadakalike.org website on September 20, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X