ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ವೈ.ಭಾಸ್ಕರರಾವ್ ಆರೋಪಿ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 22 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ಆರೋಪಿಯಾಗಲಿದ್ದಾರೆಯೇ?. ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಭಾಸ್ಕರರಾವ್ ಅವರನ್ನು ಆರೋಪಿಯಾಗಿ ಮಾಡಲು ಚಿಂತನೆ ನಡೆಸಿದೆ.

ವೈ.ಭಾಸ್ಕರರಾವ್ ಅವರು ಲೋಕಾಯುಕ್ತರಾಗಿದ್ದಾಗಲೇ ಅವರ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್ ಅವರನ್ನು ಎಸ್‌ಐಟಿ ಬಂಧಿಸಿತ್ತು. [ಭಾಸ್ಕರರಾವ್ ರಾಜೀನಾಮೆ]

y bhaskar rao

ಭಾಸ್ಕರರಾವ್ ಆರೋಪಿ : ಅಶ್ವಿನ್ ರಾವ್ ಅವರ ಬಂಧನವಾದ ಬಳಿಕ ಭಾಸ್ಕರರಾವ್ ಅವರು ಪ್ರಕರಣದಲ್ಲಿ ಆರೋಪಿಯಾಗಲಿದ್ದಾರೆಯೇ? ಎಂಬ ಮಾತುಗಳು ಕೇಳಿಬರಲಾರಂಭಿಸಿದವು. ಆದರೆ, ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಭಾಸ್ಕರರಾವ್ ಅವರನ್ನು ಆರೋಪಿಯನ್ನಾಗಿ ಮಾಡಲಿಲ್ಲ. [ಲೋಕಾಯುಕ್ತದಲ್ಲಿ ಏನಿದು ಹಗರಣ?]

ಜನಾರ್ದನ ರಾಜೀನಾಮೆ : ಭಾಸ್ಕರರಾವ್ ಅವರನ್ನು ಆರೋಪಿಯನ್ನಾಗಿ ಮಾಡದ ಎಸ್‌ಐಟಿಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಎಸ್‌ಐಟಿ ಪರ ವಾದ ಮಂಡನೆ ಮಾಡುತ್ತಿದ್ದ ಕೆ.ಜನಾರ್ದನ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ವೈಯಕ್ತಿಕ ಕಾರಣದಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. [ಲೋಕಾಯುಕ್ತ ಪದಚ್ಯುತಿ ಹೇಗೆ ನಡೆಯುತ್ತದೆ?]

ಕೆ.ಜನಾರ್ದನ ಅವರ ರಾಜೀನಾಮೆಯಿಂದಾಗಿ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಖಾಲಿ ಇರುವ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡುವ ಜೊತೆಗೆ, ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಲು ಹೊಸ ಎಸ್‌ಪಿಪಿ ಅವರನ್ನು ನೇಮಕ ಮಾಡಬೇಕಾಗಿದೆ.

ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ವೈ.ಭಾಸ್ಕರರಾವ್ ಅವರನ್ನು ಆರೋಪಿಯನ್ನಾಗಿ ಮಾಡುವಂತೆ ಕೋರಿ ಅಲಂಪಾಷ ಎನ್ನುವವರು ಲೋಕಾಯುಕ್ತ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾ.ವಿ.ಜಿ.ಬೋಪಯ್ಯ ಅವರು ಜನವರಿ 4ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.

English summary
The problems for the Lokayukta in Karnataka appear to be never ending. While the seat of the Lokayukta lies vacant following the resignation of Justice Bhaskar Rao, now the Karnataka government is looking for a prosecutor who quit citing personal reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X