ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ

Posted By:
Subscribe to Oneindia Kannada

ಬೆಂಗಳೂರು, ಜುಲೈ 04 : ದೇಶದಲ್ಲೇ ಕರ್ನಾಟಕ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಸೀಟುಗಳನ್ನು ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ 53 ವೈದ್ಯಕೀಯ ಕಾಲೇಜುಗಳಿದ್ದು, 7,355 ಸೀಟುಗಳಿವೆ.

ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ದೇಶದಲ್ಲಿ 422 ಮೆಡಿಕಲ್ ಕಾಲೇಜುಗಳಿವೆ, 57,138 ಸೀಟುಗಳಿವೆ. ಇವುಗಳ ಪೈಕಿ ಕರ್ನಾಟಕದಲ್ಲಿ 53 ಕಾಲೇಜುಗಳಿವೆ (18 ಸರ್ಕಾರಿ). 7,355 ವೈದ್ಯಕೀಯ ಮತ್ತು 3,646 ವೈದ್ಯಕೀಯ ಸ್ನಾತಕೋತ್ತರ ಸೀಟುಗಳನ್ನು ರಾಜ್ಯ ಹೊಂದಿದೆ. [ಮೂರು ವೈದ್ಯಕೀಯ ಕಾಲೇಜು ಆರಂಭಕ್ಕೆ ಒಪ್ಪಿಗೆ ಸಿಕ್ಕಿತು]

medical

ಚಾಮರಾಜನಗರ, ಕೊಡಗು, ಕಾರವಾರ ವೈದ್ಯಕೀಯ ಕಾಲೇಜುಗಳು ಈ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದ್ದು, ಇನ್ನೂ 150 ಸೀಟುಗಳು ಲಭ್ಯವಾಗಲಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರು ವರ್ಷಗಳಲ್ಲಿ 6 ಹೊಸ ಕಾಲೇಜುಗಳನ್ನು ಆರಂಭಿಸಲಾಗಿದೆ. ಇನ್ನೂ 6 ಕಾಲೇಜು ಮುಂದಿನ ಎರಡು ವರ್ಷಗಳಲ್ಲಿ ಆರಂಭಗೊಳ್ಳಲಿದೆ. [ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ದುಬಾರಿ]

ಯಾವ ರಾಜ್ಯದಲ್ಲಿ ಎಷ್ಟು ಸೀಟು? : ಹೆಚ್ಚು ವೈದ್ಯಕೀಯ ಸೀಟುಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ ಆಂಧ್ರಪ್ರದೇಶ (7,150) ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 6,595, ತಮಿಳುನಾಡಿನಲ್ಲಿ 6,115 ಸೀಟುಗಳಿವೆ. ದೇಶದ ಬೇರೆ ಯಾವುದೇ ರಾಜ್ಯಗಳು 5000ಕ್ಕಿಂತ ಹೆಚ್ಚು ಸೀಟುಗಳನ್ನು ಹೊಂದಿಲ್ಲ. [ಮಾಹಿತಿ : KarnatakaGovernment.Updates]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka has the highest number of medical colleges and consequently medical seats in the country at the undergraduate and postgraduate levels. Karnataka is home to 53 medical colleges of which 18 are government colleges. The state has 7,355 MBBS seats and 3,646 postgraduate medical seats.
Please Wait while comments are loading...