ಕುಂದಾಪುರದಲ್ಲೂ ಆರಂಭವಾಯಿತು ಹೆಲಿ ಟೂರಿಸಂ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಮೇ 02 : ಉಡುಪಿಯ ಬಳಿಕ ಕುಂದಾಪುರಕ್ಕೆ ಹೆಲಿ ಟೂರಿಸಂ ಕಾಲಿಟ್ಟಿದೆ. ಮೇ ತಿಂಗಳ ಅಂತ್ಯದ ತನಕ ಜನರು ಹೆಲಿಕಾಪ್ಟರ್ ಮೂಲಕ ಕುಂದಾಪುರದ ಸೌಂದರ್ಯವನ್ನು ಸವಿಯಬಹುದಾಗಿದೆ. ಚಿಪ್ಸನ್ ಏವಿಯೇಷನ್ ಸಂಸ್ಥೆಯು ಕುಂದಾಪುರದಲ್ಲಿ ಹೆಲಿ ಟೂರಿಸಂ ಆರಂಭಿಸಿದೆ.

ಚಿಪ್ಸನ್ ಏವಿಯೇಷನ್ ಸಂಸ್ಥೆಯ ಉಡುಪಿ ಜಿಲ್ಲಾ ಉಸ್ತುವಾರಿ ಸುದೇಶ್ ಶೆಟ್ಟಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಉಡುಪಿಯಲ್ಲಿ ಆರಂಭಿಸಿದ ಹೆಲಿ ಟೂರಿಸಂ ಯಶಸ್ಸು ಕಂಡ ಬಳಿಕ ಕುಂದಾಪುರದಲ್ಲಿ ಈ ಸೇವೆ ಆರಂಭಿಸಲಾಗಿದೆ' ಎಂದು ಅವರು ಹೇಳಿದ್ದಾರೆ. [ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

helicopter

ಕುಂದಾಪುರದಲ್ಲಿ ಹೆಲಿ ಟೂರಿಸಂಗೆ ಚಾಲನೆ ನೀಡಬೇಕು ಎಂಬ ಕನಸಿಗೆ ಕೋಟೇಶ್ವರದ ಯುವ ಮೆರಿಡಿಯನ್ ಸಮೂಹ ಸಂಸ್ಥೆಯ ಬೆಂಬಲ ನೀಡಿದೆ. ಬೈಲೂರು ಉದಯ ಕುಮಾರ ಶೆಟ್ಟಿ, ಬೈಲೂರು ವಿನಯ ಕುಮಾರ ಶೆಟ್ಟಿ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. [ಉಡುಪಿಯಲ್ಲಿ ಘರ್ಜನೆ ನಿಲ್ಲಿಸಿದ ಹೆಲಿ ಟೂರಿಸಂ?]

ಜಿಲ್ಲಾಡಳಿತ, ಪ್ರವಾಸ್ಯೋದ್ಯಮ ಇಲಾಖೆಯ ಅನುಮತಿಯೊಂದಿಗೆ ಹೆಲಿ ಟೂರಿಸಂ ಸೇವೆ ಆರಂಭಿಸಲಾಗಿದೆ. ಇದರಲ್ಲಿ ಜಾಲಿ ರೈಡ್, ಅಡ್ವೆಂಚರ್ ರೈಡ್ ಎಂಬ ವಿಭಾಗಗಳಿವೆ. ಕಂಪೆನಿ ಕರಾವಳಿ ಜಿಲ್ಲೆಯಲ್ಲಿ ಶಾಶ್ವತ ಹೆಲಿಕಾಪ್ಟರ್ ಯಾನ ಆರಂಭಿಸುವ ಚಿಂತನೆಯನ್ನೂ ನಡೆಸುತ್ತಿದೆ.

ದರ ಎಷ್ಟು? : ಮೇ ತಿಂಗಳ ಅಂತ್ಯದ ವರೆಗೆ ಕುಂದಾಪುರದಲ್ಲಿ ಹೆಲಿ ಟೂರಿಸಂ ಸೇವೆ ಲಭ್ಯವಿರುತ್ತದೆ. 8 ನಿಮಿಷದಲ್ಲಿ ಜಾಲಿ ರೈಡ್ ಮುಗಿಯುತ್ತದೆ. 13 ನಿಮಿಷದಲ್ಲಿ ಅಡ್ವೆಂಚರ್ ರೈಡ್ ನಡೆಸಬಹುದು. 8 ನಿಮಿಷದ ಜಾಲಿ ರೈಡ್‌ಗೆ 2,200 ಮತ್ತು 13 ನಿಮಿಷದ ಜಾಲಿ ರೈಡ್‌ಗೆ 3,500 ರೂ. ದರ ನಿಗದಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the success of heli-tourism in Udupi, the concept will now be introduced in Kundapur. Rides will start from May first week. One has to pay Rs 2,200 for a ride of 8 minute duration and Rs 3,500 for a ride of 13 minute.
Please Wait while comments are loading...