ಹನ್ನೊಂದು ವರ್ಷದಿಂದ ಡಿಕೆಶಿ ಮೇಲಿತ್ತು ಆದಾಯ ತೆರಿಗೆ ತೂಗುಗತ್ತಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ ಪರಿಯ ಚಿಂತೆಗೆ- ಸಂಕಷ್ಟಕ್ಕೆ ಸಿಕ್ಕಿದ್ದು ಇದೇ ಮೊದಲಿರಬೇಕು. ಆದರೆ ಈ ದಾಳಿ ಬಗ್ಗೆ ಅವರಿಗೆ ಮೊದಲೇ ಸುಳಿವಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವರಮಹಾಲಕ್ಷ್ಮಿ ಹಬ್ಬದ ಶುಕ್ರವಾರಕ್ಕೆ ಮೂರನೇ ದಿನಕ್ಕೆ ಕಾಲಿರಿಸಿದೆ. ಶಿವಕುಮಾರ್ ವಿರುದ್ಧ ಇನ್ನಷ್ಟು-ಮತ್ತಷ್ಟು ದಾಖಲೆಗಳು ಸಿಗುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ.

ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕರ್ನಾಟಕದಲ್ಲಿ ಕಾವಲು ಕಾಯಲು ನಿಂತಿದ್ದರಿಂದಲೇ ಡಿಕೆ ಶಿವಕುಮಾರ್ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿದೆ. ಶಿವಕುಮಾರ್ ರನ್ನು ಬಲಿ ಹಾಕಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಕಾಂಗ್ರೆಸ್ ನವರ ಆಪಾದನೆ.

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಆದರೆ, ವಾಸ್ತವ ಏನೆಂದರೆ ಈ ಆದಾಯ ತೆರಿಗೆ ದಾಳಿಯನ್ನು ತಿಂಗಳಗಳ ಮುಂಚಿತವಾಗಿಯೇ ಯೋಜಿಸಲಾಗಿದೆ. ಒನ್ಇಂಡಿಯಾಗೆ ಈ ಬಗ್ಗೆ ಮೂಲವೊಂದು ಖಚಿತಪಡಿಸಿದೆ. ಇಂಥ ಆದಾಯ ತೆರಿಗೆ ದಾಳಿಗಳನ್ನು ರಾತ್ರೋರಾತ್ರಿ ಯೋಜನೆ ಮಾಡಿಕೊಳ್ಳುವುದಕ್ಕೆ ಆಗಲ್ಲ. ಆ ರೀತಿ ಮಾಡಿದರೆ ಅವಮಾನ ಆಗುತ್ತದೆ.

ಇಂಥ ದಾಳಿಗೆ ದಿನಗಟ್ಟಲೆ ಸಮಯ ತೆಗೆದುಕೊಳ್ಳಲಾಗುತ್ತದೆ. ತಿಂಗಳುಗಳ ಕಾಲ ಎಲ್ಲವನ್ನೂ ಯೋಜನೆ ಹಾಕಿಕೊಂಡು ಶ್ರಮ ವಹಿಸದಿದ್ದರೆ ಸಚಿವರ ಮೇಲೆ ನಡೆಸುವಂಥದ್ದು ಸೂಕ್ಷ್ಮವಾದ ಸಂಗತಿ. ಅವಕಾಶಗಳನ್ನೆಲ್ಲ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

ನಿಕಟವರ್ತಿ ಮೇಲೆ ದಾಳಿ

ನಿಕಟವರ್ತಿ ಮೇಲೆ ದಾಳಿ

ಎಲೆಕ್ಟ್ರಿಕಲ್ ಗುತ್ತಿಗೆ ವಿಚಾರದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಸಚಿವರಿಗೆ ನಿಕಟವರ್ತಿ ಆದವರೊಬ್ಬರ ಮೇಲೆ ಮಲ್ಲೇಶ್ವರಂನಲ್ಲಿ ಈ ಹಿಂದೆ ದಾಳಿ ನಡೆದಿತ್ತು.

ಅಪನಗದೀಕರಣ ನಂತರ ಕಣ್ಣಿಡಲಾಗಿತ್ತು

ಅಪನಗದೀಕರಣ ನಂತರ ಕಣ್ಣಿಡಲಾಗಿತ್ತು

ಅಪನಗದೀಕರಣದ ನಂತರ ಕಳೆದ ವರ್ಷ ಜನವರಿಯಲ್ಲಿ ಶಿವಕುಮಾರ್ ಅವರ ವ್ಯವಹಾರಗಳ ಮೇಲೆ ಕೂಡ ಕಣ್ಣಿಡಲಾಗಿತ್ತು. ಅವರ ಸಮೀಪವರ್ತಿಗಳ ಮೇಲೆ ದಾಳಿಗಳು ಕೂಡ ನಡೆದಿದ್ದವು.

ಹೂಡಿಕೆ ಇರುವ ಆರೋಪ

ಹೂಡಿಕೆ ಇರುವ ಆರೋಪ

ಕೆಲವು ಸಂಸ್ಥೆಗಳು ಜತೆಗೆ ಆಭರಣ ಮಳಿಗೆಗಳ ಜಾಲವೊಂದರ ಮೇಲೆ ಕೂಡ ದಾಳಿ ನಡೆದಿತ್ತು. ಈ ಸಂಸ್ಥೆಗಳು ಹಾಗೂ ಆಭರಣ ಮಳಿಗೆಗಳ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಅವರ ಹೂಡಿಕೆ ಇತ್ತು ಎಂಬ ಆರೋಪ ಕೇಳಿಬಂದಿತ್ತು.

ಶಾಲೆ ಆಡಳಿತಾಧಿಕಾರಿ ಮೇಲೆ ದಾಳಿ

ಶಾಲೆ ಆಡಳಿತಾಧಿಕಾರಿ ಮೇಲೆ ದಾಳಿ

ಈ ವರ್ಷ ಜನವರಿಯಲ್ಲಿ ಲೇಪಾಕ್ಷ ಎಂಬುವವರ ಮೇಲೆ ಐಟಿ ದಾಳಿ ನಡೆದಿತ್ತು. ಆತ ಶಿವಕುಮಾರ್ ಶಾಲೆಯಲ್ಲಿ ಆಡಳಿತಾಧಿಕಾರಿಯಾಗಿದ್ದರು.

ಚಿಂತೆಗೀಡಾಗಿದ್ದರು ಶಿವಕುಮಾರ್

ಚಿಂತೆಗೀಡಾಗಿದ್ದರು ಶಿವಕುಮಾರ್

ಈ ರೀತಿ ಆದಾಯ ತೆರಿಗೆ ದಾಳಿಗಳ ಬಗ್ಗೆ ವಿಪರೀತ ಚಿಂತೆಗೀಡಾಗಿದ್ದ ಡಿಕೆ ಶಿವಕುಮಾರ್, ಹಲವು ಬಾರಿ ದೆಹಲಿಗೆ ಹೋಗಿದ್ದರು ಎಂದು ವರದಿಗಳು ಹೇಳುತ್ತಿವೆ. ಐಟಿ ಅಧಿಕಾರಿಗಳು ದಾಳಿ ನಡೆಸಬಹುದು ಎಂಬ ವಿಚಾರ ಸ್ವತಃ ಶಿವಕುಮಾರ್ ಗೆ ತಿಳಿದಿತ್ತು. ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಕರಣಗಳನ್ನು ಪೇರಿಸುತ್ತಿರುವ ಸಂಗತಿ ಕೂಡ ಅವರ ಗಮನದಲ್ಲಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In the contrary to claims that are being made that the IT department raid was a witch hunt to target the Gujarat MLAs being hosted by Shivakumar in Karnataka, the truth of the matter is that this raid was planned months in advance.
Please Wait while comments are loading...