ರೈಲಿನಲ್ಲಿ ತೊಂದರೆಯಾದರೆ 182 ಸಂಖ್ಯೆಗೆ ಕರೆ ಮಾಡಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಜೂನ್ 30 : ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ? ಹಾಗಾದರೆ ಸಹಾಯವಾಣಿ ನಂ 182 ಅನ್ನು ಮೊಬೈಲ್‌ನಲ್ಲಿ ಫೀಡ್ ಮಾಡಿಕೊಳ್ಳಿ, ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ರೈಲ್ವೆ ಇಲಾಖೆ ಈ ಸಹಾಯವಾಣಿಯನ್ನು ಆರಂಭಿಸಿದೆ.

ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬುಧವಾರ ಎಲ್ಲಾ ರೈಲು ಪ್ರಯಾಣಿಕರಿಗೆ ಸಹಾಯವಾಣಿ ಬಗ್ಗೆ ಮಾಹಿತಿ ನೀಡಲಾಯಿತು. ಭಿತ್ತಿಪತ್ರ ವಿತರಣೆ ಮಾಡುವ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾದೇಶಿಕ ರೈಲ್ವೆ ಪ್ರಬಂಧಕ ಮಹಮ್ಮದ್ ಆಸೀಮ್ ಸುಲೈಮಾನ್ ಪಾಲ್ಗೊಂಡಿದ್ದರು. [ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ]

railway

ರೈಲು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ, ಅಪರಾಧ ಕೃತ್ಯಗಳು ಕಂಡಲ್ಲಿ, ಕಿರುಕುಳವಾದಲ್ಲಿ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. [ಪ್ರಯಾಣಿಕರೆ ಗಮನಿಸಿ : ಮಂಗಳೂರು-ಮುಂಬೈ ವಿಶೇಷ ಎಸಿ ರೈಲು]

ಕಾರ್ಯಾಚರಣೆ ಹೇಗೆ? : ಸಹಾಯವಾಣಿ 182ಗೆ ಕರೆ ಮಾಡಿದರೆ ಆರ್ ಪಿಎಫ್ ನಿಯಂತ್ರಣ ಕೊಠಡಿಗೆ ಕರೆ ಹೋಗುತ್ತದೆ. ಸಮಸ್ಯೆ ಏನಾಗಿದೆ? ಎನ್ನುವುದನ್ನು ಸಹಾಯವಾಣಿ ನಿಯಂತ್ರಕರಿಗೆ ತಿಳಿಸಬೇಕು. ಆ ಕೂಡಲೇ ಕಾರ್ಯ ಪ್ರವೃತ್ತರಾಗುವ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಅಗತ್ಯವಿದ್ದಲ್ಲಿ ಮುಂದಿನ ನಿಲ್ದಾಣದಲ್ಲಿ ರೈಲು ನಿಲ್ಲುವ ವೇಳೆಯಲ್ಲಿ ಕರೆ ಮಾಡಿದವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸುವರು. [ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]

ಪ್ರಯಾಣಿಕರು ಜಾಗೃತರಾಗಿರಿ : ರೈಲು ಪ್ರಯಾಣಿಕರಿಗೆ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಈ ಕೆಳಗಿನ ಜಾಗೃತಿ ಮಾಹಿತಿಗಳನ್ನು ನೀಡಿದ್ದಾರೆ.

* ಅಪರಿಚಿತರಿಂದ ಯಾವುದೇ ತಿಂಡಿ, ಜ್ಯೂಸ್ ಇನ್ನಿತರ ಆಹಾರ ಪದಾರ್ಥಗಳನ್ನು ಪಡೆಯಬಾರದು
* ಚಿನ್ನಾಭರಣ ಧರಿಸಿ ಕಿಟಕಿ ಬಳಿ ಕುಳಿತುಕೊಳ್ಳಬಾರದು
* ರೈಲು ನಿಲ್ದಾಣದಿಂದ ಹೊರಡುವ ಮತ್ತು ನಿಲ್ಲುವ ಸಮಯದಲ್ಲಿ ಜಾಗರೂಕರಾಗಿರಬೇಕು
* ವ್ಯಾನಿಟಿ ಬ್ಯಾಗಿನಲ್ಲಿ ಬೆಲೆಬಾಳುವ ಸೊತ್ತು ಇದ್ದರೆ ಇತರರಿಗೆ ಅನುಮಾನ ಬಾರದಂತೆ ನೋಡಿಕೊಳ್ಳಿ
* ಲಗೇಜುಗಳನ್ನು ಸೀಟಿನ ಅಡಿಯಲ್ಲಿ ಅಳವಡಿಸಲಾಗಿರುವ ಸೇಫ್ಟಿ ಚೈನಿನಿಂದ ಭದ್ರಪಡಿಸಿಕೊಳ್ಳಬೇಕು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Railway passengers can dial security helpline 182 to report unsavoury incidents on board trains.
Please Wait while comments are loading...