ದಲಿತರಿಗೆ ಆರ್‌ಎಸ್‌ಎಸ್ ಮಾತ್ರವಲ್ಲ; ಕಾಂಗ್ರೆಸ್ ಸಹ ಶತ್ರು: ಚೇತನ್ ಅಹಿಂಸಾ
Chetan Ahimsa: ಸಿನಿಮಾ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ RSS ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಡೆಯ ಬಗ್ಗೆ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ, ಸಾಮಾಜಿಕ ಸಮಸ್ಯೆಗಳ ಬಗ್ಗೆ "ಒನ್ ಇಂಡಿಯಾ ಕನ್ನಡ" ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ನಿರ್ಬಂಧ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ನಾನು ಸಂವಿಧಾನವನ್ನು ಎತ್ತಿ ಹಿಡಿಯುತ್ತಿದ್ದೇನೆ. ಆರ್‌ಎಸ್‌ಎಸ್‌ಅನ್ನು ನಾನು ಸೈದ್ಧಾಂತಿಕವಾಗಿ ಪ್ರಶ್ನೆ ಮಾಡುತ್ತೇನೆ. ಅದನ್ನೇ ಟಾರ್ಗೆಟ್ ಮಾಡಿಕೊಂಡು ಎಲ್ಲಾ ಸಮಸ್ಯೆಗಳಿಗೆ ಅದೇ ಕಾರಣ ಎಂದು ಹೇಳಿ, ಅವರನ್ನು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನ್ ಮಾಡುವುದು ಸರಿ ಅಲ್ಲ. ಅಲ್ಲದೇ ಇದು ಸಂವಿಧಾನಕವೂ ಅಲ್ಲ, ಸಂವಿಧಾನದಲ್ಲಿ ಅಹಿಂಸಾತ್ಮಕವಾಗಿ ಜನ ಸೇರುವುದಕ್ಕೆ ಅವಕಾಶ ಇದೆ ಎಂದು ಚೇತನ್ ಅಹಿಂಸಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು ನಮಗೆ ಇಷ್ಟವಾದ ಪಕ್ಷಗಳು ಹಾಗೂ ಸಂಘಟನೆಗಳು ಮಾತ್ರ ಇರಬೇಕು, ನಾವು ಇಷ್ಟಪಡದೆ ಇರುವ ಸಂಘ - ಸಂಸ್ಥೆಗಳು ಬ್ಯಾನ್ ಆಗಬೇಕು ಎನ್ನುವುದು ಅಸಂವಿಧಾನಿಕವಾಗಿದೆ. ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಲುವುಗಳು ಯಾವುದೂ ಪ್ರಜಾಪ್ರಭುತ್ವದ ಅಡಿಯಲ್ಲಿ ಇಲ್ಲ. ನಾವು ಸಹ ಆರ್‌ಎಸ್‌ಎಸ್ ಅನ್ನು ಸೈದ್ಧಾಂತಿಕವಾಗಿ ಪ್ರಶ್ನೆ ಮಾಡುತ್ತಿದ್ದೇವೆ. ಮುಖ್ಯವಾಗಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಡಿಯಲ್ಲಿ ಮಾತ್ರ ನಾವು ಆರ್‌ಎಸ್‌ಎಸ್ ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡುತ್ತಿದ್ದೇವೆ.
ನಿಮ್ಮ ವಿಚಾರಗಳ ಮೇಲೆ ಬದ್ಧತೆ ಇದ್ದಾಗ ನೀವು ಬೇರೆ ಅವರ ಬಾಯಿ ಮುಚ್ಚಿಸುವುದಕ್ಕೆ ಯಾರೂ ಹೋಗಲ್ಲ. ಸಮಸಮಾಜದಲ್ಲಿ ನಮಗೆ ನಂಬಿಕೆ ಇದೆ. ಕಾಂಗ್ರೆಸ್ ಅವರ ಮನುವಾದ, ಚುನಾವಣೆ ಹಾಗೂ ಬೇರೆ ವಿಚಾರಗಳಲ್ಲಿ ಎಲ್ಲಿ ಸೋಲಿಸಬಹುದು ಎನ್ನುವ ಭಯದಿಂದ ಈ ರೀತಿ ಟಾರ್ಗೆಟ್ ಮಾಡುವುದನ್ನು ನಾನು ಒಪ್ಪುವುದಿಲ್ಲ. ಅಲ್ಲದೇ ಆರ್‌ಎಸ್‌ಎಸ್ ಸಿದ್ಧಾಂತವನ್ನೂ ನಾನು ಒಪ್ಪುವುದಿಲ್ಲ.
ಕಾಂಗ್ರೆಸ್‌ನವರ ಮನುವಾದ: ಕಾಂಗ್ರೆಸ್ ಮನುವಾದದ ಬಗ್ಗೆ ಈ ಹಿಂದೆಯೂ ಚರ್ಚೆಯಾಗಿದೆ. ಡಾ.ಬಿ ಆರ್ ಅಂಬೇಡ್ಕರ್, ಪೆರಿಯಾರ್ ರಾಮಸ್ವಾಮಿ ಸೇರಿದಂತೆ ಹಲವು ಗಣ್ಯರು ಮತ್ತು ಸಮಸಮಾಜದ ಪರವಾಗಿ ಇರುವವರು ಕಾಂಗ್ರೆಸ್ ವಿರುದ್ಧವಾಗಿ ಗಟ್ಟಿಯಾಗಿ ಸೈದ್ಧಾಂತಿಕವಾಗಿ ವಿಚಾರ ಮಂಡಿಸಿದ್ದಾರೆ.
ಕಾಂಗ್ರೆಸ್‌ನವರ ಕಣ್ಣಿನಲ್ಲಿ ಬೇರೆಯವರನ್ನು ದೂಷಿಸುವುದಕ್ಕೆ ಅವರಿಗಿಂತ ನಮ್ಮ ವಿಚಾರಗಳು ಬೇರೆ ಎಂದು ಪ್ರತಿಪಾದಿಸಬಹುದು. ನಾವು ಬಿಜೆಪಿಯನ್ನು ಹಿಂದುತ್ವ ಎಂದು ನೋಡುತ್ತೇವೆ. ಕಾಂಗ್ರೆಸ್‌ನ ಯಥಾಸ್ಥಿತಿಯ ಮನುವಾದ ಅದೊಂದು ಅಸಮಾನತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರು ಸ್ವಲ್ಪ ಟಿಂಕರಿಂಗ್ ಕೆಲಸ ಮಾಡುತ್ತಿರಬಹುದು.
10 ಕೆ.ಜಿ ಅಕ್ಕಿ: ಕಾಂಗ್ರೆಸ್‌ನವರು ಸಣ್ಣಪುಟ್ಟ 5 ಯೋಜನೆಗಳನ್ನು ತಂದು, 5 ಕೆ.ಜಿ ಬದಲಿಗೆ 10 ಕೆ.ಜಿ ಅಕ್ಕಿ ಕೊಟ್ಟು ಬಿಟ್ಟರೆ ಸಮಾಜದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಏನಾದರೂ ಮಾಡಬೇಕು. ಆದರೆ, ಎಷ್ಟು ಪರಿವರ್ತನೆ ಮಾಡುತ್ತೀರಿ ಎನ್ನುವುದು ಮುಖ್ಯ. ದೇಶದ ವಿವಿಧ ಪಕ್ಷಗಳು ಪರಿವರ್ತನೆ ಮಾಡದೆ ದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಮೂಲಕ ಮನುವಾದ ಹಾಗೂ ಮನುಸ್ಮೃತಿಯನ್ನು ದೇಶದಲ್ಲಿ ಇನ್ನೂ ಜೀವಂತವಾಗಿ ಇರಿಸಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪೆರಿಯಾರ್ ಸಿದ್ಧಾಂತ ಹಾಗೂ ಕರ್ನಾಟಕದ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಅವರು, 21ನೇ ಶತಮಾನದಲ್ಲಿ ಕರ್ನಾಟಕವನ್ನು ಆಧುನೀಕರಿಸುವುದು ಮುಖ್ಯವಾಗುತ್ತದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿ ನೆಲೆಯೂರಿತ್ತು. ಆ ಸಮಯದಲ್ಲಿ ಪೆರಿಯಾರ್ ಅವರ ದ್ರಾವಿಡ ಚಳವಳಿ ಪ್ರಾರಂಭವಾಗುತ್ತದೆ. ಅದು ಭಾಷಾ ತಾರತಮ್ಯ, ಅಧಿಕಾರ, ಜಾತಿ, ಲಿಂಗ -ವರ್ಗ, ಸಂಸ್ಕೃತಿ ಸೇರಿದಂತೆ ಕೆಲವೊಂದು ಪವರ್ ಸ್ಟ್ರಕ್ಚರ್‌ಗೆ ಸಂಬಂಧಿಸಿದಾಗಿದೆ. ಇವುಗಳಿಗೆ ಪ್ರತಿರೋಧ ಕೊಡಬೇಕು. ಸಮಸಮಾಜ ನಿರ್ಮಾಣವಾಗಬೇಕು.
ಹಿಂದಿ, ಇಂಗ್ಲಿಷ್, ಸಂಸ್ಕೃತಿ ಪ್ರಭಾವ ಹೆಚ್ಚಾಗಿದೆ. ಮಧ್ಯ ಹಂತದಲ್ಲಿ ಕನ್ನಡ ಹಾಗೂ ತಳಮಟ್ಟದಲ್ಲಿ ಕೊಡವ, ತುಳು ಸೇರಿದಂತೆ ವಿವಿಧ ಭಾಷೆಗಳಿವೆ. ನಾವು ಮೇಲಿರುವ ಭಾಷೆಗಳ ಪ್ರಭಾವವನ್ನು ಇಳಿಸಿ, ಕೆಳಗಿರುವ ಭಾಷೆಗಳ ಪ್ರಭಾವವನ್ನು ಹೆಚ್ಚಿಸಬೇಕು. ಇಲ್ಲೂ ಸಮಾನತೆ ಸೃಷ್ಟಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಭಾಷಾ ಸಮಸ್ಯೆ: ಭಾಷಾ ರಾಜಕೀಯ ಮಾಡುತ್ತಿರುವವರೇ ಬೇರೆ ಅದರಿಂದ ಅನ್ಯಾಯಕ್ಕೆ ಒಳಗಾಗುತ್ತಿರುವವರೇ ಬೇರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾಷಾವಾರು ಪ್ರದೇಶಗಳ ವಿಂಗಡಣೆ ಎನ್ನುವ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಹಲವು ಹೋರಾಟಗಾರರು ಜೀವ ಕೊಟ್ಟಿದ್ದಾರೆ. ಭಾರತದ ವಿಶೇಷತೆ ವಿವಿಧ ಭಾಷೆಗಳ ವೈವಿಧ್ಯತೆಯಲ್ಲಿದೆ.
ಚೇತನ್ ಅಹಿಂಸಾ ಹಂಚಿಕೊಂಡು ಪ್ರಮುಖ ವಿಚಾರಗಳು
1. ಪೆರಿಯಾರ್ ಅವರ ವಿಚಾರ ಕೇವಲ ಜಾತಿಗೆ ಸಂಬಂಧಿಸಿದ್ದಲ್ಲ. ಲಿಂಗ ಸಮಾನತೆಯ ಬಗ್ಗೆಯೂ ಅವರು ಹೋರಾಟ ಮಾಡಿದ್ದರು. 20ನೇ ಶತಮಾನದಲ್ಲಿ ಅವರು ಮಂಡಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ.
2. ಚಿತ್ತಾಪುರ ವಿಚಾರವಾಗಿ ಮಾತನಾಡಿದ ಚೇತನ್ ಅವರು, ದಲಿತ ಸಂಘಟನೆಗಳನ್ನು ಮನುವಾದಿ ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿ, ನೀವು ಯಾಕೆ ದಲಿತ ಸಂಘಟನೆಗಳನ್ನು ತಪ್ಪಾಗಿ ಬಳಸಿಕೊಳ್ಳುತ್ತಿದ್ದೀರಿ. ಅವರಿಗೆ ಯಾಕೆ ಪ್ರಯೋಜಕತ್ವನ್ನು ಕೊಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
3. ದಲಿತ ಸಂಘಟನೆಗಳಿಗೆ ಆರ್‌ಎಸ್‌ಎಸ್ ಮಾತ್ರ ಶತ್ರುವಲ್ಲ, ಕಾಂಗ್ರೆಸ್ ಸಹ ಶತ್ರು.
4. ಭಾಷೆಯು ಉದ್ಯೋಗ ಹಾಗೂ ಆರ್ಥಿಕತೆಯೊಂದಿಗೆ ಸಂಪರ್ಕ ಹೊಂದಿರಬೇಕು. ಸರ್ಕಾರಿ ಶಾಲೆಗೆ ಹೋಗಿ ಕನ್ನಡ ಕಲಿಯಿರಿ ಎಂದು ಒತ್ತಾಯಿಸುತ್ತಿದ್ದೇವೆ. ಆದರೆ ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ಸಿಗುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕತೆಯಲ್ಲಿ ಹಿಂದುಳಿದವರೇ ಇಲ್ಲಿ ಸೇರುತ್ತಿದ್ದಾರೆ. ಅಲ್ಲಿ ಓದಿದವರಿಗೆ ಸರ್ಕಾರಿ ಕೆಲಸಗಳಲ್ಲಿ ಅವಕಾಶ ಸಿಗಬೇಕು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications