ಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ; ಸಿಎಂ ಗೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್‌

ಬೆಂಗಳೂರು, ಮಾರ್ಚ್28:‌ ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಇತ್ತ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವದ ಸದ್ದು ಜೋರಾಗಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪಣ ತೊಟ್ಟಿರುವ ಮೂರು ಪಕ್ಷಗಳು ಹಲವು ತಂತ್ರಗಾರಿಕೆಯ ಜೊತೆಗೆ ಅನ್ಯ ಪಕ್ಷದ ಅಸಮಾಧನಗೊಂಡ ನಾಯಕರಿಗೆ ಗಾಳ ಹಾಕುತ್ತಿವೆ.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮ್ಮ ಬಿಜೆಪಿ ಶಾಸಕರನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಂಪರ್ಕಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಇದೀಗ ಸಿಎಂ ಬೊಮ್ಮಾಯಿ ಅವರಿಗೆ ಡಿ ಕೆ ಶಿವಕುಮಾರ್‌ ಅವರು ತಿರುಗೇಟು ನೀಡಿದ್ದಾರೆ.

Not Contacted BJP Mlas Said KPCC president DK Shivakumar

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ. ಅವರಿಗೆ ಬಹುಮತ ಬಂದಿತ್ತಾ? ಬಿಜೆಪಿಗೆ ಹೋಗಿದ್ದು ನಮ್ಮ ಶಾಸಕರು ತಾನೇ, ಬಿಜೆಪಿಯಂದ ಅವರಾಗಿಯೇ ಬರುತ್ತಿದ್ದಾರೆ. ನಮಗೆ ಟಿಕೆಟ್ ಸಹ ನೀಡದಷ್ಟು ರಶ್ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.

ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಾವ ಪಕ್ಷದಲ್ಲಿ ಇದ್ದವರು, ಈಗ ಯಾವ ಪಕ್ಷಕ್ಕೆ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಸಾಕಷ್ಟು ಜನರು ಸಂಪರ್ಕದಲ್ಲಿ ಇದ್ದಾರೆ, ನಾನು ಅವರ ಹೆಸರು ಹೇಳಲು ರೆಡಿ ಇಲ್ಲ. ಅವರಿಗೆ ನಾನು ತೊಂದರೆ ಮಾಡಲ್ಲ ಎಂದು ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ ಎಂದು ತಿಳಿಸಿದರು.

ಇವತ್ತಿನಿಂದ ಸರ್ಕಾರದ ಕೊನೆ ಕ್ಷಣ, ಬಿಜೆಪಿ ಪಕ್ಷ 60 ರಿಂದ 65 ಸೀಟಗೆ ಬಂದು ನಿಲ್ಲುತ್ತಾರೆ. ನಮಗೆ ನಿಚ್ಚಳವಾದ ಬಹುಮತ ಬರುತ್ತೇವೆ, ನಾವು ಮೂರು ತಿಂಗಳು ಮೊದಲೇ ಚುನಾವಣೆಗೆ ರೆಡಿ ಇದ್ದೇವೆ
ಅವರು ಹೇಗಾದರೂ ಮಾಡಿಕೊಳ್ಳಲಿ, ಎಷ್ಟು ಬೇಗ ಚುನಾವಣೆ ಆಗತ್ತದೆಯೇ ಅಷ್ಟು ಕಾಂಗ್ರೆಸ್ ಗೆ ಒಳ್ಳೆದು. ಸರ್ಕಾರ ಅಧಿಕಾರವನ್ನು ಮಿಷನರಿ ಯನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬೇಕೋ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Not Contacted BJP Mlas Said KPCC president DK Shivakumar

ಇನ್ನೂ ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಇಲ್ಲ. ಕೋರ್ಟ್ ಗೆ ಹೋದರೆ ಯಾವುದು ನಿಲ್ಲುವುದಿಲ್ಲ, ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡ್ತೇವೆ. ಮನೆ ಆಸ್ತಿನ ಹಂಚಿಕೊಂಡಂಗೆ ಇವರು ಕೊನೆ ಕ್ಷಣದಲ್ಲಿ ಹಂಚಿಕೊಳ್ಳಲು ಹೊರಟಿದ್ದಾರೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನಾವು ಉಳಿಸಿಕೊಳ್ತೇವೆ. ಅವರು ಬೋಗಸ್ಸಾ ನಾವು ಬೋಗಸ್ಸಾ? ಮಹದಾಯಿ ವಿಚಾರದಲ್ಲಿ ಅವಕಾಶವೇ ಕೊಟ್ಟಿಲ್ಲ ಎಂದು ಕೇಂದ್ರವೇ ಹೇಳಿದೆ. ಕೇಂಕದ್ರ ಸಚಿವ ಪ್ರಹ್ಲಾದ್‌ ಜೋಶಿ ಮಹದಾಯಿ ಆಯ್ತು ಅಂತ ಸಿಹಿ ಹಂಚಿದ್ರಲ್ವಾ? ಎಲ್ಲಾಯ್ತು ಅದು? ಎಂದು ಪ್ರಶ್ನಿಸಿದ್ದಾರೆ.

ಸದಾಶಿವ ವರದಿಯಲ್ಲಿ ಏನಿದೆ ಎಂದು ತೆಗೆದು ನೋಡಿ, ನಾವೇ ಅದನ್ನು ಮಾಡಿದ್ದು. ಎಲ್ಲಿ ಭಾಗ ಮಾಡಿದ್ದಾರೆ ಸಮುದಾಯಗಳನ್ನು ವರದಿಯಲ್ಲಿ ತೋರಿಸಲಿ. ಕಾನೂನಿಗೆ ವಿರುದ್ದವಾದ ಕೆಲಸಗಳನ್ನೇ ಬಿಜೆಪಿಯವರು ಮಾಡಿದ್ದಾರೆ. ಯಡಿಯೂರಪ್ಪ ನವರ ಸ್ವಂತ ಊರಿನಲ್ಲಿಯೇ ಸಮಯದಾಯದ ಆಕ್ರೋಶ ಎಷ್ಟಿದೆ ನೋಡಿದ್ದಿರಲ್ವಾ? ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡ್ತೇವೆ. ಓಬಿಸಿ ರಿಪೋರ್ಟ್, ಎಸ್.ಸಿ ಎಸ್ ಸಿ ರಿಪೋರ್ಟ್ ಎಲ್ಲ ತೆಗೆದು ಜನರ ಮುಂದಿಡಿ, ಯಾಕೆ ಜನರ ಮುಂದೆ ವರದಿಗಳನ್ನ ಇಟ್ಟಿಲ್ಲ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+