ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 04 : ವಿಲೀನದ ಹೆಸರಿನಲ್ಲಿ 791 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ. ಗಂಗಾವತಿಯಲ್ಲಿ 2011ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಮತ್ತು ವಿಲೀನಗೊಳಿಸುವುದಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಎಫ್‌ಐ ಸರ್ಕಾರಕ್ಕೆ ನೆನಪು ಮಾಡಿ ಕೊಟ್ಟಿದೆ.

ಶನಿವಾರ ಭಾರತೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, 'ವಿಲೀನಗೊಳಿಸುವ ಕಾರ್ಯ ಇನ್ನು ನಡೆದಿಲ್ಲ. ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಅದು ಸರ್ಕಾರದ ಅಭಿಪ್ರಾಯವಷ್ಟೆ. ವಿರೋಧ ವ್ಯಕ್ತವಾದಲ್ಲಿ ಪ್ರಕ್ರಿಯೆ ಕೈ ಬಿಡುವುದಾಗಿ ಭರವಸೆ ನೀಡಿದರು'. [ಸರಕಾರಿ ಕನ್ನಡ ಶಾಲೆಗಳಿಗೆ ಬೀಗ ಜಡಿದ ಕೋರ್ಟ್]

sfi

ಈ ಹಿಂದೆ ಅಧಿಕಾರ ನಡೆಸಿದ್ದ ಬಿಜೆಪಿ ಸರ್ಕಾರವೂ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಸದಾನಂದಗೌಡರು ಮುಖ್ಯಮಂತ್ರಿ 3,174, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 12,740 ಸರ್ಕಾರ ಶಾಲೆಗಳನ್ನು ಮುಚ್ಚುವಂತೆ ಶಿಫಾರಸು ಮಾಡಿದ್ದ ಪ್ರೊ.ಗೋವಿಂದರವರ ವರದಿಯನ್ನು ಜಾರಿ ಮಾಡಲು ಮುಂದಾಗಿದ್ದರು. ಪ್ರತಿಭಟನೆ ನಡೆದ ಬಳಿಕ ಈ ಪ್ರಸ್ತಾಪವನ್ನು ಕೈಬಿಡಲಾಗಿತ್ತು. [ಕನ್ನಡ ಶಾಲೆಗಳ ಪರ ದನಿಯೆತ್ತಿದ ಸಾಹಿತಿಗಳು]

ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಮೂಲಕ ಬಡ ಮತ್ತು ದುರ್ಭಲ ವರ್ಗದ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ. ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದು ಅಥವಾ ವಿಲೀನಗೊಳಿಸುವ ಕಾರ್ಯ ನಾಡ ದ್ರೋಹದ ಕಾರ್ಯವಾಗಿದೆ ಎಂದು ಎಸ್‌ಎಫ್‌ಐ ಹೇಳಿದೆ. [ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿ, ಪೋಷಕರ ಗಮನಕ್ಕೆ]

ಶಾಲೆಗಳು ಶಿಕ್ಷಕರು, ಕೊಠಡಿ ಕೊರತೆಗಳಿಂದ ಸೊರಗುತ್ತಿವೆ. ಅನೇಕ ಕಟ್ಟಡಗಳು ಶಿಥಿಲಾವಸ್ತೆ ಇದೆ. ಮಕ್ಕಳು ಕಡಿಮೆ ಇದ್ದಾರೆ ಎಂದು ಶಾಲೆಗಳನ್ನು ಮುಚ್ಚುವುದು ಪರ್ಯಾಯ ವ್ಯವಸ್ಥೆಯಲ್ಲ. ಬದಲಾಗಿ ಆ ಶಾಲೆಗಳಿಗೆ ಮೂಲ ಸೌಲಭ್ಯ ನೀಡಿ ಮಕ್ಕಳನ್ನು ಕರೆತರುವ ಕೆಲಸವಾಗಬೇಕು ಎಂದು ಎಸ್‌ಎಫ್‌ಐ ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ. [ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!]

ಬೀದರ್‌ ಜಿಲ್ಲೆಯ 56, ಬೆಳಗಾವಿಯ 63, ಮಂಡ್ಯದ 191, ಮೈಸೂರಿನ 98, ರಾಮನಗರದ 177, ಕೊಡಗಿನ 39, ಶಿವಮೊಗ್ಗದ 167 ಶಾಲೆಗಳ ವಿಲೀನಕ್ಕೆ ಹಾಕಿರುವ ಆದೇಶವನ್ನು ವಾಪಸ್ ಪಡೆಯಬೇಕು ಮತ್ತು ಶಾಲೆಗಳನ್ನು ಮುಚ್ಚುವ ಬದಲಾಗಿ ವಿಶೇಷ ಆದ್ಯತೆಯನ್ನಾಗಿ ಪರಿಗಣಿಸಿ, ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದೆ.

ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ರಾಜ್ಯ ಉಪಾಧ್ಯಕ್ಷ ಬಸವರಾಜ್ ಪೂಜಾರ್, ಜಿಲ್ಲಾಧ್ಯಕ್ಷ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka government would not close down Kannada schools even if the number of students is less said, Primary and Secondary Education Kimmane Ratnakar. Student Federation of India (SFI) members met minister and demand to develop Kannada school.
Please Wait while comments are loading...