Get Updates
Get notified of breaking news, exclusive insights, and must-see stories!

6 ವರ್ಷ ಕಳೆದರೂ ಸಾರಿಗೆ ನೌಕರರ ವೇತನ ಬಿಡಿಗಾಸು ಹೆಚ್ಚಳವಿಲ್ಲ!

ಬೆಂಗಳೂರು, ಜೂ. 2: ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗಿ ಆರು ವರ್ಷಗಳು ಕಳೆದಿವೆ. ವೇತನ ಪರಿಷ್ಕರಣೆಗೆ ಆಗ್ರಹಿಸಿ ಹೋರಾಟ ನಡೆಸಿ ಒಂದು ವರ್ಷ ಮುಗಿದಿದೆ. ಅಚ್ಚರಿ ಏನೆಂದರೆ ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸಣ್ಣ ಪ್ರಯತ್ನ ಮಾಡಿಲ್ಲ. ಸಾರಿಗೆ ನಿಗಮಗಳ ನಿರ್ಲಕ್ಷ್ಯ ನಡೆಯಿಂದ ಬೇಸತ್ತ ನೌಕರರ ಆಕ್ರೋಶ ಮತ್ತೆ ಬುಗಿಲೆದ್ದಿದೆ!

ದಿನಸಿಗಳ ಬೆಲೆ ಜಾಸ್ತಿಯಾಗಿದೆ. ಮನೆ ಬಾಡಿಗೆ ದುಪ್ಪಟ್ಟು ಆಗಿದೆ. ಮಕ್ಕಳ ಶಾಲಾ ಶುಲ್ಕ ಹೆಚ್ಚಳವಾಗಿದೆ. ಬರುವ ಸಂಬಳದಲ್ಲಿ ಕನಿಷ್ಠ ಜೀವನ ಸಾಗಿಸಲು ಇವತ್ತಿನ ದಿನಗಳಲ್ಲಿದುರ್ಲಭವಾಗಿದೆ. ಅದರಲ್ಲೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಂತೂ ದುಬಾರಿ ದುನಿಯಾದಿಂದ ಕಂಗಾಲಾಗಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ಇದರ ಬಗ್ಗೆ ಪ್ರಸ್ತಾಪವೂ ಮಾಡಿಲ್ಲ. ಸಾರಿಗೆ ನಿಗಮಗಳ ನಡೆಯ ಬಗ್ಗೆ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಇಲಾಖೆ ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಅರ್ಜಿಗೆ ನೀಡಿರುವ ಉತ್ತರ ಕೋವಿಡ್ ಕಾರಣ. ಕರ್ನಾಟಕದಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು ಮಾರ್ಚ್ 2020 ರಲ್ಲಿ. ನಿಯಮಬದ್ಧವಾಗಿ ನೋಡಿದ್ರೆ 2020 ಮಾರ್ಚ್ ವೇಳೆಗೆ ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗಬೇಕಿತ್ತು. 2016 ರಲ್ಲಿ ವೇತನ ಪರಿಷ್ಕರಣೆಯಾಗಿತ್ತು. ನಾಲ್ಕು ವರ್ಷ ನಾಲ್ಕು ಸಾರಿಗೆ ನಿಗಮಗಳು ಸುವ್ಯವಸ್ಥಿತವಾಗಿ ನಡೆದರೂ ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಣ್ಣ ಪ್ರಸ್ತಪವಾಗಿಲ್ಲ ಎಂಬುದು ದಾಖಲೆಗಳಲ್ಲಿಯೇ ಬಹಿರಂಗವಾಗಿದೆ. ನಿಗಮಗಳ ಆಡಳಿತದ ಕಾರ್ಯವೈಖರಿ ನೋಡಿ ಬೇಸರಗೊಂಡಿದ್ದಾರೆ.

ಕರ್ನಾಟಕದಲ್ಲಿ 1.35 ಲಕ್ಷ ಸಾರಿಗೆ ನೌಕರರು:

ಕರ್ನಾಟಕದಲ್ಲಿ 1.35 ಲಕ್ಷ ಸಾರಿಗೆ ನೌಕರರು:

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಆಗ್ನೇಯ ಕರ್ನಾಟಕ ಸಾರಿಗೆ ಸಂಸ್ಥೆ ಒಳಗೊಂಡು ನಾಲ್ಕು ನಿಮಗಳಲ್ಲಿ 1.35 ಲಕ್ಷ ನೌಕರರು ನಿರ್ವಾಹಕರಾಗಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ನೌಕರರ ವೇತನ ಪರಿಷ್ಕರಣೆ ಬೇಡಿಕೆ ಈಡೇರಿಸಿದ್ದರು. ಶೇ. 12. 5 ಸರಾಸರಿ ವೇತನ ಹೆಚ್ಚಳ ಮಡಿ ಸಾರಿಗೆ ನೌಕರರ ಕಷ್ಟಕ್ಕೆ ಮಿಡಿದಿದ್ದರು.

ಹೋರಾಟ ನಡೆಸಿ ಒಂದು ವರ್ಷ ಪೂರ್ಣ:

ಹೋರಾಟ ನಡೆಸಿ ಒಂದು ವರ್ಷ ಪೂರ್ಣ:

ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವಂತೆ 2019 ರಲ್ಲಿಯೇ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದ್ದರು. ನಿಯಮ ಬದ್ಧವಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. ಆದರಂತೆ 2020 ರಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ, 2020 ರಲ್ಲಿ ವೇತನ ಪರಿಷ್ಕರಣೆ ಸಣ್ಣ ಪ್ರಯತ್ನವೂ ನಡೆಯಲಿಲ್ಲ. ಇದರಿಂದ ರೋಸಿಹೋದ ಸಾರಿಗೆ ನೌಕರರು ರಾಜ್ಯದಲ್ಲಿ 2021 ರ ಏಪ್ರಿಲ್ ನಲ್ಲಿ ಸೇವೆ ಬಹಿಷ್ಕರಿಸಿ ಬೃಹತ್ ಹೋರಾಟ ನಡೆಸಿದ್ದರು. ರಾಜ್ಯದ ಇಡೀ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿತ್ತು. ವೇತನ ಪರಿಷ್ಕರಣೆ ಬೇಡಿಕೆ ಈಡೇರಿಸುತ್ತೇವೆ ಮುಷ್ಕರ ವಾಪಸು ಪಡೆದುಕೊಳ್ಳಿ ಎಂದು ಭರವಸೆ ನೀಡಿದ ಬಳಿಕ ಸಾರಿಗೆ ನೌಕರರು ಮುಷ್ಕರ ವಾಪಸು ಪಡೆದಿದ್ದರು. ಹೋರಾಟ ಮುಗಿದು ಒಂದು ವರ್ಷದ ಮೇಲೆ ಒಂದು ತಿಂಗಳು ಕಳೆದಿದೆ. ಈವರೆಗೂ ನೌಕರರ ವೇತನ ಪರಿಷ್ಕರಣೆ ಸಂಬಂಧ ಸಣ್ಣ ಪ್ರಯತ್ನವೂ ನಡೆದಿಲ್ಲ. ಈ ಬೆಳವಣಿಗೆಯಿಂದ ಸಾರಿಗೆ ನೌಕರರು ಪುನಃ ಬೇಸತ್ತಿದ್ದಾರೆ. ಹೊಸ ಹೋರಾಟ ಮಾರ್ಗದ ಬಗ್ಗೆ ಆಲೋಚಿಸುತ್ತಿದ್ದಾರೆ.

ಆರ್‌ಟಿಐ ಅರ್ಜಿಯಲ್ಲಿ ಕೇಳಿದ್ದ ಮಾಹಿತಿ:

ಆರ್‌ಟಿಐ ಅರ್ಜಿಯಲ್ಲಿ ಕೇಳಿದ್ದ ಮಾಹಿತಿ:

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಸಾರಿಗೆ ನೌಕರರು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ರೆ, ನಿಗಮಗಳು ನೀಡಿರುವ ಉತ್ತರ ನೋಡಿದ್ರೆ ತಲೆ ಗಿರಗಟ್ಲೆ ಹೊಡೆಯುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆ, ನಿಗಮಗಳ ಆರ್ಥಿಕ ಪರಿಸ್ಥಿತಿ, ನೌಕರರ ಮುಷ್ಕರ, 2021 ರಲ್ಲಿ ಕೆಲಸ ಬಹಿಷ್ಕರಿಸಿ ನಡೆಸಿದ ಮುಷ್ಕರ, ಈ ಎಲ್ಲಾ ಕಾರಣಗಳಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಿರುವುದಿಲ್ಲ. ಈ ಸಂಬಂಧ ಸರ್ಕಾರದೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ ಎಂದು ಉತ್ತರ ನೀಡಿದೆ. ಈ ಮೂಲಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಪ್ರಸ್ತಾಪವೇ ಸರ್ಕಾರದ ಮುಂದಿಟ್ಟಿಲ್ಲ ಎಂಬ ಅಸಲಿ ಸತ್ಯ ಹೊರ ಬಿದ್ದಿದೆ.

ಸಮಿತಿ ರಚಿಸಿದ್ದ ಸರ್ಕಾರ

ಸಮಿತಿ ರಚಿಸಿದ್ದ ಸರ್ಕಾರ

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ , ಭತ್ಯೆ ಹೆಚ್ಚಳ ಮಾಡುವ ಪ್ರಸ್ತಾಪವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೈ ಬಿಟ್ಟಿದ್ದರು. ಯಡಿಯೂರಪ್ಪ ಒಂದು ಕರೆ ಮಾಡುತ್ತಿದ್ದಂತೆ ಎದ್ನೋ ಬಿದ್ನೋ ಅಂತ ಬೊಮ್ಮಯಿ ಆಯೋಗ ರಚನೆ ಮಾಡಿ ಆದೇಶಿಸಿದ್ದರು. ಆದರೆ ಸಾರಿಗೆ ನೌಕರರ ವಿಚಾರದಲ್ಲಿ ಯಾವೊಬ್ಬ ನಾಯಕ ಕೂಡ ಧ್ವನಿಯೆತ್ತಿಲ್ಲ. ಮುಷ್ಕರದ ನೆಪ ಇಟ್ಟು ಸಾರಿಗೆ ನೌಕರರ ಕನಿಷ್ಠ ಜೀವನದ ಹಕ್ಕನ್ನು ನಿಗಮಗಳು ಕಸಿದುಕೊಳ್ಳುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ಚುನಾವಣೆಗಳಲ್ಲಿ ಸಾರಿಗೆ ನೌಕರರು ಮತ್ತೆ ಬೀದಿಗೆ ಇಳಿದರೂ ಅಚ್ಚರಿ ಪಡಬೇಕಿಲ್ಲ.

Recommended Video

      U. T. Khader: ಹಿಜಾಬ್ ವಿವಾದ; 'ವಿದ್ಯಾರ್ಥಿನಿಯರಿಗೆ ಬುದ್ದಿ ಹೇಳಲು ನಾವ್ಯಾರು? | #Politics |OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+