
ಅಮುಲ್‌ನೊಂದಿಗೆ ಕೆಎಂಎಫ್ ವಿಲೀನ?: ಸಚಿವ ಸೋಮಶೇಖರ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 11: ಕೆಎಂಎಫ್ ಅನ್ನು ಅಮುಲ್‌ನೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.
ನೈಸರ್ಗಿಕ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಅಮುಲ್ ಮತ್ತು ಇತರ ಐದು ಸಹಕಾರಿ ಸಂಘಗಳನ್ನು ವಿಲೀನಗೊಳಿಸಲು ಬಹು ರಾಜ್ಯ ಸಹಕಾರಿ ಸಂಘವನ್ನು ರಚಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಹೇಳಿಕೆಯ ನಂತರ ಕೆಎಂಎಫ್ ಅನ್ನು ಅಮೂಲ್‌ನೊಂದಿಗೆ ವಿಲೀನ ಮಾಡಲಾಗುತ್ತದೆ ಎಂದು ವದಂತಿಗಳು ಹಬ್ಬಿದ್ದವು.
Breaking: ಸಿಹಿ ಸುದ್ದಿ: ಹಾಲಿನ ದರ ಏರಿಕೆಗೆ ಬ್ರೇಕ್ ಹಾಕಿದ ಮುಖ್ಯಮಂತ್ರಿ
ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ನಡೆದ ಈಶಾನ್ಯ ಕೌನ್ಸಿಲ್‌ನ 70ನೇ ಸರ್ವಸದಸ್ಯರ ಸಭೆಯಲ್ಲಿ ಶಾ ಈ ವಿಷಯ ತಿಳಿಸಿದ್ದರು. ಈ ಬಗ್ಗೆ ನಾನು ಕಳೆದ ತಿಂಗಳು ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಹಕಾರ ಮಂತ್ರಿಗಳ ಸಮಾವೇಶದಲ್ಲಿ ಭಾಗವಹಿಸಿದ್ದೆವು. ನಾವು ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ, ಆದರೆ ಕೆಎಂಎಫ್ ವಿಲೀನದ ಬಗ್ಗೆ ಚರ್ಚೆಯಾಗಲಿಲ್ಲಿ ಎಂದು ಸೋಮಶೇಖರ್ ತಿಳಿಸಿದರು.
ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರ ಹೇಳಿಕೆಯ ಬಗ್ಗೆ ಮಾತನಾಡಿದ ಅವರು ಶಾ ಅವರ ಹೇಳಿಕೆ ನೀಡಿದ ಸಂದರ್ಭದ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಆದ್ದರಿಂದ ಯಾವುದೇ ಹೆಚ್ಚಿನ ಹೇಳಿಕೆಗಳನ್ನು ಮಾಡುವುದರಿಂದ ದೂರವಿರುವುದಾಗಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
Nandini Milk Price : ಕರ್ನಾಟಕದಲ್ಲಿ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಲಿಮಿಟೆಡ್ (ಕೆಎಂಎಫ್) ನೊಂದಿಗೆ ಅಮುಲ್ ವಿಲೀನದ ಕುರಿತಾದ ಊಹಾಪೋಹಗಳು ಭಾರಿ ಸದ್ದು ಮಾಡಿದ್ದವು. ಹಲವಾರು ಟ್ವಿಟರ್ ಬಳಕೆದಾರರು ಇದನ್ನು ನಂದಿನಿ ಬ್ರಾಂಡ್ ಅನ್ನು ಮುಗಿಸುವ ಪ್ರಯತ್ನ ಎಂದು ಕರೆದರು. ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಅವರು ನಂದಿನಿ ಬ್ರಾಂಡ್‌ನ್ನು ಮುಚ್ಚಲು ಮಾಡುವ ಪ್ರಯತ್ನವಾಗಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಸಹಕಾರಿ ಘಟಕಗಳನ್ನು ರಚಿಸುವುದು ಹೊಸದಲ್ಲ
ಇದಕ್ಕೆ ಪ್ರತಿಕ್ರಿಯಿಸಿದ ಕ್ರುಶಿಕಾ ಎ ವಿ, ಕೆಎಂಎಫ್ ಅನ್ನು ಗುಜರಾತ್ ಸಹಕಾರ ಒಕ್ಕೂಟದೊಂದಿಗೆ ವಿಲೀನಗೊಳಿಸಲಾಗುವುದು ಎಂದು ಸುದ್ದಿ ಇದೆ. ಆದರೆ ಸಹಕಾರಿ ಸಂಸ್ಥೆಗಳ ಕೇಂದ್ರೀಕರಣ ಏಕೆ ಎಂದು ಕೇಳಿದ್ದಾರೆ. ಏತನ್ಮಧ್ಯೆ 1973 ರಲ್ಲಿ ಸ್ಥಾಪಿಸಲಾದ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್ ಅಥವಾ ಕ್ಯಾಂಪ್ಕೊದ ಉದಾಹರಣೆಯನ್ನು ಉಲ್ಲೇಖಿಸಿ, ಕರ್ನಾಟಕಕ್ಕೆ ಬಹು ರಾಜ್ಯ ಸಹಕಾರಿ ಘಟಕಗಳನ್ನು ರಚಿಸುವುದು ಹೊಸದಲ್ಲ ಎಂದು ನಿವೃತ್ತ ಕೃಷಿ ವ್ಯವಹಾರ ನಿರ್ವಹಣೆ ಪ್ರಾಧ್ಯಾಪಕ ವೆಂಕಟ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಆರ್ಥಿಕವಾಗಿ ಬುದ್ಧಿವಂತ ಕ್ರಮ
ಅಮುಲ್ ಮತ್ತು ಇತರ ಐದು ಸಹಕಾರ ಸಂಘಗಳನ್ನು ವಿಲೀನಗೊಳಿಸಿ ದೊಡ್ಡ ಘಟಕವನ್ನು ರಚಿಸುವ ಅಮಿತ್ ಶಾ ಅವರ ಆಲೋಚನೆಯಲ್ಲಿ ಯಾವುದೇ ತಪ್ಪಿಲ್ಲ. ಇದು ಆರ್ಥಿಕವಾಗಿ ಬುದ್ಧಿವಂತ ಕ್ರಮವಾಗಿದೆ. ಏಕೆಂದರೆ ಇದು ಬಹಳಷ್ಟು ಸಂಪನ್ಮೂಲಗಳನ್ನು ಉಳಿಸುತ್ತದೆ ಮತ್ತು ಹೆಚ್ಚಿನ ಲಾಭವನ್ನು ಗಳಿಸುತ್ತದೆ ಮತ್ತು ವ್ಯಾಪಾರವನ್ನು ಹೆಚ್ಚಿಸುವುದು ಸುಲಭವಾದ ಕೆಲಸ ಅವರು ವಿವರಿಸಿದರು.

ಪ್ರಾದೇಶಿಕ ಸಂಸ್ಥೆಗಳ ಪ್ರಭಾವ ಕಡಿಮೆ
ಬಿಜೆಪಿಯ ಹಿರಿಯ ನಾಯಕರೊಬ್ಬರು, ದೊಡ್ಡ ಎಂಎಸ್‌ಯು ಅನ್ನು ರಚಿಸುವುದು ಉತ್ತಮ ವ್ಯಾಪಾರ ವಿಧಾನವಾಗಿರುತ್ತದೆ. ಆದರೆ ಇದು ಸಹಕಾರಿ ಸಂಸ್ಥೆಗಳ ಮೇಲೆ ಮಾತ್ರ ರಾಜಕೀಯ ವೃತ್ತಿ ಜೀವನವನ್ನು ಹೊಂದಿರುವ ಪ್ರಾದೇಶಿಕ ಸಂಸ್ಥೆಗಳ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಸಹಕಾರಿ ಸಂಸ್ಥೆಗಳು ಭಾರತದಲ್ಲಿ ಚುನಾವಣಾ ಹಣ ಮತ್ತು ತಂತ್ರಗಾರಿಕೆಯ ಬೆನ್ನೆಲುಬುಗಳಾಗಿವೆ ಎಂದರು.

ಒಂದೇ ಘಟಕವಾಗಿ ಮಾರ್ಪಾಡು ಸರಿಯಲ್ಲ
ಒಂದು ವೇಳೆ ಎಂಎಸ್‌ಯು ರಚನೆಯಾದರೆ ಕರ್ನಾಟಕವು ಹಲವಾರು ಜಿಲ್ಲಾ ಹಾಲು ಒಕ್ಕೂಟಗಳನ್ನು ಒಂದೇ ಘಟಕವಾಗಿ ವಿಲೀನಗೊಳಿಸಬೇಕಾಗಬಹುದು ಮತ್ತು ಇದು ಹಲವಾರು ರಾಜಕೀಯ ನೇಮಕಾತಿಗಳನ್ನು ಕಡಿಮೆ ಮಾಡುತ್ತದೆ. ಇದು ಪಕ್ಷದ ಭವಿಷ್ಯಕ್ಕೆ ಹಾನಿಕರ ಎಂದು ಸಾಬೀತುಪಡಿಸುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು.