• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಸರ್ಕಾರ ರಚನೆ ಕತ್ತಿ, ಪ್ರಸ್ತಾಪವೇ ಇಲ್ಲ ಯಡಿಯೂರಪ್ಪ!

|
   ಬಿಜೆಪಿ ಸರ್ಕಾರ ರಚನೆ ಕತ್ತಿ, ಪ್ರಸ್ತಾಪವೇ ಇಲ್ಲ ಯಡಿಯೂರಪ್ಪ! | Oneindia Kannada

   ಬೆಳಗಾವಿ, ಡಿಸೆಂಬರ್ 26 : 'ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 24 ಗಂಟೆಯಲ್ಲಿ ಪತನವಾಗಲಿದೆ. ನಂತರ ಒಂದು ವಾರದಲ್ಲಿ ಬಿಜೆಪಿ ಹೊಸ ಸರ್ಕಾರವನ್ನು ರಚನೆ ಮಾಡಲಿದೆ' ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಉಮೇಶ್ ಕತ್ತಿ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

   ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ ಉಮೇಶ್ ಕತ್ತಿ ಅವರು, 'ಈಗಾಗಲೇ ಕಾಂಗ್ರೆಸ್‌ನ 15 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾವುದೇ ಶಾಸಕರ ಹೆಸರು ಬಹಿರಂಗ ಪಡಿಸುವುದಿಲ್ಲ. ಇನ್ನು 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನವಾಗಲಿದೆ' ಎಂದು ಹೇಳಿದರು.

   ಸರ್ಕಾರ ಬೀಳದಿದ್ದರೆ ಉಮೇಶ್ ಕತ್ತಿ ರಾಜೀನಾಮೆ ನೀಡಲಿ: ದಿನೇಶ್

   ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, '24 ಗಂಟೆ ಏಕೆ ಈಗಲೇ ಸರ್ಕಾರ ಬೀಳುತ್ತೆ ಎಂದು ಹೇಳಲಿ. ಇವರು ಹೇಳಿದಂತೆ ಸರ್ಕರ ಬೀಳದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ' ಎಂದು ಸವಾಲು ಹಾಕಿದರು.

   ಮೈತ್ರಿ ಸರ್ಕಾರ ಪತನಕ್ಕೆ ಇನ್ನು 24 ಗಂಟೆಗಳು ಮಾತ್ರ: ಉಮೇಶ್ ಕತ್ತಿ

   ದಿನೇಶ್ ಗುಂಡೂರಾವ್ ಸವಾಲಿಗೆ ಪ್ರತಿಕ್ರಿಯೆ ನೀಡಿರುವ ಉಮೇಶ್ ಕತ್ತಿ ಅವರು, 'ಈಗಾಗಲೇ 10 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಬೀಳುವುದು ಗ್ಯಾರಂಟಿ, 15 ದಿನದಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ?' ಎಂದು ಪ್ರಶ್ನಿಸಿದರು....

   ಪರಮೇಶ್ವರ್ ಬಿಜೆಪಿಗೆ ಬರಲಿ: ಯಡಿಯೂರಪ್ಪ ಆಹ್ವಾನ ನೀಡಿದ್ದು ಏಕೆ?

   ಯಡಿಯೂರಪ್ಪ ಹೇಳಿದ್ದೇನು?

   ಯಡಿಯೂರಪ್ಪ ಹೇಳಿದ್ದೇನು?

   'ಮೈತ್ರಿ ಸರ್ಕಾರದ ಯಾವ ಶಾಸಕರೂ ನಮ್ಮ ಸಂಪರ್ಕದಲ್ಲಿಲ್ಲ. ಸಂಪರ್ಕ ಮಾಡುವ ಅವಶ್ಯಕತೆಯೂ ನಮಗೆ ಇಲ್ಲ ಕಾಲವೇ ಅದಕ್ಕೆಲ್ಲ ಉತ್ತರ ಕೊಡುತ್ತದೆ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇಂದು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲ್ಲ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ಮಾಡೋಕೆ ತೆರಳುತ್ತಿದ್ದೆನೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

   ಸರ್ಕಾರ ಬೀಳಸಲಿ ನೋಡೋಣ

   ಸರ್ಕಾರ ಬೀಳಸಲಿ ನೋಡೋಣ

   ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಸರ್ಕಾರ ಬೀಳಲು ಇವರ ಬಳಿ ಏನು ದಾಖಲೆ ಇದೆ. ತಾಕತ್‌ ಇದ್ದರೆ ಸರ್ಕಾರ ಬೀಳಿಸಲಿ ನೋಡೋಣ. ಸುಮ್ಮನೆ ಹುಚ್ಚು ಹುಚ್ಚಾಗಿ ಮಾತನಾಡಬಾರದು. ಸರ್ಕಾರ ಬೀಳದಿದ್ದರೆ ಉಮೇಶ್ ಕತ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ' ಎಂದು ಸವಾಲು ಹಾಕಿದರು.

   ಕಾಂಗ್ರೆಸ್ ಬಿಡೋದು ಖಚಿತ

   ಕಾಂಗ್ರೆಸ್ ಬಿಡೋದು ಖಚಿತ

   ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಬಿಡುವುದು ಖಚಿತ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಬಿಜೆಪಿ ನಾಯಕ ಕೆ.ಎನ್.ರಾಜಣ್ಣ 'ನನ್ನ ಪ್ರಕಾರ ಕಾಂಗ್ರೆಸ್‌ನಲ್ಲಿ ರಮೇಶ್ ಜಾರಕಿಹೊಳಿ ಅವರು ಇರುವುದಿಲ್ಲ. ಸರ್ಕಾರ ಉರುಳಿಸುತ್ತಾರಾ?. ಶಾಸಕರನ್ನು ಕರೆದುಕೊಂಡು ಹೋಗುತ್ತಾರಾ? ಸ್ಪಷ್ಟತೆ ಇಲ್ಲ' ಎಂದು ಹೇಳಿದರು.

   ಸಾಮೂಹಿಕ ರಾಜೀನಾಮೆ

   ಸಾಮೂಹಿಕ ರಾಜೀನಾಮೆ

   'ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಸಚಿವ ಸ್ಥಾನ ನೀಡದೆ ಹೈಕಮಾಂಡ್ ಅವರನ್ನು ಕಡೆಗಣಿಸಿದ್ದು ಬೇಸರ ತಂದಿದೆ' ಎಂದು ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.

   English summary
   Former minister and BJP leader Umesh Katti said that Party will form government. Karnataka BJP president B.S.Yeddyurappa denied the statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X