DK Shivakumar: ಗ್ಯಾರಂಟಿ ವಿಚಾರವಾಗಿ ಗಾಳಿ ಸುದ್ದಿಗೆ ತಲೆ ಕೆಡಿಸಿಕೊಂಡರೆ ನಾವು ಜವಾಬ್ದಾರರಲ್ಲ: ಡಿ.ಕೆ.ಶಿವಕುಮಾರ್‌

ಬೆಂಗಳೂರು, ಜೂನ್‌ 06: ಕಾಂಗ್ರೆಸ್ ನ ಐದು ಗ್ಯಾರಂಟಿ ಜಾರಿ ವಿಚಾರವಾಗಿ ಗಾಳಿ ಸುದ್ದಿಗೆ ಯಾರಾದ್ರೂ ತಲೆ ಕೆಡಿಸಿಕೊಂಡರೆ ನಾವು ಜವಾಬ್ದಾರರಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಈ ಕುರಿತು ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,‌ ಕಾಂಗ್ರೆಸ್ ಉಚಿತ ವಿದ್ಯುತ್ ಗ್ಯಾರಂಟಿ ವಿಚಾರವಾಗಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಒಂದು ಮನೆಗೆ ಒಂದೇ ಆರ್.ಆರ್ ನಂಬರ್ ಮಾತ್ರ ಪರಿಗಣನೆಗೆ ಷರತ್ತು ಹಾಕಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಗ್ಯಾರಂಟಿ ಘೋಷಣೆ ಬಗ್ಗೆ ಯಾರಿಗೂ ಯಾವ ಆಕ್ರೋಶವೂ ಇಲ್ಲ. ಕೇವಲ ನಿಮಗೆ ಆಕ್ರೋಶ ಅಷ್ಟೇ, ನಾವು ಅದಕ್ಕೆ ಕ್ಲಾರಿಟಿ ಕೊಡ್ತೇವೆ ಎಂದು ಹೇಳಿದರು.

DCM and Bangalore development minister DK Shivakumar

ಚುನಾವಣೆಯ ವೇಳೆ ನಾವು ಕೊಟ್ಟ ಗ್ಯಾರಂಟಿಗಳನ್ನ ನಾವು ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಎಲ್ಲರೂ ಸ್ವಲ್ಪ ತಾಳ್ಮೆ‌ಯಿಂದ ಇರಬೇಕು. ರಾಜಕೀಯವಾಗಿ ನಾವು ಏನ್ ಮಾತು ಕೊಟ್ಟಿದ್ದೇವೋ ಅದನ್ನು ಮಾಡುತ್ತೇವೆ. ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೇವೆ ಎಂದರು.

ಅಧಿಕಾರಿಗಳಿಗೆ ಅವರದ್ದೇ ಆಂಗಲ್ ಇರುತ್ತದೆ. ಯಾರಿಗೂ ಯಾವ ಆಕ್ರೋಶ, ಆತಂಕ ಬೇಡ. ಗಾಳಿ ಸುದ್ದಿ ಬಗ್ಗೆ ಯಾರಾದ್ರೂ ತಲೆ ಕೆಡಿಸಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ. ಎಲ್ಲವನ್ನೂ ಕೂತು ನಾವು ಚರ್ಚೆ ಮಾಡುತ್ತೇವೆ. ನಾವು ಏನು ಮಾತು ಕೊಟ್ಟಿದ್ದೇವೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+