• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಝಿರೋ ಟ್ರಾಫಿಕ್ ಬೇಡ : ಗೃಹ ಸಚಿವರ ಜನ ಮೆಚ್ಚುಗೆಯ ನಡೆ

|
   ಗೃಹ ಸಚಿವ ಬಸವರಾಜ ಬೊಮ್ಮಾಯಿಯ ಜನ ಮೆಚ್ಚುಗೆಯ ನಡೆ | Basavaraj Bommai

   ಬೆಂಗಳೂರು, ಆಗಸ್ಟ್ 31 : ಗೃಹ ಸಚಿವ ಬಸವರಾಜ ಬೊಮ್ಮಾಯಿ ಝಿರೋ ಟ್ರಾಫಿಕ್ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದ ಮೂವರು ಉಪ ಮುಖ್ಯಮಂತ್ರಿಗಳು ಝಿರೋ ಟ್ರಾಫಿಕ್ ವ್ಯವಸ್ಥೆ ಪಡೆದುಕೊಳ್ಳುವುದು ಬೇಡ ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು.

   ಸಚಿವ ಬಸವರಾಜ ಬೊಮ್ಮಾಯಿ ಝಿರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯದ ಗೃಹ ಸಚಿವರಿಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಸಚಿವರು ಇದನ್ನು ಬೇಡ ಎಂದಿದ್ದಾರೆ.

   3 ಉಪ ಮುಖ್ಯಮಂತ್ರಿಗಳಿಗೆ ಹೈಕಮಾಂಡ್‌ ಖಡಕ್ ಸಂದೇಶ!

   ಸಚಿವರು ಪೋಲಿಸ್ ಇಲಾಖೆ ನೀಡಿದ ಜೀರೋಟ್ರಾಫಿಕ್‌ನಿಂದ ಸಾಮಾನ್ಯ ಜನರಿಗೆ ತುಂಬಾ ತೊಂದರೆಗಳಾಗಿದ್ದು ಕಂಡುಬಂದಿದ್ದು ಈ ಕುರಿತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ #ZeroTraffic ನೀಡಬೇಡಿ ಎಂದು ಸೂಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

   ಕೊನೆಗೂ ಅಧಿಕೃತ : ಕರ್ನಾಟಕಕ್ಕೆ 3 ಉಪಮುಖ್ಯಮಂತ್ರಿಗಳು

   ಗೃಹ ಸಚಿವರು ಪ್ರತಿ ಬಾರಿ ಭೇಟಿ ನೀಡಿದಾಗ ಇಲಾಖೆ ವತಿಯಿಂದ ಅವರಿಗೆ ಗಾರ್ಡ್ ಆಫ್ ಹಾನರ್ ನೀಡಲಾಗುತ್ತದೆ. ಅದನ್ನು ಸಹ ನೀಡುವುದು ಬೇಡ ಎಂದು ಗೃಹ ಸಚಿವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

   ಉಪ ಮುಖ್ಯಮಂತ್ರಿ ಹುದ್ದೆಗೆ ಇರುವ ಅಧಿಕಾರ, ಸೌಲಭ್ಯವೇನು ಗೊತ್ತೇ?

   ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರಿಂದಾಗಿ ಬಿಜೆಪಿ ಹೈಕಮಾಂಡ್ ಮೂವರು ಉಪ ಮುಖ್ಯಮಂತ್ರಿಗಳಿಗೆ ಈ ವ್ಯವಸ್ಥೆ ಪಡೆದುಕೊಳ್ಳದಂತೆ ಸೂಚನೆ ಕೊಟ್ಟಿತ್ತು.

   English summary
   No need of zero traffic and guard of honour said Karnataka home minister Basavaraj Bommai.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X