• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 1 ರಿಂದ 5 ಲಕ್ಷ ರೂ.ಗೆ ಹೆಚ್ಚಿಸಿದ ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ನವೆಂಬರ್ 1: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಬೇಕಾದ ಉದ್ದೇಶದ ಹಿನ್ನೆಲೆ ಮುಂದಿನ ವರ್ಷದಿಂದ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 1 ಲಕ್ಷ ರೂಪಾಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅಪ್ಪುಗೆ ಮರಣೋತ್ತರ ರಾಜ್ಯೋತ್ಸವ ನೀಡಲು ಸಾಧ್ಯವಿಲ್ಲ: ಕಾರಣ ಬಿಚ್ಚಿಟ್ಟ ಸಚಿವ ಸುನೀಲ್ ಕುಮಾರ್ಅಪ್ಪುಗೆ ಮರಣೋತ್ತರ ರಾಜ್ಯೋತ್ಸವ ನೀಡಲು ಸಾಧ್ಯವಿಲ್ಲ: ಕಾರಣ ಬಿಚ್ಚಿಟ್ಟ ಸಚಿವ ಸುನೀಲ್ ಕುಮಾರ್

ರಾಜ್ಯದ ಯುವಕರು, ತಾಯಂದಿರು ಹಾಗೂ ದುಡಿಯುವ ವರ್ಗದ ಮೇಲೆ ನನಗೆ ಅಪಾರ ವಿಶ್ವಾಸವಿದೆ. ಕರುನಾಡು ಶ್ರೀಮಂತವಾಗಬೇಕಿದ್ದಲ್ಲಿ ಮೊದಲು ಜನರು ಶ್ರೀಮಂತರಾಗಬೇಕು. ತಲಾ ಆದಾಯ ಹೆಚ್ಚಾದರೆ ಮಾತ್ರ ರಾಜ್ಯದ ಆದಾಯವು ಹೆಚ್ಚಾಗುತ್ತದೆ. ಜನರಿಂದ ನಾಡು ಕೂಡ ಶ್ರೀಮಂತವಾಗುತ್ತದೆ. ದೀನ ದಲಿತರು, ಹಿಂದುಳಿದ ವರ್ಗದವರು, ರೈತರು ಹಾಗೂ ಎಲ್ಲ ವರ್ಗದ ಜನರ ತಲಾ ಆದಾಯ ಹೆಚ್ಚಾಗಬೇಕಿದೆ.

ಸಾಮಾನ್ಯ ದಿನಗಳನ್ನು ನಾವು ದುಡಿಮೆ ದಿನಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಆರ್ಥಿಕ ಚಟುವಟಿಕೆಗೆ ಅಗತ್ಯವಾದ ನೆರವು ಮತ್ತು ಸಹಕಾರವನ್ನು ಸರ್ಕಾರದಿಂದ ಒದಗಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯವನ್ನು ಶ್ರೀಮಂತಗೊಳಿಸುವ ಬಗ್ಗೆ ಉಲ್ಲೇಖ

ರಾಜ್ಯವನ್ನು ಶ್ರೀಮಂತಗೊಳಿಸುವ ಬಗ್ಗೆ ಉಲ್ಲೇಖ

2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡುವುದರ ಜೊತೆಗೆ ಅವರ ಪರಿಶ್ರಮದ ಬಗ್ಗೆ ಹೇಳುತ್ತಿದ್ದೇನೆ. ಪರಿಶ್ರಮದಿಂದ ನಾಡನ್ನು ಹೇಗೆ ಶ್ರೀಮಂತಗೊಳಿಸಬೇಕು ಎಂಬುದಕ್ಕೆ ಭದ್ರ ಅಡಿಪಾಯ ಹಾಕಬೇಕಿದೆ. ಈ ನಿಟ್ಟಿನಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದ್ದರಿಂದ ಕನ್ನಡ ನಾಡು ಕಟ್ಟುವುದಕ್ಕೆ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ಕನ್ನಡಿಗರೆಲ್ಲ ಸೇರಿಕೊಂಡಾಗ ಮಾತ್ರ ಈ ಕಾರ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.

ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ

ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ

ಕರ್ನಾಟಕದಲ್ಲಿ ಮುಂದಿನ ಬಾರಿ ಯಾವುದೇ ರೀತಿ ಅರ್ಜಿಗಳನ್ನು ತೆಗೆದುಕೊಂಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವುದಿಲ್ಲ. ಯಾರೂ ಬಯೋಡೆಟಾ ಸಿದ್ಧಪಡಿಸುವ ಅವಶ್ಯಕತೆಯಿಲ್ಲ. ಪೇಪರ್ ಕಟ್ಟಿಂಗ್ ಅನ್ನು ಜೋಡಿಸುವ ಅವಶ್ಯಕತೆಯಿಲ್ಲ. ಸರ್ಕಾರ ಮತ್ತು ಆಯ್ಕೆ ಸಮಿತಿಯು ಯೋಗ್ಯರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತೇನೆ. ಆ ಮೂಲಕ ಪ್ರಶಸ್ತಿ ಮೌಲ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತೇವೆ.
ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ. ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೌಲ್ಯ ಹೆಚ್ಚಿಸುವ ಮಾತು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೌಲ್ಯ ಹೆಚ್ಚಿಸುವ ಮಾತು

ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗಳು ಸಾಕಷ್ಟು ಮೌಲ್ಯಯುತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ಮೌಲ್ಯ ಹೆಚ್ಚಾಗಬೇಕು, ಹಾಗೆ ಮೌಲ್ಯ ಹೆಚ್ಚಾಗಬೇಕಿದ್ದಲ್ಲಿ ಆಯ್ಕೆ ಪ್ರಕ್ರಿಯೆ ಬದಲಾಗಲೇಬೇಕು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾಡದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು. ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ, ಮನಸ್ಸು ಒಳ್ಳೆಯದಿರಬೇಕು. ಪೌರಕಾರ್ಮಿಕರಿಗೆ ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ. ಆಯ್ಕೆ ಶೋಧನೆಯಿಂದಾಗಬೇಕು ಹೊರತಾಗಿ ಅರ್ಜಿಗಳಿಂದ ಅಲ್ಲ ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿಗೆ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮಿತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರನ್ನು ಅಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರತಿಭೆ ಮತ್ತು ಪ್ರಶಸ್ತಿ ಪಡೆಯಲು ವಯಸ್ಸಿನ ಮಿತಿಯಿಲ್ಲ

ಪ್ರತಿಭೆ ಮತ್ತು ಪ್ರಶಸ್ತಿ ಪಡೆಯಲು ವಯಸ್ಸಿನ ಮಿತಿಯಿಲ್ಲ

60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು ಈ ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರತಿಭೆ ಎನ್ನುವುದು ಯಾವು ರೀತಿ ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೇಷ್ಟೋ ಮಕ್ಕಳು ಎಷ್ಟೊಂದು ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ನಾಡಿನ ನೀರಜ್ ಛೋಪ್ರಾ ಒಬ್ಬರಿಗೆ ಒಲಂಪಿಕ್ಸ್ ಚಿನ್ನದ ಪದಕ ಸಿಕ್ಕಿದ್ದು, ಇಡೀ ದೇಶಕ್ಕೆ ಸ್ಫೂರ್ತಿ ದೊರೆತಿದೆ. ವಯಸ್ಸನ್ನು ಮಿತಿಯನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

   ಕರ್ನಾಟಕ ರಾಜ್ಯೋತ್ಸವ:ನಮ್ಮ ಭಾಷೆ ನಮ್ಮ ಹೆಮ್ಮೆ | Oneindia Kannada
   English summary
   No Need to File Application for Kannada Rajyotsava Prize in Future: CM Basavaraj Bommai.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion