ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಲಾಕ್ ಡೌನ್, ಸಚಿವರ ಸ್ಪಷ್ಟೀಕರಣ: ಏನಿದು ಮೈಕ್ರೋ ಕಂಟೇನ್ಮೆಂಟ್ ಸೀಲ್ಡೌನ್?

|
Google Oneindia Kannada News

ಬೆಂಗಳೂರು, ಸೆ 25: ಎರಡು ದಿನದ ಹಿಂದೆ ಪ್ರಧಾನಿ ಮೋದಿ, ಕರ್ನಾಟಕವೂ ಸೇರಿದಂತೆ, ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ವರ್ಚುಯಲ್ ಸಂವಾದ, ಲಾಕ್ ಡೌನ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟನೆಯನ್ನು ನೀಡಿದ್ದಾರೆ. ಲಾಕ್ ಡೌನ್ ಹೇರುವ ಯಾವ ಚಿಂತನೆಯೂ ಸರಕಾರದ ಮುಂದಿಲ್ಲ, ಗಾಳಿ ಸುದ್ದಿಗೆ ಯಾರೂ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ಸಿಎಂಗಳ ಜೊತೆ ಸಂವಾದದ ಬೆನ್ನಲ್ಲೇ ಪಿಎಂ ಮೋದಿ ಟ್ವೀಟ್: ಮತ್ತೆ ಲಾಕ್ ಡೌನ್ ಗುಮ್ಮ!ಸಿಎಂಗಳ ಜೊತೆ ಸಂವಾದದ ಬೆನ್ನಲ್ಲೇ ಪಿಎಂ ಮೋದಿ ಟ್ವೀಟ್: ಮತ್ತೆ ಲಾಕ್ ಡೌನ್ ಗುಮ್ಮ!

ಆದರೆ, ಲಾಕ್ ಡೌನ್ ಬದಲು ಮೈಕ್ರೋ ಕಂಟೇನ್ಮೆಂಟ್ ಮತ್ತು ಮ್ಯಾಕ್ರೋ ಕಂಟೇನ್ಮೆಂಟ್ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಈ ವಿಚಾರವನ್ನು, ಸಿಎಂಗಳ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಒತ್ತಿ ಹೇಳಿದ್ದರು.

"ಮೈಕ್ರೋ ಕಂಟೇನ್ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿ, ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಈ ಬಗ್ಗೆ ಗಮನ ಹರಿಸಿ, ಲಾಕ್ ಡೌನ್ ಮಾಡುವುದರಿಂದ, ಕೊರೊನಾ ನಿಯಂತ್ರಣಕ್ಕೆ ತರಬಹುದೇ ಎನ್ನುವುದರ ಬಗ್ಗೆ ಗಮನಹರಿಸಿ"ಎಂದು ಮೋದಿ, ರಾಜ್ಯಕ್ಕೆ ಸೂಚನೆಯನ್ನು ನೀಡಿದ್ದರು. ಏನಿದು ಮೈಕ್ರೋ ಕಂಟೇನ್ಮೆಂಟ್ ಝೋನ್? ಮುಂದೆ ಓದಿ..

ಡಾ.ಸುಧಾಕರ್ ಸ್ಪಷ್ಟನೆ

ಡಾ.ಸುಧಾಕರ್ ಸ್ಪಷ್ಟನೆ

"ಪ್ರಧಾನಿಗಳ ಜೊತೆಗಿನ ವಿಡಿಯೋ ಸಂವಾದದ ವೇಳೆ ಲಾಕ್‌ ಡೌನ್‌ ವಿಚಾರ ಚರ್ಚೆಯಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಗೆ ತರುವ ಪ್ರಶ್ನೆ ಉದ್ಭವವಾಗುವುದಿಲ್ಲ. ಇಂತಹ ಸುದ್ದಿಗಳನ್ನು ಯಾರೂ ನಂಬಬಾರದು. ಆದರೆ, ಸೋಂಕಿತರು ಜಾಸ್ತಿ ಇರುವ ಪ್ರದೇಶಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಸೀಲ್ಡೌನ್ ಮಾಡುವ ಚಿಂತನೆಯಿದೆ"ಎಂದು ಡಾ.ಸುಧಾಕರ್ ಹೇಳಿದ್ದರು.

ಮೋದಿ ಟ್ವೀಟ್

ಮೋದಿ ಟ್ವೀಟ್

"ಸ್ಥಳೀಯವಾಗಿ ಒಂದೆರಡು ದಿನದ ಲಾಕ್ ಡೌನ್ ಜಾರಿಗೊಳಿಸಿದರೆ ಕೊರೊನಾ ತಡೆಯಲು ಇದರಿಂದ ಏನಾದರೂ ಪ್ರಯೋಜನವಾಗಲಿದೆಯೇ? ಲಾಕ್ ಡೌನ್ ಜಾರಿಗೊಳಿಸಿದರೆ ಆರ್ಥಿಕ ಚಟುವಟಿಕೆಗಳಿಗೆ ಏನಾದರೂ ಸಮಸ್ಯೆ ಆಗಲಿದೆಯೇ? ಇವೆರಡು ವಿಷಯಗಳ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕೆಂದು ಮನವಿ ಮಾಡುತ್ತೇನೆ"ಎಂದು ಮೋದಿ ಟ್ವೀಟ್ ಮಾಡಿದ್ದರು.

ಏನಿದು ಮೈಕ್ರೋ ಕಂಟೇನ್ಮೆಂಟ್ ಝೋನ್

ಏನಿದು ಮೈಕ್ರೋ ಕಂಟೇನ್ಮೆಂಟ್ ಝೋನ್

"ಸೋಂಕಿತರ ಮನೆ ಮತ್ತು ಪ್ರದೇಶಗಳನ್ನು ಮೈಕ್ರೋ ಮತ್ತು ಮ್ಯಾಕ್ರೋ ಎಂದು ವಿಭಾಗಿಸಲಾಗುವುದು. ಕೊರೊನಾ ಸೋಂಕಿತರು ಪತ್ತೆಯಾದ ಮತ್ತು ಹೋಂ ಐಸೋಲೇಶನ್ ಗೆ ಒಳಗಾಗಿರುವ ಮನೆಗಳನ್ನು ಮೈಕ್ರೋ ಕಂಟೇನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗುವುದು. ಮತ್ತು ಅಕ್ಕಪಕ್ಕದ ನಿವಾಸಿಗಳನ್ನು ಕಡ್ಡಾಯ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು"ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

Recommended Video

SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Kannada
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಯಾವುದೇ ಒಂದು ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಸೋಂಕಿತರು ಇದ್ದರೆ ಅದನ್ನು ಮ್ಯಾಕ್ರೋ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗುವುದು. ಸಂಪೂರ್ಣವಾಗಿ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುವುದು. ಮತ್ತು, ಮನೆಮನೆಗೆ ಹೋಗಿ ಆರೋಗ್ಯ ಸಮೀಕ್ಷೆ ನಡೆಸಿ, ಬೇರೆ ಯಾವುದಾದರೂ ಕಾರಣಕ್ಕೂ ಅನಾರೋಗ್ಯದಲ್ಲಿದ್ದವರನ್ನು ಕೊರೊನೊ ಪರೀಕ್ಷೆಗೆ ಒಳಪಡಿಸಲಾಗುವುದು.

English summary
No Lock Down But Micro And Macro Containment Zone System Will Be Implemented, BBMP Commissioner Manjunatha Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X