ಮತ್ತೆ ಶುರುವಾಯಿತು ಕಾವೇರಿ ನೀರು ಹಂಚಿಕೆ ಕಗ್ಗಂಟು

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಆಗಸ್ಟ್, 13: ಈ ಬಾರಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕೊರತೆಯಾಗಿರುವ ಕಾರಣ ತಮಿಳುನಾಡಿನೊಂದಿಗೆ ನೀರು ಹಂಚಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅಲ್ಲದೇ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಲ್ಲಿ(ಕಬಿನಿ, ಕೆಆರ್ ಎಸ್ ) ನಲ್ಲಿ ಕೇವಲ ಶೇ. 43 ರಷ್ಟು ನೀರು ಸಂಗ್ರಹಣೆ ಇದೆ. ನೀರಾವರಿ ಇರಲಿ ಮುಂದೆ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ.[ಕಬಿನಿಯಲ್ಲಿ ಮುಳುಗಿದ ದೆವಾಲಯಗಳ ಪಟ್ಟಿ]

karanataka

ಮುಂದಿನ ಬೇಸಿಗೆಯಲ್ಲಿ ಮತ್ತೆ ತಮಿಳುನಾಡಿನೊಂಡಿಗೆ ವಿವಾದ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿದೆ.[ಸಂಪರ್ಕ ಬೆಸೆದ ತೆಪ್ಪದಕಂಡಿಯ ತೂಗುಸೇತುವೆಯ ಕಂಡೆಯಾ?]

ರಾಜ್ಯಾದ್ಯಂತ ಮಳೆ ಪ್ರಮಾಣ ಇಳಿಮುಖವಾಗಿದೆ. ಈ ಸಾರಿ ಮಲೆನಾಡು ಭಾಗಗಳು ಇಲ್ಲಿಯವರೆಗೆ ವಾಡಿಕೆಗಿಂತ ಕಡಿಮೆ ಮಳೆ ಪಡೆದುಕೊಂಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With water levels in the Cauvery basin reservoirs remaining low, Karnataka is unable to release Cauvery water to Tamil Nadu as specified by the tribunal. For Karnataka, this is a distress year. The total capacity of reservoirs in the Cauvery basin is 115 tmcft, but at present, the availability is only 62 tmcft.
Please Wait while comments are loading...