ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳೇ ಹೆಚ್ಚು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಕಾಸರಗೋಡು, ಆಗಸ್ಟ್ 06 : ಕಾಸರಗೋಡಿನ ಸರಕಾರಿ ಜನರಲ್ ಆಸ್ಪತ್ರೆ ಸಮಸ್ಯೆಗಳಿಂದ ತುಂಬಿ ಹೋಗಿದೆ. ಬಡವರು ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳನ್ನೇ ಅವಲಂಭಿಸಿರುತ್ತಾರೆ. ಆದರೆ, ಈ ಆಸ್ಪತ್ರೆಯಲ್ಲಿ ಹಲವು ಉಪಕರಣಗಳು ಕೆಟ್ಟು ಹೋಗಿವೆ.

ಕಾಸರಗೋಡಿನ ಸರಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ನಿಂದ ಹಿಡಿದು ಶವಾಗಾರದ ಫ್ರೀಜರ್, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಉಪಕರಣಗಳು ಕೆಟ್ಟು ಹೋಗಿ ಹಲವು ತಿಂಗಳು ಕಳೆದಿದೆ. ಆದರೆ, ಯಾವುದೇ ಅಧಿಕಾರಿಗಳು ಇದರ ಬಗ್ಗೆ ಇಲ್ಲಿಯವರೆಗೆ ಗಮನ ಹರಿಸಿಲ್ಲ.[ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ]

kasaragod

ಉಪಕರಣಗಳದ್ದು ಒಂದು ಕಥೆಯಾದರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಪರದಾಡುತ್ತಿದ್ದಾರೆ. ಈ ಆಸ್ಪತ್ರೆ ಹೆಸರಿಗೆ ಮಾತ್ರವಿದೆ ಎಂಬಂತಾಗಿದೆ. ಇಲ್ಲಿ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.[ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ದುಬಾರಿ]

ತುರ್ತು ಪರಿಸ್ಥಿಯಲ್ಲಿ ಸಹಾಯಕ್ಕೆ ಬರುವಂತಹ ಆಸ್ಪತ್ರೆಯ ಆಬ್ಯುಲೆನ್ಸ್ ಈಗ ಗ್ಯಾರೇಜ್ ಸೇರಿದೆ. ಎಕ್ಸ್ ರೇ ಮಿಷನ್ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ, ಬಡ ರೋಗಿಗಳು ತಮ್ಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.[ಗ್ರಾಮೀಣ ಸೇವೆ ಮಾಡದ ಸರ್ಕಾರಿ ವೈದ್ಯರಿಗೆ 10 ಲಕ್ಷ ದಂಡ!]

English summary
There is no basic facilities at Kasaragod government hospital. Hospital also facing shortage of doctor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X