ಉತ್ತರ ಕರ್ನಾಟಕಕ್ಕೆ ತಪ್ಪದ ಅನ್ಯಾಯ: ಕೇಂದ್ರದಿಂದ ಅನ್ಯಾಯ ಆರೋಪ, ಏನಿದು ?

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಅನ್ಯಾಯವಾಗುವುದು ತಪ್ಪುತ್ತಿಲ್ಲ. ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ, ಮೂಲಸೌಕರ್ಯ ಹಾಗೂ ಶಿಕ್ಷಣ ಸೇರಿದಂತೆ ಕೆಲವು ವಿಚಾರಗಳಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಆಗಾಗ ವಿರೋಧಗಳು ವ್ಯಕ್ತವಾಗುತ್ತಲ್ಲೇ ಇವೆ. ಇದೀಗ ಏಮ್ಸ್‌ ವಿಚಾರದಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಚರ್ಚೆ ನಡೆದಿದೆ. ಇನ್ನು ಏಮ್ಸ್‌ನಿಂದ ಕರ್ನಾಟಕ ವಂಚಿತವಾಗುತ್ತಲ್ಲೇ ಇದೆ. ದೇಶದಲ್ಲೇ ಈಶಾನ್ಯ ಭಾರತದ ಕೆಲವು ಪ್ರಮುಖ ರಾಜ್ಯಗಳನ್ನು ಹೊರತುಪಡಿಸಿ ದೇಶದಾದ್ಯಂತ ಏಮ್ಸ್‌ ಆಸ್ಪತ್ರೆಗಳು ಇವೆ. ಆದರೆ, ಏಮ್ಸ್‌ ಆಸ್ಪತ್ರೆಯಿಂದ ವಂಚಿತವಾಗಿರುವ ಪ್ರಮುಖ ರಾಜ್ಯ ಕರ್ನಾಟಕ ಆಗಿದೆ.

ಹೌದು ದೇಶದ ಎಲ್ಲಾ ರಾಜ್ಯಗಳಲ್ಲೂ ಏಮ್ಸ್‌ ಆಸ್ಪತ್ರೆ ಇದೆ. ಆದರೆ ದಕ್ಷಿಣ ಭಾರತದಲ್ಲಿ ಹಾಗೂ ದೇಶದಲ್ಲಿ ಏಮ್ಸ್‌ ಆಸ್ಪತ್ರೆ ಇಲ್ಲದೆ ಇರುವ ಪ್ರಮುಖ ರಾಜ್ಯ ಕರ್ನಾಟಕ ಮಾತ್ರವಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆಯನ್ನು ಕೊಡುವುದಕ್ಕೆ ಏಮ್ಸ್‌ ಬೇಕಿದೆ ಎನ್ನುವುದು ದಶಕಗಳ ಬೇಡಿಕೆಯಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿದೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಈ ಸಂಬಂಧ ಪ್ರತಿಕ್ರಿಯಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ಈ ಸಂಬಂಧ ರಾಜ್ಯದ ಕಾಂಗ್ರೆಸ್‌ ಸಂಸದ ಜಿ ಕುಮಾರ್‌ ನಾಯಕ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

No AIIMS For Karnataka Unending Injustice For North Karnataka Opposition

ಏಮ್ಸ್‌ನಿಂದ ವಂಚಿತವಾಗಿರುವ ಭಾರತದ ಏಕೈಕ ಪ್ರಮುಖ ರಾಜ್ಯವೆಂದರೆ ಅದು ಕರ್ನಾಟಕ. ಕಲ್ಯಾಣ ಕರ್ನಾಟಕ ಹಾಗೂ ರಾಯಚೂರಿನ ಜನರಿಗೇಕೆ ಈ ರೀತಿ ಅನ್ಯಾಯ ಮಾಡಲಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳ ಪೈಕಿ ಎರಡನೇ ಅಗ್ರಗಣ್ಯ ರಾಜ್ಯ ಕರ್ನಾಟಕ. ದೇಶ ಕಟ್ಟಲು ಇಷ್ಟು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿರುವ ಹಾಗೂ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಲೇ ಇದೆ ಎಂದು ಅವರು ದೂರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ನಾನು ಈ ವಿಷಯವನ್ನು ಮುನ್ನೆಲೆಗೆ ತರಲು ಎಷ್ಟೇ ಪ್ರಯತ್ನ ಪಡುತ್ತಿದ್ದರೂ ಕೇಂದ್ರ ಸರ್ಕಾರವು ನಮ್ಮ ವಾದವನ್ನು ಹಗುರವಾಗಿ ನೋಡುತ್ತಿದೆ. ಅಷ್ಟಕ್ಕೂ ರಾಯಚೂರು ಹಾಗೂ ಯಾದಗಿರಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಏಕಿಷ್ಟು ನಿರ್ಲಕ್ಷ್ಯ, 2025ರಲ್ಲಾದರೂ ಈ ಎರಡೂ ಜಿಲ್ಲೆಗಳ ಬಗ್ಗೆ ಕಿಂಚಿತ್ತಾದ್ರೂ ಕಾಳಜಿ ತೋರುತ್ತದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ರಾಯಚೂರಿನಲ್ಲಿ ಏಮ್ಸ್‌ಗೆ ಪತ್ರ: ಇನ್ನು ಕರ್ನಾಟಕದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆ ಮಾಡಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಸಂಬಂಧ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಹ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಏಮ್ಸ್‌ ಅವಶ್ಯಕತೆ ಇದೆ ಎಂದು 2023ರಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ರಾಯಚೂರು ಇತರ ಪ್ರದೇಶಗಳಿಗಿಂತ ಕಡಿಮೆ ಆರೋಗ್ಯ, ಶಿಕ್ಷಣ ಹಾಗೂ ತಲಾ ಆದಾಯ ಇದೆ. ಅಲ್ಲದೆ ಹಲವು ಕಾರಣಗಳಿಗೆ ರಾಯಚೂರಿಗೆ ಸದೃಢ ವೈದ್ಯಕೀಯ ಸಂಸ್ಥೆಗಳ ಅವಶ್ಯಕತೆ ಇದೆ ಎಂದು ಹೇಳಲಾಗಿತ್ತು. ಇದಾಗಿ ಎರಡು ವರ್ಷವಾದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+