Get Updates
Get notified of breaking news, exclusive insights, and must-see stories!

ಚನ್ನಪಟ್ಟಣದಿಂದ ಅಪ್ಪನ ವಿರುದ್ದ ಮಗಳು ಸ್ಪರ್ಧೆಗೆ ವೇದಿಕೆ ರೆಡಿ?; ಇದು ಡಿಕೆ ಬ್ರದರ್ಸ್‌ ಹೊಸ ಅಸ್ತ್ರ?

ಬೆಂಗಳೂರು,ಜೂನ್‌ 24: ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಮೈತ್ರಿ ನಾಯಕರು ಕೊನೆಗೂ ಯಶಸ್ವಿಯಾಗಿದ್ದಾರೆ. ಹಾಲಿ ಸಂಸದರಾಗಿದ್ದ ಡಿ ಕೆ ಸುರೇಶ್‌ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಇದೀಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ನಾಯಕರ ವಿರುದ್ಧ ಡಿ ಕೆ ಬ್ರದರ್ಸ್‌ ತೊಡೆತಟ್ಟಿ ನಿಂತಿದ್ದಾರೆ.

ಕಮಲ-ದಳ ನಾಯಕರು ಡಿ ಕೆ ಬ್ರದರ್ಸ್‌ ಗೆ ಸೋಲಿನ ರುಚಿ ತೋರಿಸಲು ಪಣ ತೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ನಾಯಕ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಡಾ. ಮಂಜುನಾಥ್‌ ಅವರನ್ನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ಮೈತ್ರಿ ನಾಯಕರು ಕೊನೆ ಡಿ ಕೆ ಬ್ರದರ್ಸ್‌ ಭದ್ರ ಕೋಟೆಯನ್ನ ವಶಪಡಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಇದೀಗ ಹೀನಾಯವಾಗಿ ಸೋಲು ಕಂಡ ಡಿ ಕೆ ಬ್ರದರ್ಸ್‌ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಮಾಸ್ಟರ್‌ ಪ್ಲಾನ್‌ ನಡೆಸಿದ್ದಾರೆ.

Nisha Yogeshwar is going to Contest against her Father In Channapatna

ಚನ್ನಪಟ್ಟಣ ಕ್ಷೇತ್ರದ ಉಪಚುನಾಣೆಗೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಅವರನ್ನ ಕಣಕ್ಕಿಳಿಸಲು ಕಮಲ-ದಳ ನಾಯಕರು ಮುಂದಾಗಿದ್ದು, ಇತ್ತ ಕಾಂಗ್ರೆಸ್‌ ನಾಯಕರು ಚನ್ನಪಟ್ಟಣ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೇವೆ ಎಂದು ಹೇಳಿದ್ದರು. ಅಲ್ಲದೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ ಎಂದು ಹೇಳಿದ್ದು, ಮೈತ್ರಿ ನಾಯಕರಿಗೆ ಗೊಂದಲ ಸೃಷ್ಟಿಯಾಗುವಂತೆ ಮಾಡಿದ್ದರು.

ಇನ್ನೂ ಚನ್ನಪಟ್ಟಣದಲ್ಲಿ ಡಿ ಕೆ ಶಿವಕುಮಾರ್‌ ಸ್ಪರ್ಧೆ ಮಾಡುವ ಕುರಿತು ಕೈ ಪಾಳಯದಲ್ಲೇ ವಿರೋಧ ಕೇಳಿ ಬರುತ್ತಿದ್ದು, ಮೈತ್ರಿ ನಾಯಕರಿಗೆ ಠಕ್ಕರ್‌ ಕೊಡಲು ಹೊಸ ಅಸ್ತ್ರ ಪ್ರಯೋಗಕ್ಕೆ ಡಿ ಕೆ ಬ್ರದರ್ಸ್‌ ಮುಂದಾಗಿದ್ದಾರೆ. ಎಲ್ಲಾ ತಂತ್ರಗಾರಿಕೆಯ ನಡುವೆ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಸಲು ಕೈ ಪಾಯಳ ಸದ್ದಾಗಿದೆ. ಈ ಹಿಂದೆ ಕಾಂಗ್ರೆಸ್‌ ಸೇರ್ಪಡೆ ಕುರಿತು ನಿಶಾ ಯೋಗೇಶ್ವರ್‌ ಅವರು ಒಲವು ವ್ಯಕ್ತಪಸಿದ್ರು. ಆದರೆ, ಡಿ ಕೆ ಶಿವಕುಮಾರ್‌ ಈ ಬಗ್ಗೆ ಒಪ್ಪಿಗೆ ಸೂಚಿಸಿರಲಿಲ್ಲ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ ಕೆ ಸುರೇಶ್‌ ಅವರು ಸೋಲು ಕಂಡ ಬಳಿಕ ಚನ್ನಪಟ್ಟಣ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯಾಗಿ ನಿಶಾ ಯೋಗೇಶ್ವರ್‌ ಕಣಕ್ಕಿಳಿಸುವ ಕುರಿತು ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ ಕಾಂಗ್ರೆಸ್‌ ಸೇರಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+