Channapatna BY-Election: ನಿಖಿಲ್‌ ಕುಮಾರಸ್ವಾಮಿ ಬೆನ್ನಿಗೆ ನಿಂತ ಬಿಜೆಪಿ ಘಟಾನುಘಟಿ ನಾಯಕರು

ಚನ್ನಪಟ್ಟಣ, ಅಕ್ಟೋಬರ್‌ 25: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಪ್ರಧಾನಿಗಳ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಯಾಗಿ ಕಣಕ್ಕಿಳಿಯುತ್ತಿದ್ದಾರೆ. 2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಸ್ಪರ್ಧಿಸಿದ ಚುನಾವಣೆ ಅಂತೆಯೇ ಚನ್ನಪಟ್ಟಣ ಉಪಚುನಾವಣೆ ಕೂಡ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದ್ದು, ನಿಖಿಲ್‌ ಕುಮಾರಸ್ವಾಮಿ ಅವರ ಬೆನ್ನಿಗೆ ಬಿಜೆಪಿ ಘಟಾನುಘಟಿ ನಾಯಕರು ನಿಂತಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ ಸಿಗದ ಹಿನ್ನಲೆ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಬಿಜೆಪಿಗೆ ರಾಜೀನಾಮೆಯನ್ನ ನೀಡಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇತ್ತ ಕಳೆದು ಎರಡು ಚುನಾವಣೆಯಲ್ಲಿ ಸೋಲು ಕಂಡಿರುವ ನಿಖಿಲ್‌ ಕುಮಾರಸ್ವಾಮಿ ಅವರನ್ನ ಶತಾಯುಗತಾಯ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಮೈತ್ರಿ ನಾಯಕರು ಮುಂದಾಗಿದ್ದಾರೆ.

Nikhil Kumaraswamy Receives BJP Cadres Support in Channapatna

ಚನ್ನಪಟ್ಟಣ ಚುನಾವಣೆ ಕುರಿತು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಮಾತನಾಡಿ, ಚನ್ನಪಟ್ಟಣ ಉಪಚುನಾವಣೆ ನಾಳಿದ್ದು ತಾಲೂಕು ಸಭೆ ಆಯೋಜನೆ ಮಾಡುತ್ತೇವೆ. ಮುಖಂಡರಿಂದ ಕಾರ್ಯಕರ್ತರು ಆದಿಯಾಗಿ ಎಲ್ಲರು ಸಂಪೂರ್ಣ ಸಾಮರ್ಥ್ಯ ಹಾಕಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಶ್ರಮಿಸುತ್ತೇವೆ. ನಿಖಿಲ್ ಗೆ ಮೋದಿ ದೇವೇಗೌಡರು ಆಶೀರ್ವಾದ ಇದೆ. ನೂರಕ್ಕೆ ನೂರಷ್ಷು ಗೆಲ್ಲುತ ತೇವೆ. ಜೆಡಿಎಸ್ ಬಲಿಷ್ಠ ವಾಗಿದೆ. ಬಿಜೆಪಿ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಮತದಾರರಿಗೆ ಎನ್ ಡಿಎ ಪರವಾದ ಒಲವು ಇದೆ ಎಂದರು.

ಕಾರ್ಯಕರ್ತರ ಸಭೆ ನಡೆಸಿ ನಿಖಿಲ್ ಆಯ್ಕೆ ಮಾಡಿದ್ದಾರೆ. ಕಾರ್ಯಕರ್ತರು ರೆಬೆಲ್ ಆಗಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಬಹುದಿತ್ತು. ಕಾಂಗ್ರೆಸ್ ನ ಒಂದು ಟೀಮ್ ನಮಗೆ ಬೆಂಬಲ ನೀಡಲಿದೆ. ವಾಲ್ಮೀಕಿ, ಮುಡಾ, ಎಸ್ಸಿಎಸ್ಟಿ ಹಣ ದುರುಪಯೋಗ, ಗಣಿ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಸತಿಶ್ ಸೈಲ್ ಗೆ ಶಿಕ್ಷೆ ಆಗಿದೆ.ಹಗರಣಗಳ ಸರಮಾಲೆ, ಲೂಟಿಕೋರರ ಪಾರ್ಟಿ ಆಗಿದೆ. ಗಣಿ ಹಗರಣದಲ್ಲಿ ಪಾದಯಾತ್ರೆ ಮಾಡಿದರು. ಅದೇ ಪಕ್ಕದ ಶಾಸಕ ಗಣಿ ಲೂಟಿಯಲ್ಲಿ ಜೈಲು ಪಾಲಾಗಿದ್ದಾರೆ. ಲೂಟಿಕೋರ ಪಕ್ಷವನ್ನು ಮತದಾರರು ಗೆಲ್ಲಿಸಲ್ಲ. ನಿಖಿಲ್ ಅವರಿಗೆ ಸಿಂಪತಿ ಇದೆ. ಅಶ್ವತ್ಥ ನಾರಾಯಣ ರವರು ಯೋಗಿಗೆ ಟಿಕೆಟ್ ಕೊಡಿಸಲು ಹೋರಾಟ ನಡೆಸಿದರು.

ಸಿ ಪಿ ಬಿಜೆಪಿಯಲ್ಲಿ ದೊಡ್ಡ ನಾಯಕರಾಗಿದ್ದರು. ಕಾಂಗ್ರೆಸ್ ನಲ್ಲಿ ಮೂರನೇ ಸಾಲಿನ ನಾಯಕ ಆಗಿದ್ದಾರೆ. ಚುನಾವಣೆ ನಂತರ ಎಷ್ಟನೇ ಸಾಲಿಗೆ ಹೋಗುತ್ತಾರೊ ಗೊತ್ತಿಲ್ಲ. ಕಾಂಗ್ರೆಸ್ ಯೋಗೇಶ್ವರ್ ಅವರನ್ನು ಬಲಿ ಪಡೆಯುತ್ತಿದೆ. ಬಿಜೆಪಿ ಸರಕಾರದಲ್ಲಿ ನೀಡಿದ ಅನುದಾನ ಬಿಟ್ಟರೆ ಕಾಂಗ್ರೆಸ್ ನಯಾ ಪೈಸೆ ನೀಡಿಲ್ಲ. ಮಳೆಯಿಂದಾಗಿ ತೇಲುತ್ತಿರುವ, ಮುಳುಗುತ್ತಿರುವ ಬೆಂಗಳೂರು ಆಗಿದೆ. ಉತ್ತರ ಕರ್ನಾಟಕದಲ್ಲಿ ಬೆಳೆ ಹಾನಿಯಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಮಾತನಾಡಿ, ನಿಖಿಲ್ ಎನ್ ಡಿಎ ಅಭ್ಯರ್ಥಿ. ಬಿಜೆಪಿ ಜೆಡಿಎಸ್ ಒಗ್ಗಟ್ಟಿನ ಅಭ್ಯರ್ಥಿ. ಚನ್ನಪಟ್ಟಣ ಪ್ರಬುದ್ಧ ಜನರು. ಕೆಂಗಲ್ ನಿಂದ ದೇವೇಗೌಡರು ಪ್ರತಿನಿಧಿಸಿರುವ ಕ್ಷೇತ್ರ. ಚನ್ನಪಟ್ಟಣ ಕ್ಕೆ ವಿಶೇಷ ವಾಗಿ ಕಡಿಮೆ ಆಶೀರ್ವಾದ ಇದ್ದರು, ಪಕ್ಷದ ಶಾಸಕರು ಇಲ್ಲದಿದ್ದರು ಜಿಲ್ಲೆಯ ಅಭಿವೃದ್ಧಿ ಗೆ ಶ್ರಮಿಸಿದೇಲು. ರೇಷ್ಮೆಗೂಡು ಮಾರುಋ, ಸತ್ತೇಗಾಲ ಯೋಜನೆ, ಮೆಡಿಕಲ್ ಕಾಲೇಜೀ, ಜಲ ಜೀವನ್ ಮಿಷನ್, ನೆಟ್ಕಲ್ ಯೋಜನೆ ಜಾರಿಗೆ ತಂದೇವು.

ಎನ್ ಡಿಎ ಜನಪರವಾಗಿದೆ. ಕಾಂಗ್ರೆಸ್ ನಿಂದ ಏನನ್ನು ಬಯಸಲು ಆಗಲ್ಲ. ಕಾಂಗ್ರೆಸ್ ಜನ ರೈತ ವಿರೋಧಿ ಆಗಿದೆ. ಜಿಲ್ಲೆಗೆ ಏನಾದರು ಕೊಡುಗೆ ನೀಡಿದಿಯಾ. ಜಿಲ್ಲೆಯನ್ನೆ ತೊರೆದು ಹೋದರು. ಅಭ್ಯರ್ಥಿ ಇಲ್ಲದ ಪಕ್ಷ. ಚನ್ನಪಟ್ಟಣ ಜನರು ಕಾಂಗ್ರೆಸ್ ನಂಬಿರಲಿಲ್ಲ. ಯೋಗೇಶ್ವರ್ ತೊರೆದಿರುವುದು ಹಿನ್ನಡೆ ಆಗಿದೆ. ಪಕ್ಷ ಕಟ್ಟಲು ತಯರಾಗಿದ್ದೇವೆ. ಬಿಜೆಪಿ ಟಿಕೆಟ್ ಆಫರ್ ಮಾಡಿದ್ದೇವು. ಕ್ಷೇತ್ರದ ಅಭಿವೃದ್ಧಿ ಗೆ ಹೋಗಿಲ್ಲ. ಸ್ವಂತ ಅಭಿವೃದ್ಧಿ ಗೆ ಹೋಗಿದ್ದಾರೆ ಎಂದು ಯೋಗೇಶ್ವರ್‌ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಸವಾಲಿನ ಚುನಾವಣೆ. ಒಬ್ಬ ವ್ಯಕ್ತಿ ಪಕ್ಷ ಅಂತ ಹೇಳಿ ಈಗ 7ನೇ ಬಾರಿ ಜಿಗಿತ. ಇದು ಸ್ವಾರ್ಥಕ್ಕಾಗಿ ರಾಜಕಾರಣ. ಪಕ್ಷಾಂತರ ಮಾಡುವವರನ್ನು ನಿರ್ಲಕ್ಷ್ಯ ಮಾಡಬೇಕಿದೆ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರನ್ನು ಯೋಗಿನ ಹಿಂದಕ್ಕೆ ಹಾಕಿದ್ದಾರೆ. ನಾನು ಭಗೀರಥ ಆದ ಯೋಗೇಶ್ವರ್ ರವರಃ ಕ್ರೇಟಿಟ್ ತೆಗೆದುಕೊಳ್ಳಲು ಆಗಲ್ಲ. ಅರಣ್ಯ ಸಚಿವರಾಗಿದ್ದರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವಾಗಿಲ್ಲ. ಒಳ್ಳೆ ಕೆಲಸ ಕೈಗೆತ್ತಿಕ್ಳಬೇಕೆಂದು ತೀರ್ಮಾನ ಮಾಡಿದರು.

ಮಂಡ್ಯ ಮೈಸೂರುವರೆಗೆ ಹಸಿರು ಕಾಣುತ್ತಿರಲಿಲ್ಲ. ನಾನು ಸಿಎಂ ಆದಾಗ ಆರು ಕೆರೆ ತುಂಬಿಸಿ ಅಭಿವೃದ್ಧಿ ಮಾಡಿದೇವು. ಭಗೀರಥ ಬಿಜೆಪಿ ಸರ್ಕಾರವೇ ಹೊರೆತು ಯೋಗೇಶ್ವರ್ ಅಲ್ಲ. 150 ಕೋಟಿ ಅನುದಾನ ನೀಡಿದೆ.
ಇವತ್ತು ಭಗೀರಥ ಅಂತ ಹೇಳಿಕೊಂಡು ಚುನಾವಣೆ ಎದುರಿಸಲು ನಾಚಿಕೆ ಆಗಬೇಕು. ಕಾಂಗ್ರೆಸ್ ನಲ್ಲಿ ಇದ್ದಾಗ ಏಕೆ ಅನುದಾನ ತಂದು ಕೆರೆ ತುಂಬಿಸಲಿಲ್ಲ. ಅಶ್ವತ್ಥ ನಾರಾಯಣ ಉಸ್ತುವಾರಿ ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಗಳು ನಡೆದಿವೆ. ಯೋಗೇಶ್ವರ್ ಮಾನಮರ್ಯಾದೆ ಇದ್ದರೆ ನೀರು ತಂದೆ ಭಗೀರಥ ಅನ್ನುದನ್ನ ಬಿಟ್ಟು ಚುನಾವಣೆ ಎದುರಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+