ನಿಖಿಲ್ ಕುಮಾರಸ್ವಾಮಿಗೆ ಮಹತ್ವದ ಜವಾಬ್ದಾರಿಯನ್ನು ಕೊಡಲಿರುವ ದೇವೇಗೌಡರು
Recommended Video
ಬೆಂಗಳೂರು, ಜೂನ್ 8:ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವಿರುದ್ಧ ನಿಂತು ಸೋತ ನಿಖಿಲ್ ಕುಮಾರಸ್ವಾಮಿ ರಾಜಕೀಯ ಬಿಟ್ಟು ಹೋಗದಂತೆ ತಡೆಯಲು ಅವರಿಗೆ ಪಕ್ಷದಲ್ಲಿ ಹೊಸ ಜವಾಬ್ದಾರಿಯೊಂದನ್ನು ದೇವೇಗೌಡರು ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಹಾಗಾದರೆ ಆ ಜವಾಬ್ದಾರಿ ಏನು ಎನ್ನುವುದು ಎಲ್ಲರ ಕುತೂಹಲವಾಗಿದೆ. ಸದ್ಯಕ್ಕೆ ಜೆಡಿಎಸ್ ಪಕ್ಷದೊಳಗೆ ಯಾವುದೇ ಹುದ್ದೆ ಖಾಲಿ ಇಲ್ಲ, ಹಾಗಾದರೆ ಈ ಹೊಸ ಜವಾಬ್ದಾರಿ ಯಾವುದು?.
ಮಂಡ್ಯದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಯುವ ಘಟಕದ ಜವಾಬ್ದಾರಿ ನೀಡುತ್ತಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ.ಜೆಡಿಎಸ್ ಕಾರ್ಯಕರ್ತರನ್ನು ಪಕ್ಷ ಅವಲಂಬಿಸಿದೆ. ಆದರೆ ರಾಜಕೀಯವಾಗಿ ಸರಿಯಾಗಿ ತಂತ್ರ ಹೆಣೆಯುತ್ತಿಲ್ಲ. ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗದಲ್ಲಿ ಪಕ್ಷಕ್ಕೆ ಬೆಳೆಯುವ ಅವಕಾಶವಿದೆ ಎಂದು ನಿಖಿಲ್ ಹೇಳಿದ್ದಾರೆ.
ಇತ್ತೀಚೆಗೆ ಗೌಡರ ಸಮ್ಮುಖದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಯಿತು. ಹಾಗಾಗಿ ಪಕ್ಷ ಬಲವರ್ಧನೆಗಾಗಿ ಹೊಸ ತಂತ್ರಗಾರರನ್ನು ಕರೆದುಕೊಂಂಡು ಬರಲಾಗುತ್ತದೆ. ಈ ವೇಳೆ ಕೆಲ ಶಾಸಕರು ನಿಖಿಲ್ ಪರ ವಾದ ಮಾಡಿದರೆ, ಮತ್ತೆ ಕೆಲವರು ಪ್ರಜ್ವಲ್ ಪರ ವಾದ ಮಾಡಿದ್ದಾರೆ.
ಆದರೆ ಅಂತಿಮ ನಿರ್ಧಾರವನ್ನು ವರಿಷ್ಠರೇ ಕೈಗೊಳ್ಳಬೇಕು ಎಂದು ನಿಖಿಲ್ ಹೇಳಿದ್ದಾರೆ. ಹಾಗಾದರೆ ನಿಖಿಲ್ ಗೆ ಈ ಹೊಸ ಜವಾಬ್ದಾರಿಯನ್ನು ಗೌಡರು ನೀಡಲಿದ್ದಾರಾ ಎಂದು ಕಾದು ನೋಡಬೇಕಿದೆ.

ನಿಖಿಲ್ ಕುಮಾರಸ್ವಾಮಿಯನ್ನು ರಾಜಕೀಯದಲ್ಲೇ ಉಳಿಸಲು ಈ ಪ್ರಯತ್ನವೇ
ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಒಂದೊಮ್ಮೆ ರಾಜಕೀಯ ಬಿಟ್ಟು ಹೋದರೆ ಎನ್ನುವ ಆತಂಕ ಹುಟ್ಟಿಕೊಂಡಂತಿದೆ. ಅವರನ್ನು ಹೇಗಾದರೂ ಮಾಡಿ ರಾಜಕೀಯದಲ್ಲೇ ಅಥೌಆ ಪಕ್ಷದಲ್ಲೇ ಕಟ್ಟಿಹಾಕುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನಿಖಿಲ್‌ಗೆ ಹೊಸ ಜವಾಬ್ದಾರಿಯನ್ನು ನೀಡಿದರೆ ಅವರು ರಾಜಕೀಯದಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಎನ್ನುವುದು ಕೂಡ ಸತ್ಯ ಸಂಗತಿ.

ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ ಎಂದ ದೇವೇಗೌಡರು
ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತೇನೆ, ಪಕ್ಷವನ್ನು ಸಂಘಟಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ. ಹಾಗೆಯೇ ತಮ್ಮಂತೆಯೇ ಸೋಲು ಅನುಭವಿಸಿರುವ ತಮ್ಮ ಮೊಮ್ಮಗನಿಗೂ ಕೂಡ ರ್ಧೈತುಂಬಿದ್ದು, ಅವರಿಗೆ ಹೊಸ ಜವಾಬ್ದಾರಿಯನ್ನು ನೀಡುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಮಾತು
ನಿಖಿಲ್ ಕುಮಾರಸ್ವಾಮಿಯವರು ಪಕ್ಷದ ಸಭೆಯಲ್ಲಿ ಮುಂದಿನ ಚುನಾವಣೆಗೆ ಸಿದ್ಧತಾಗಿ ಎಂದು ಹೇಳಿರುವುದು ಸಮ್ಮಿಶ್ರ ಸರ್ಕಾರದ ಅಳಿವು ಉಳಿವನ್ನೇ ಪ್ರಶ್ನೆ ಮಾಡಿತ್ತು.ಆದರೆ ಕೊನೆಗೆ ತಮ್ಮ ಮಗ ಹೇಳಿದ್ದು ಹಾಗಲ್ಲ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದರು.ಚುನಾವಣೆ ಎದುರಿಸಲು ಸಿದ್ಧರಾಗಿರಿ ಎಂದು ಸಲಹೆ ನೀಡುವ ವಿಡಿಯೋ ವೈರಲ್ ಆಗಿತ್ತು.

ಮಂಡ್ಯಕ್ಕೆ ಮತ್ತೆ ಬರ್ತಾರೆ ನಿಖಿಲ್ ವಿಡಿಯೋ ವೈರಲ್ ಆಗಿತ್ತು
ನಾನು ಮಂಡ್ಯ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಸುಮ್ಮನೆ ಕೂರುವುದಿಲ್ಲ. ನಾನು ಮೊದಲಿಗಿಂತ ತುಂಬಾ ಬದಲಾಗಿದ್ದೇನೆ. ನಾವು ಜನರನ್ನು ಮುಖತಃ ಭೇಟಿ ಮಾಡಿದರೆ ಮಾತ್ರ ವಾಸ್ತವ ಏನು ಎಂಬುದು ಗೊತ್ತಾಗುತ್ತದೆ. 8 ತಾಲ್ಲೂಕುಗಳನ್ನು 45-50 ದಿನ ಸುತ್ತಿದ ನಂತರ ಈ ವಿಚಾರ ನನಗೆ ಗೊತ್ತಾಗಿದೆ. ಬೇರೆ ಜಿಲ್ಲೆಗಳನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗ ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ ಎಂದು ವಿಡಿಯೋದಲ್ಲಿ ಜನತೆಗೆ ತಿಳಿಸಿದ್ದಾರೆ.












Click it and Unblock the Notifications