Nikhil Kumaraswamy: ನಿಖಿಲ್ ಕುಮಾರಸ್ವಾಮಿಗೆ ಗೆಲುವಿನ ಅಗ್ನಿಪರೀಕ್ಷೆ ಆರಂಭ!
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಗ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಉಪಚುನಾವಣೆಯ ಅಖಾಡ ಮಾಡು ಇಲ್ಲವೆ ಮಡಿ ಹೋರಾಟವಾಗಿದೆ. ಯಾಕಂದ್ರೆ ನಿಖಿಲ್ ಕುಮಾರಸ್ವಾಮಿಗೆ ಸಾಲು ಸಾಲು ಸೋಲುಗಳು ಎದುರಾಗಿದ್ದವು. ಈ ಸೋಲುಗಳಿಂದಾಗಿ ನಿಖಿಲ್ ಕುಮಾರಸ್ವಾಮಿ ಅವರು ಸಾಕಷ್ಟು ನೋವಿನಲ್ಲಿ ಪರದಾಡಿದ್ದರು. ಹೀಗಿದ್ದಾಗಲೇ ಚನ್ನಪಟ್ಟಣ ಉಪಚುನಾವಣೆ ಎದುರಾಗಿದೆ!
ಹೌದು, 2019ರ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಸುಮಲತಾ ಅಂಬರೀಶ್ ಅವರ ಎದುರು ಸೋತಿದ್ದ ನಿಖಿಲ್ ಅವರು ಮೊದಲ ಹಿನ್ನಡೆಯನ್ನ ಅನುಭವಿಸಿದ್ದರು. ಈ ಸೋಲಿನ ನಂತರ ರಾಮನಗರ ವಿಧಾನಸಭೆ ಚುನಾವಣೆ 2023 ರಲ್ಲಿ ಕೂಡ ಸೋತಿದ್ದರು. ಹೀಗಿದ್ದಾಗ ಚನ್ನಪಟ್ಟಣ ಕ್ಷೇತ್ರ ಇದೀಗ ನಿಖಿಲ್ ಅವರ ಭವಿಷ್ಯ ನಿರ್ಧಾರ ಮಾಡಲಿದೆ. ಹಾಗಾದ್ರೆ ಈಗ ನಿಖಿಲ್ ಅವರ ರಾಜಕೀಯ ಭವಿಷ್ಯ ನಿರ್ಧಾರ ಮಾಡುವುದು ಯಾರು? ಹೇಗಿದೆ ಮತದಾರರ ಒಲವು? ಮುಂದೆ ಓದಿ.

ಒಕ್ಕಲಿಗ ಮತದಾರರ ಮಾತೇ ಫೈನಲ್!
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬೆಳಗ್ಗೆಯೇ ಆರಂಭವಾಗಿದೆ. 2.2 ಲಕ್ಷಕ್ಕೂ ಹೆಚ್ಚು ಮತದಾರರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಾರೆ. ಚನ್ನಪಟ್ಟಣ ಕ್ಷೇತ್ರದ ಮತದಾರರ ಪೈಕಿ ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದು, ಈ ಕ್ಷೇತ್ರದಲ್ಲಿ ಬರೋಬ್ಬರಿ 1.05 ಲಕ್ಷ ಒಕ್ಕಲಿಗ ಮತದಾರರು ಇದ್ದಾರೆ.
ಮತ್ತೊಂದು ಕಡೆ ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಆಗಿದ್ದು, ಹೀಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಿ.ಪಿ. ಯೋಗೇಶ್ವರ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಎರಡೂ ಕಡೆ ಒಕ್ಕಲಿಗ ಅಭ್ಯರ್ಥಿಗಳೇ ಸೆಣೆಸಾಟ ನಡೆಸುತ್ತಿರುವ ಕಾರಣ, ಈ ಕದನ ಕುತೂಹಲದ ಘಟ್ಟ ತಲುಪುತ್ತಿದೆ.
ಮಾಜಿ ಪ್ರಧಾನಿ ದೇವೇಗೌಡರ ಶ್ರಮ ಫಲಿಸುತ್ತಾ?
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಗ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ದಿನ ಅತ್ಯಂತ ಪ್ರಮುಖವಾದ ಘಟ್ಟ. ಯಾಕಂದ್ರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಗೆಲವು ಅನಿವಾರ್ಯ. ಈಗಾಗಲೇ ನಿಖಿಲ್ ಸಾಲು ಸಾಲು ಸೋಲು ಕಂಡಿದ್ದಾರೆ.
ಹೀಗಾಗಿ ನಿಖಿಲ್ ಅವರನ್ನ ಈ ಬಾರಿ ಗೆಲ್ಲಿಸಬೇಕೆಂಬ ಒನ್‌ಲೈನ್ ಅಜೆಂಡಾ ಇಟ್ಟುಕೊಂಡು, ಘಟಾನುಘಟಿ ನಾಯಕರೇ ಬಂದು ನಿಖಲ್ ಪರ ಚುನಾವಣಾ ಪ್ರಚಾರ ನಡೆಸಿದ್ದರು. ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಹಲವಾರು ದಿನಗಳ ಕಾಲ ಚನ್ನಪಟ್ಟಣದಲ್ಲೇ ಇದ್ದು ಪ್ರಚಾರ ನಡೆಸಿದ್ದರು. ಹೀಗಾಗಿಯೇ, ಮಾಜಿ ಪ್ರಧಾನಿ ದೇವೇಗೌಡರ ಶ್ರಮ ಫಲಿಸುತ್ತಾ? ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.












Click it and Unblock the Notifications