ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆಯಲ್ಲಿ 3 ಬಾರಿ ನಿರ್ಧಾರ ಬದಲಾಯಿಸಿದ ಯಡಿಯೂರಪ್ಪ ಸರಕಾರ

|
Google Oneindia Kannada News

ರೂಪಾಂತರಗೊಂಡ ಕೊರೊನಾ ವೈರಸ್ ಹಾವಳಿಯಿಂದ ದೂರವಿರಲು ಮುಂಜಾಗೃತಾ ಕ್ರಮವಾಗಿ ರಾಜ್ಯ ಸರಕಾರ ಇಂದಿನಿಂದ (ಡಿ 24) ನೈಟ್ ಕರ್ಫ್ಯೂ ಜಾರಿಗೆ ತಂದಿದೆ. ರಾತ್ರಿ ಹನ್ನೊಂದು ಗಂಟೆಯಿಂದ ಬೆಳಗ್ಗಿನ ಜಾವ ಐದು ಗಂಟೆಯವರೆಗೆ ಇದು ಜಾರಿಯಲ್ಲಿರುತ್ತದೆ.

ನೈಟ್ ಕರ್ಫ್ಯೂ ವಿಚಾರದಲ್ಲಿ ಯಡಿಯೂರಪ್ಪನವರ ಸರಕಾರ ಸಾಕಷ್ಟು ಗೊಂದಲದಲ್ಲಿತ್ತು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆ ಇದನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಹೇಳಿದ್ದರೂ, ಮೂರು ಬಾರಿ ನಿರ್ಧಾರವನ್ನು ಬದಲಾಯಿಸಿದ್ದರಿಂದ, ಯಾರದ್ದಾದರೂ ಒತ್ತಡಕ್ಕೆ ಸರಕಾರಕ್ಕೆ ಮಣಿಯಿತಾ ಎನ್ನುವ ಅನುಮಾನ ಕಾಡುವುದು ಸಹಜ.

ಬ್ರಿಟನ್‌ನಿಂದ ಬಂದಿಳಿದ 11 ಮಂದಿಗೆ ಕೊರೊನಾ ಪಾಸಿಟಿವ್, 50 ಜನರು ಕ್ವಾರಂಟೈನ್‌ಬ್ರಿಟನ್‌ನಿಂದ ಬಂದಿಳಿದ 11 ಮಂದಿಗೆ ಕೊರೊನಾ ಪಾಸಿಟಿವ್, 50 ಜನರು ಕ್ವಾರಂಟೈನ್‌

ಈ ಕರ್ಪ್ಯೂ ಹೇರಿಕೆ ವಿರುದ್ದ ಸಾರ್ವಜನಿಕ ಮತ್ತು ಉದ್ಯಮ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೊಸ ವರ್ಷಾಚರಣೆಯ ಸಂಬಂಧ ಜನ ಸೇರುವುದನ್ನು ಬ್ರೇಕ್ ಹಾಕಲು ಕರ್ಫ್ಯೂ ವಿಧಿಸಲಾಗುತ್ತಿದೆ ಎನ್ನುವುದು ಸರಿಯಾದ ಕಾರಣವಾದರೂ, ಅದಕ್ಕಾಗಿ ಎಂಟು ದಿನ ಕರ್ಫ್ಯೂ ವಿಧಿಸುವ ಜರೂರತ್ತಾದರೂ ಏನು ಎನ್ನುವುದು ಜನರ ಕೋಪಕ್ಕೆ ಕಾರಣವಾಗಿದೆ.

ರಾತ್ರಿ ಹನ್ನೊಂದರಿಂದ ಬೆಳಗ್ಗೆ ಐದು ಗಂಟೆಯೆಂದರೆ, ಜನಸಾಮಾನ್ಯರ ಓಡಾಟ ತೀರಾ ಕಮ್ಮಿಯಿರುವ ವೇಳೆ, ಸರಕಾರ ಜಾರಿಗೆ ತಂದಿರುವ ಈ ಕರ್ಫ್ಯೂ ಯಾವ ಪುರುಷಾರ್ಥಕ್ಕಾಗಿ ಎನ್ನುವುದೇ ಜನರಲ್ಲಿರುವ ಗೊಂದಲ. 24 ಗಂಟೆಯಲ್ಲಿ ಮೂರು ಬಾರಿ ನಿರ್ಧಾರ ಬದಲಾಯಿಸಿದ ಯಡಿಯೂರಪ್ಪ ಸರಕಾರ, ಅದೇನು? ಮುಂದೆ ಓದಿ..

ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!

ಮಹಾರಾಷ್ಟ್ರ ದಲ್ಲಿ ನೈಟ್ ಕರ್ಫ್ಯೂ

ಮಹಾರಾಷ್ಟ್ರ ದಲ್ಲಿ ನೈಟ್ ಕರ್ಫ್ಯೂ

ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರಬೇಧದ ವೈರಸ್ ನಿಂದಾಗಿ ಎಲ್ಲರೂ ಎಚ್ಚರದಿಂದ ಇರಬೇಕು, ಸೂಕ್ತ ಕ್ರಮ ತೆಗೆದುಕೊಳ್ಳಿ ಎನ್ನುವ ಕಟ್ಟುನಿಟ್ಟಿನ ಆದೇಶ ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದಿಂದ ರಾಜ್ಯ ಸರಕಾರಗಳಿಗೆ ಬಂದಿತ್ತು. ಮಹಾರಾಷ್ಟ್ರ ಸರಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದ್ದರಿಂದ, ಕರ್ನಾಟಕದಲ್ಲೂ ಅದು ಜಾರಿಯಾಗಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು.

ಯಡಿಯೂರಪ್ಪ ಒಂದೇ ದಿನದಲ್ಲಿ ಯೂಟರ್ನ್

ಯಡಿಯೂರಪ್ಪ ಒಂದೇ ದಿನದಲ್ಲಿ ಯೂಟರ್ನ್

ಒಂದು ದಿನದ ಹಿಂದೆ ನೈಟ್ ಕರ್ಫ್ಯೂ ಜಾರಿಗೆ ತರುತ್ತೀರಾ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಾರಸಗಾಟ ನೋ ಎಂದಿದ್ದರು. ಅಂತಹ ಯಾವುದೇ ಪ್ರಪೋಸಲ್ ನಮ್ಮ ಮುಂದಿಲ್ಲ. ಜೊತೆಗೆ, ಅಂತರ್ ರಾಜ್ಯ ಪ್ರಯಾಣಿಕರನ್ನು ಕ್ವಾರಂಟೈನ್ ಗೆ ಒಳಪಡಿಸುವುದೂ ಇಲ್ಲ ಎಂದು ಬಿಎಸ್ವೈ ಹೇಳಿದ್ದರು. ಆದರೆ, ಈ ನಿರ್ಧಾರದಿಂದ ಯಡಿಯೂರಪ್ಪ ಒಂದೇ ದಿನದಲ್ಲಿ ಯೂಟರ್ನ್ ಹೊಡೆದರು.

ಡಾ.ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ

ಡಾ.ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ

ಬುಧವಾರ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಸಭೆ ಸೇರಿದ ತಾಂತ್ರಿಕ ಸಲಹಾ ಸಮಿತಿ ನೈಟ್ ಕರ್ಫ್ಯೂಗೆ ಶಿಫಾರಸು ಮಾಡಿತು. ಅದರಂತೇ, ಇಂದಿನಿಂದಲೇ (ಡಿ 23) ಜಾರಿಗೆ ಬರುವಂತೆ ರಾತ್ರಿ ಹತ್ತರಿಂದ ಬೆಳಗ್ಗೆ ಆರರವರೆಗೆ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಸಿಎಂ ಘೋಷಿಸಿದರು. ಅಲ್ಲದೇ, ಶಾಲಾ ಕಾಲೇಜುಗಳು ಪೂರ್ವ ನಿರ್ಧರಿಸಿದಂತೆ ಜನವರಿ ಒಂದರಿಂದ ಆರಂಭ ಎಂದು ಪ್ರಕಟಿಸಿದರು. ಆದರೆ, ಸಂಜೆಯ ಹೊತ್ತಿಗೆ ನಿರ್ಧಾರ ಬದಲಾಯಿತು.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

24 ಗಂಟೆಯಲ್ಲಿ ಮೂರು ಬಾರಿ ನಿರ್ಧಾರ ಬದಲಾಯಿಸಿದ ಯಡಿಯೂರಪ್ಪ ಸರಕಾರ

24 ಗಂಟೆಯಲ್ಲಿ ಮೂರು ಬಾರಿ ನಿರ್ಧಾರ ಬದಲಾಯಿಸಿದ ಯಡಿಯೂರಪ್ಪ ಸರಕಾರ

ಸರಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ, ನಿಲುವು ಬದಲಾಯಿಸಿದ ಸರಕಾರ ನಾಳೆಯಿಂದ (ಡಿ 24) ನೈಟ್ ಕರ್ಫ್ಯೂ ಜಾರಿ, ಸಮಯ ರಾತ್ರಿ ಹನ್ನೊಂದರಿಂದ ಬೆಳಗ್ಗೆ ಐದು ಎಂದು ಪ್ರಕಟಿಸಿತು. ಶಾಲಾ ಕಾಲೇಜು ಜನವರಿ ಒಂದರಿಂದ ಓಪನ್ ಮಾಡಬೇಕೇ ಬೇಡವೇ ಎನ್ನುವುದನ್ನು ಇನ್ನೆರಡ್ಮೂರು ದಿನದಲ್ಲಿ ನಿರ್ಧರಿಸಲಾಗುವುದು. ಕ್ರಿಸ್ಮಸ್ ಮುನ್ನಾದಿನದ ಪ್ರಾರ್ಥನೆಗೆ ಅಡ್ಡಿಯಿಲ್ಲ ಇಂದು ಪ್ರಕಟಿಸಿತು. ಅಲ್ಲಿಗೆ, ಒಂದು ದಿನದಲ್ಲಿ ಮೂರು ಬಾರಿ ಸರಕಾರ ತನ್ನ ನಿರ್ಧಾರ ಬದಲಾಯಿಸಿದಂತಾಯಿತು.

Recommended Video

Australia ಮಾಜಿ ಆಟಗಾರನ ಪ್ರಕಾರ ಭಾರತ ಈಗಲೂ ಗೆಲ್ಲಬಹುದು | Oneindia Kannada

English summary
Night Curfew In Karnataka: Yediyurappa Government Changed Their Decision Thrice In 24 Hours,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X