ಕನ್ನಡಿಗರನ್ನ ಕನ್ಫ್ಯೂಸ್ ಮಾಡುತ್ತಿರುವ ನ್ಯೂಸ್ ಚಾನೆಲ್‌ಗಳು?
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಇದೀಗ ಕೆಲವು ನ್ಯೂಸ್ ಚಾನೆಲ್‌ಗಳು ಮತದಾರರನ್ನ ಕನ್ಫ್ಯೂಸ್ ಮಾಡು ಕೆಲಸ ಮಾಡುತ್ತಿವೆ. ಈಗಾಗಲೇ ಬಹುತೇಕ ಕ್ಷೇತ್ರಗಳ ಮುನ್ನಡೆ ಫಲಿತಾಂಶ ತಿಳಿದು ಬರುತ್ತಿದ್ದರೂ, ನ್ಯೂಸ್ ಚಾನೆಲ್‌ಗಳು ಮಾತ್ರ ನಂಬರ್ ಗೇಮ್ ಆಡ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.
ಕೆಲವು ಚಾನೆಲ್‌ಗಳಲ್ಲಿ ಘೋಷಣೆ ಆಗಿರುವ ಕ್ಷೇತ್ರಗಳಿಂತ ಹೆಚ್ಚಿನ ಸಂಖ್ಯೆ ತೋರಿಸುತ್ತಿದ್ದರೆ, ಇನ್ನೂ ಕೆಲವು ಚಾನೆಲ್‌ಗಳು ಅತಿ ಕಡಿಮೆ ಸಂಖ್ಯೆ ತೋರಿಸುತ್ತಿವೆ. ಹೀಗಾಗಿ ಬೆಳ್ಳಂಬೆಳಗ್ಗೆ ರಿಸಲ್ಟ್ ನೋಡಲು ಟಿವಿ ಹಾಕಿದ ಮತದಾರರಿಗೆ ಕನ್ಫ್ಯೂಶನ್ ಶುರುವಾಗಿದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ವೀಕ್ಷಕರು ಚರ್ಚೆ ಶುರು ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ-2023 ಇಡೀ ದೇಶದ ಗಮನ ಸೆಳೆದಿದೆ.

ಬಹುತೇಕ ಮುನ್ನಡೆ ಫಲಿತಾಂಶ ಪ್ರಕಟ
ಇಲ್ಲಿಯವರೆಗೂ ಕಾಂಗ್ರೆಸ್ 109 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 87 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ, ಇನ್ನು ಜೆಡಿಎಸ್ 26 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದ್ಕಡೆ ಇತರರು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದರೆ, ಸೋಮಣ್ಣ ಹಿನ್ನಡೆ ಕಂಡಿದ್ದಾರೆ.
ಮುನ್ನಡೆ ಸಾಧಿಸಿದ ಡಿಕೆಶಿ
'ಬಂಡೆ' ಎಂದೇ ರಾಜಕಾರಣದಲ್ಲಿ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ಸಿದ್ಧವಾಗಿದೆ. ಹೀಗಾಗಿ 2023ರ ಚುನಾವಣೆಯಲ್ಲಿ ದಿಲ್ಲಿಯಲ್ಲೇ ಕನಕಪುರ ರಾಜಕೀಯ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಮುನ್ನಡೆ ಸಾಧಿಸಿದ್ದಾರೆ.
ವರ್ತೂರು ಪ್ರಕಾಶ್‌ಗೆ ಹಿನ್ನಡೆ
ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹದ ನಂತರ ಕೋಲಾರ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿತ್ತು. ಆದರೆ ಕೊನೆಗೆ ಕಾಂಗ್ರೆಸ್ ಪಕ್ಷದಿಂದ ಕೊತ್ತೂರು ಮಂಜುನಾಥ್‌ಗೆ ಟಿಕೆಟ್ ಸಿಕ್ಕು ವರ್ತೂರ್ ಪ್ರಕಾಶ್ ವಿರುದ್ಧ ಅಖಾಡಕ್ಕೆ ಇಳಿದಿದ್ದರು. ಈಗ ವರ್ತೂರ್ ಪ್ರಕಾಶ್ ಹಿನ್ನಡೆ ಸಾಧಿಸಿದ್ದು, ಕೊತ್ತೂರು ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.












Click it and Unblock the Notifications