ವೈದ್ಯರ ನಿರ್ಲಕ್ಷ್ಯದಿಂದ ಮಂಡ್ಯದಲ್ಲಿ ನವಜಾತ ಶಿಶು ಸಾವು

Posted By:
Subscribe to Oneindia Kannada

ಮಂಡ್ಯ,ಫೆಬ್ರವರಿ,19: ಮೂರು ದಿನಗಳ ಕಾಲ ಜೀವನ್ಮರಣದ ಮಧ್ಯೆ ಬಳಲಿದ ನವಜಾತ ಗಂಡು ಶಿಶು ಶುಕ್ರವಾರ ಸಾವನ್ನಪ್ಪಿದ್ದು, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಂಡ್ಯದ ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಲಾದಹಳ್ಳಿಯ ಸಿದ್ದೇಗೌಡ ಮತ್ತು ಸುಕನ್ಯಾ ಮಗು ಕಳೆದುಕೊಂಡ ಪೋಷಕರು. ಸುಖನ್ಯಾ ಅವರು ಫೆಬ್ರವರಿ 17ರಂದು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮನೀಡಿದ ವೇಳೆ ವೈದ್ಯರು ಮಗುವನ್ನು ಬೀಳಿಸಿದ್ದಾರೆ. ಹಾಗಾಗಿ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.[ಮೈಸೂರು ಚೆಲುವಾಂಬ ಆಸ್ಪತ್ರೆಯಲಿಲ್ಲ ಬಾಣಂತಿಯರಿಗೆ ಸುರಕ್ಷೆ!]

Newly born baby died hospital in Mandya

ಮಗು ಸಾವನ್ನಪ್ಪಲು ಕಾರಣ ಏನು?

ಫೆಬ್ರವರಿ 17ರಂದು ಸುಕನ್ಯಾ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸಮಯದಲ್ಲಿ ವೈದ್ಯರು ಸರಿಯಾಗಿ ಹಿಡುಕೊಳ್ಳದ ವೈದ್ಯರು ಕೆಳಗೆ ಬೀಳಿಸಿದ ಪರಿಣಾಮ ಗಂಭೀರ ನೋವಾಗಿದೆ. ತಕ್ಷಣ ವೈದ್ಯರು ಆ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ಆದರೆ ಮೂರು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸದ ಮಗು ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದೆ.[ಸಾವಿನ ಮನೆಯಾಗುತ್ತಿದೆಯಾ ಮೈಸೂರಿನ ಕೆ.ಆರ್ ಆಸ್ಪತ್ರೆ?]

ಈ ಪ್ರಕರಣ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮಗುವಿನ ಪೋಷಕರು ಹಾಗೂ ಸಂಬಂಧಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Newly born baby died in hospital Mandya on Friday, February 19th. Doctors drown the baby in delivery time on Wednesday, February 17th.
Please Wait while comments are loading...