ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಾಚರಣೆ ಮಾಡಲು ನಂದಿ ಬೆಟ್ಟಕ್ಕೆ ಪ್ರವೇಶ ಇಲ್ಲ

|
Google Oneindia Kannada News

ಬೆಂಗಳೂರು, ಡಿಸೆಂಬರ್, 29: ಹೊಸ ವರ್ಷಾಚರಣೆಗೆ ನಂದಿ ಬೆಟ್ಟದ ಕಡೆ ಹೆಜ್ಜೆ ಹಾಕಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ಸಂಜೆ 4ರಿಂದ ಜ.1ರ ಬೆಳಗ್ಗೆ 6ರವರೆಗೆ ನಂದಿ ಗಿರಿಧಾಮ(ನಂದಿ ನಬೆಟ್ಟ) ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ನಿಷೇಧದ ಹೊರತಾಗಿ ಯಾರಾದರೂ ನಂದಿಗಿರಿಧಾಮ ಪ್ರವೇಶಿಸಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಭಾರ ಎಸ್ಪಿ ಎಂ. ನಾರಾಯಣ ಎಚ್ಚರಿಕೆ ನೀಡಿದ್ದಾರೆ.[ಹೊಸ ವರ್ಷಾಚರಣೆ ಕುಡುಕರಿಗೆ ಮನೆಗೆ ಡ್ರಾಪ್]

nandi

ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಮಹಾನಗರಕ್ಕೆ ಹತ್ತಿರವಿರುವುದರಿಂದ ವರ್ಷಾಂತ್ಯದ ಮೋಜಿಗೆ ಈ ತಾಣವನ್ನೇ ಯುವಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಅಪಾಯಕಾರಿ ರಸ್ತೆ ತಿರುವುಗಳು ಇರುವುದರಿಂದ ಬೈಕ್ ಚಾಲನೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಇದೆಲ್ಲವನ್ನು ಮನಗಂಡಿರುವ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.[ನಂದಿ ಬೆಟ್ಟದ ಸಂಪೂರ್ಣ ವಿವರ]

ಪ್ಲಾಸ್ಟಿಕ್ ಚೀಲ, ಮದ್ಯದ ಬಾಟಲಿಗಳನ್ನು ಎಸೆದು ಪರಿಸರಕ್ಕೆ ಹಾನಿ ಮಾಡುತ್ತಾರೆ. ಕೆಲ ಕಾನೂನು ಬಾಹಿರ ಚಟುವಟಿಕೆಗಳಿಗೂ ಅವಕಾಶವಾಗುವ ಸಂಭವವಿದೆ ಎಂಬ ಕಾರಣದಿಂದ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ ನೀವು ನಂದಿ ಬೆಟ್ಟಕ್ಕೆ ತೆರಳುವ ಆಲೋಚನೆ ಹಾಕಿಕೊಂಡಿದ್ದರೆ ಅದನ್ನು ಬದಲಿಸುವುದು ಒಳಿತು.

English summary
Chikkaballapur: Nandi hills entry forbidden for New Year celebration. The District Administration gave the instructions to tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X