KEA Exams Big Update: ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ರೂಲ್ಸ್ ಜಾರಿ
ಬೆಂಗಳೂರು, ಮಾರ್ಚ್ 06: ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ, ಪರೀಕ್ಷೆ ನಡೆಸುವಲ್ಲಿ ಕಳೆದ (2024) ವರ್ಷ ದಾಖಲೆ ಬರೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ವ್ಯಾಪ್ತಿಯಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ನಿಯಮ ಜಾರಿ ಮಾಡಲಿದೆ. ಇದು ಮುಂದಿನ ದಿನಗಳಲ್ಲಿ ನಡೆಯಲಿರುವ UGCET 2025 ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಾಧಿಕಾರವು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನು ಮುಂದೆ ನಾಲ್ಕು ಆಯ್ಕೆಗಳ ಬದಲಾಗಿ, ಐದು ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈ ಕುರಿತು ಗುರುವಾರ ಫೆಬ್ರವರಿ 06 ರಂದು ಪ್ರಾಧಿಕಾರವೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದೆ.

ಮುಂದಿನ ದಿನಗಳಲ್ಲಿ ಪ್ರಾಧಿಕಾರ ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಪ್ರಶ್ನೆಗೆ 05 ಆಯ್ಕೆಗಳು ಇರಲಿವೆ. ಅದರಲ್ಲಿ ಒಂದನ್ನು ಗುರುತಿಸಿ ಅಭ್ಯರ್ಥಿಗಳು ಉತ್ತರಿಸಬೇಕಿದೆ. ಇನ್ನೂ ಹಳೆಯ ಒಂದು ಪ್ರಶ್ನೆಗೆ 04 ಆಯ್ಕೆಗಳು ನೀಡುವ ಪದ್ಧತಿ ಕೊನೆಯಾಗಲಿದೆ. ಹೆಚ್ಚುವರಿಯಾಗಿ ಒಂದು ಆಯ್ಕೆ ಸೇರ್ಪಡೆ ಮಾಡಿದೆ.
ಇದರಿಂದ ವಿದ್ಯಾರ್ಥಿಗಳು ಅನುಕೂಲವಾಗಲಿದೆ ಅಂತ ಕೆಲವು ಹೇಳುತ್ತಿದ್ದಾರೆ. ಮತ್ತೆ ಕೆಲವರು ಪ್ರಶ್ನೆಗೆ ನಾಲ್ಕರ ಬದಲಾಗಿ ಐದು ಆಯ್ಕೆಗಳಿಂದ ಕೊಂಚ ಗೊಂದಲವಾಗಿ ಉತ್ತರ ಕಂಡು ಹಿಡಿಯಲು ತಡವಾಗಬಹುದು ಎಂದು ಅಭಿಪ್ರಾಯ ಹೊರ ಹಾಖಿದ್ದಾರೆ. ಆದರೆ ಈ ಬಗ್ಗೆ ಗೊಂದಲ ಬೇಡ ಎಂದು ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರವು ಜಾರಿ ಮಾಡಲಿರುವ ಈ ಹೊಸ ಪದ್ಧತಿ ಅಥವಾ ಐದು ಆಯ್ಕೆಗಳ ಹೊಸ ನಿಯಮ ಏಪ್ರಿಲ್ ನಡೆಯಲಿರುವ ಯುಜಿಸಿಇಟಿ 2025 ಪರೀಕ್ಷೆಗೆ ಅನ್ವಯಿಸುವುದಿಲ್ಲ. ಆ ಪರೀಕ್ಷೆಯಲ್ಲಿ ನಾಲ್ಕು ಆಯ್ಕೆಗಳೇ ಇರುತ್ತವೆ. ಗೊಂದಲ ಬೇಡ ಎಂದು ತಿಳಿಸಿದೆ.
ಏಪ್ರಿಲ್‌ನಲ್ಲಿ UGCET ಪರೀಕ್ಷೆ 2025
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2025 ಆನ್‌ಲೈನ್ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಿತ್ತು. ತದನಂತರ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮುಂದಿನ ಏಪ್ರಿಲ್ 16 ಮತ್ತು 17ರವರೆಗೆ ಸಿಇಟಿ-2025ಕ್ಕೆ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಶುಲ್ಕ ಪಾವತಿಯನ್ನು ವಿಸ್ತರಣೆ ಮಾಡಿತ್ತು. ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಮಾರ್ಚ್ 25ರವರೆಗೆ ಅವಕಾಶ ನೀಡಲಾಗಿದೆ.












Click it and Unblock the Notifications