ಜೂನ್ 6ರ ಶುಭ ಮುಹೂರ್ತದಲ್ಲಿ ಹೊಸ ಸಚಿವರ ಪ್ರತಿಜ್ಞಾ ಸ್ವೀಕಾರ
ಬೆಂಗಳೂರು, ಜೂನ್ 01: ಜೆಡಿಎಸ್-ಕಾಂಗ್ರೆಸ್ ಪಕ್ಷಗಳು 12:22 ಅನುಪಾತದಲ್ಲಿ ಸಚಿವ ಸ್ಥಾನಗಳನ್ನು ಹಂಚಿಕೊಂಡಿದ್ದು ಜೂನ್ 06ಕ್ಕೆ ಹೊಸ ಸಚಿವರು ಪ್ರತಿಜ್ಞಾ ವಿಧಿ ಸ್ವೀಕರಿಸುವುದು ಪಕ್ಕಾ ಆಗಿದೆ.
ಜೂನ್ 6 ರ ಮದ್ಯಾಹ್ನ 2:00ಗೆ ಸಮಯ ನಿಗದಿ ಮಾಡಲಾಗಿದ್ದು, ರಾಜ್ಯಪಾಲರ ಇರುವಿಕೆಯನ್ನೂ ಪಕ್ಕಾ ಮಾಡಿಕೊಳ್ಳಲಾಗಿದೆ. ಆದರೆ ಈ ಸಮಯ ನಿಗದಿ ಮಾಡಿರುವುದು ದೇವೇಗೌಡರು ಎನ್ನಲಾಗುತ್ತಿದೆ.

ಈಗಾಗಲೇ ಸಚಿವ ಸ್ಥಾನ ಅಲಂಕರಿಸುವವರ ಪಟ್ಟಿ ಕೂಡಾ ತಯಾರಿದೆ ಎನ್ನಲಾಗುತಿದ್ದು, ಉತ್ತಮ ಸಮಯಕ್ಕಾಗಿಯೇ ಪ್ರತಿಜ್ಞಾ ವಿಧಿಯನ್ನು ಮುಂದೂಡಲಾಗಿದೆ ಎನ್ನುವ ಸುದ್ದಿಯೂ ಸರಿದಾಡುತ್ತಿದೆ.
ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮದ ಸಮಯವನ್ನೂ ಸಹ ದೇವೇಗೌಡರೇ ಜೋತಿಷಿಗಳನ್ನು ಕೇಳಿಯೇ ಅಂತಿಮ ಮಾಡಿದ್ದರು. ಹಾಗಾಗಿ ಸರ್ಕಾರಕ್ಕೆ ಸಂಬಂಧಿಸಿದ ಈ ಮಹತ್ವದ ಕಾರ್ಯಕ್ಕೂ ಶುಭ ಗಳಿಗೆಯನ್ನೇ ನೋಡಿ ಅದೇ ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications