ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರ ಅಧಿಕಾರಾವಧಿ 2 ವರ್ಷಕ್ಕೆ ಮೊಟಕು: ಕಾಂಗ್ರೆಸ್‌ ಮಾಸ್ಟರ್ ಪ್ಲಾನ್

By Manjunatha
|
Google Oneindia Kannada News

Recommended Video

ನೂತನ ಸಚಿವರ ಹಿಂದೆ ನಡೆದಿದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ | Oneidia kannada

ಬೆಂಗಳೂರು, ಜೂನ್ 08: ಅರ್ಹರಿಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದಾಗಿ ಇದೀಗ ಸಚಿವರಾಗಿರುವ ಅವಧಿಯನ್ನು ಎರಡು ವರ್ಷಕ್ಕೆ ಕಾಂಗ್ರೆಸ್‌ ಮೊಟಕುಗೊಳಿಸಿದೆ. ಎರಡು ವರ್ಷದ ನಂತರ ಸಂಪುಟ ಪುನರ್‌ರಚನೆ ಆಗಿ ಹೊಸಬರಿಗೆ ಅವಕಾಶ ಸಿಗಲಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಈ ವಿಷಯ ಸ್ಪಷ್ಟಪಡಿಸಿದ್ದು, ಎರಡು ವರ್ಷದ ನಂತರ ಹೊಸ ಸಂಪುಟ ಪುನರ್‌ರಚನೆ ಆಗಲಿದೆ. ಅಷ್ಟೆ ಅಲ್ಲದೆ ಕಾರ್ಯಕ್ಷಮತೆ ಆಧಾರದಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರನ್ನು ತೆಗೆದುಹಾಕಲಾಗುತ್ತದೆ ಎಂದರು. ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಗೊಳಿಸಲೆಂದೇ ಈ ಸೂತ್ರವನ್ನು ಕಾಂಗ್ರೆಸ್ ಅನುಸರಿಸಲು ಮುಂದಾಗಿದೆ.

ಪರಂಗೆ ಸಂಪುಟ ಬಿಸಿ ತುಪ್ಪ, ಸ್ವಲ್ಪ ಆಯ ತಪ್ಪಿದರೂ ಬಿಜೆಪಿಗೆ ಕಪ್!ಪರಂಗೆ ಸಂಪುಟ ಬಿಸಿ ತುಪ್ಪ, ಸ್ವಲ್ಪ ಆಯ ತಪ್ಪಿದರೂ ಬಿಜೆಪಿಗೆ ಕಪ್!

ಹೊಸ ಸಚಿವರ ಕಾರ್ಯಗಳನ್ನು ಪ್ರತಿ ಆರ ತಿಂಗಳಿಗೊಮ್ಮೆ ಮೌಲ್ಯಮಾಪನ ಮಾಡಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ.

New ministers will replace in two years

ಕಾಂಗ್ರೆಸ್ ಹೈಕಮಾಂಡ್‌ ಮೂರು ಅಂಶಗಳ ಸೂತ್ರವನ್ನು ಜಾರಿಗೆ ತರಲಿದ್ದು, ಅದರ ಅನ್ವಯ ಸಚಿವರ ಮೌಲ್ಯಮಾಪನ ಹಾಗೂ ಹೊಸ ಸಚಿವರ ನೇಮಕ ಮಾಡಲಾಗುತ್ತದೆ ಎಂದಿದ್ದಾರೆ.

ಇದೇ ವಿಷಯವಾಗಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಈಗಿನ ಸಚಿವರ ಅವಧಿ ಎರಡು ವರ್ಷ ಮಾತ್ರ. ಆ ನಂತರ ಸಂಪುಟ ಸೇರುವ ಸಚಿವರ ಅವಧಿ 5 ವರ್ಷದ್ದಾಗಿರುತ್ತದೆ' ಎಂದಿದ್ದಾರೆ.

ಇನ್ನೊಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರ ರಾಜೀನಾಮೆಯಂತೆ, ಯಾರದು?ಇನ್ನೊಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರ ರಾಜೀನಾಮೆಯಂತೆ, ಯಾರದು?

ಇದೀಗ ಪಕ್ಷದ ವಿರುದ್ಧ ಮಾತನಾಡುತ್ತಿರುವ ಶಾಸಕರ ಮೇಲೂ ಪಕ್ಷವು ಕಣ್ಣಿಟ್ಟಿದ್ದು ಅವರ ವಿರುದ್ಧ ಕ್ರಮಕ್ಕೂ ಚಿಂತನೆ ನಡೆದಿದೆ. ಖಾತೆ ಹಂಚಿಕೆ ಪೂರ್ಣವಾದ ಮೇಲೆ ಆ ನಿಟ್ಟಿನಲ್ಲಿ ಪಕ್ಷವು ಕ್ರಮ ಜರುಗಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸಲೆಂದೇ ಕಾಂಗ್ರೆಸ್ ಹೈಕಮಾಂಡ್ ಈ ಯೋಜನೆ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದು ಕಾದು ನೋಡಬೇಕಿದೆ.

English summary
Coalition governments ministers will be replaced after two years says congress in charge of Karnataka Venu Gopal. Non-performer ministers will be dropped by cabinet on the basis of six months assessment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X