ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರ

|
Google Oneindia Kannada News

ಬೆಂಗಳೂರು, ಮೇ 03 : ಕೆಎಸ್ಆರ್‌ಟಿಸಿ ಬೆಂಗಳೂರು ನಗರದಿಂದ ಹೊರ ರಾಜ್ಯದ ವಿವಿಧ ಪ್ರದೇಶಗಳಿಗೆ ಹೊಸ ಬಸ್‌ ಸೇವೆಯನ್ನು ಆರಂಭಿಸಿದೆ. ಹೊಸ ಮಾರ್ಗದಲ್ಲಿನ ಬಸ್ ಸಂಚಾರ, ವೇಳಾಪಟ್ಟಿ, ಪ್ರಯಾಣ ದರದ ಬಗ್ಗೆ ನಿಗಮ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಈ ಕುರಿತು ಮಾಹಿತಿ ನೀಡಿದೆ. ಬೆಂಗಳೂರಿನ ಕೇಂದ್ರೀಯ ವಿಭಾಗದ ವತಿಯಿಂದ ನೂತನ ಬಸ್‌ ಸೇವೆಯನ್ನು ಪ್ರಾರಂಭಿಸಲಾಗಿದೆ. ಬಸ್‌ ವೇಳಾಪಟ್ಟಿಯನ್ನು ನಿಗಮ ಬಿಡುಗಡೆ ಮಾಡಿದೆ.

ಕೆಎಸ್‌ಆರ್‌ಟಿಸಿ ಬಸ್ ಮತ್ತಷ್ಟು ಪ್ರಯಾಣಿಕ ಸ್ನೇಹಿಕೆಎಸ್‌ಆರ್‌ಟಿಸಿ ಬಸ್ ಮತ್ತಷ್ಟು ಪ್ರಯಾಣಿಕ ಸ್ನೇಹಿ

ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು-ಮುನ್ನಾರ್ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್, ಬೆಂಗಳೂರು-ಪೂನಾ ಮತ್ತು ಬೆಂಗಳೂರು-ವಿಜಯವಾಡ, ಬೆಂಗಳೂರು ಸಿಕಂದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ಬಸ್‌ಗಳನ್ನು ಆರಂಭಿಸಲಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್‌ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್‌

ಕೆಎಸ್ಆರ್‌ಟಿಸಿ ಬಸ್ ಮತ್ತಷ್ಟು ಜನಸ್ನೇಹಿಯಾಗಲು ಪ್ರಯತ್ನ ನಡೆಸಿದೆ. ಈ ವರ್ಷದ ಅಂತ್ಯದೊಳಗೆ ಎಲ್ಲಾ ಬಸ್‌ಗಳಲ್ಲಿ ಜಿಪಿಎಸ್ ಟ್ರಾಕರ್ ಮತ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗುತ್ತದೆ. ಕೆಎಸ್ಆರ್‌ಟಿಸಿಯಲ್ಲಿ 8700 ಬಸ್‌ಗಳಿವೆ. ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಹಲವು ಬಸ್‌ಗಳನ್ನು ಓಡಿಸುತ್ತದೆ.

ಬೆಂಗಳೂರು-ಮುನ್ನಾರ್ ಬಸ್ ಸೇವೆ

ಬೆಂಗಳೂರು-ಮುನ್ನಾರ್ ಬಸ್ ಸೇವೆ

ಬೆಂಗಳೂರು-ಮುನ್ನಾರ್ (ನಾನ್ ಎಸಿ ಸ್ಲೀಪರ್) ಬಸ್ ಹೊಸೂರು, ಕೊಯಮತ್ತೂರು, ಉಡುಮಲ್‌ಪೇಟೆ ಮೂಲಕ ಸಂಚಾರ ನಡೆಸಲಿದೆ. ಪ್ರಯಾಣ ದರ 800 ರೂ.ಗಳು.

ಬೆಂಗಳೂರಿನಿಂದ 9ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 10 ಗಂಟೆಗೆ ಮುನ್ನಾರ್ ತಲುಪಲಿದೆ. ಮುನ್ನಾರ್‌ನಿಂದ ಸಂಜೆ 5 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 6.30ಕ್ಕೆ ಬೆಂಗಳೂರಿಗೆ ಬರಲಿದೆ.

ಬೆಂಗಳೂರು-ಸಿಕಂದ್ರಾಬಾದ್ ಬಸ್

ಬೆಂಗಳೂರು-ಸಿಕಂದ್ರಾಬಾದ್ ಬಸ್

ಬೆಂಗಳೂರು-ಸಿಕಂದ್ರಾಬಾದ್ ನಡುವೆ ಅಂಬಾರಿ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ಬಸ್ ಸಂಚಾರ. ಅನಂತಪುರ, ಗುತ್ತಿ, ಕರ್ನೂಲ್, ಹೈದರಾಬಾದ್ ಮಾರ್ಗವಾಗಿ ಸಂಚಾರ. ಪ್ರಯಾಣದರ 1450 ರೂ.ಗಳು.

ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಡುವ ಬಸ್ ಮರುದಿನ 7.50ಕ್ಕೆ ಸಿಕಂದ್ರಾಬಾದ್ ತಲುಪಲಿದೆ. ಸಿಕಂದ್ರಾಬಾದ್‌ನಿಂದ 6.35ಕ್ಕೆ ಹೊರಡುವ ಬಸ್ ಬೆಂಗಳೂರಿಗೆ 5.50ಕ್ಕೆ ಆಗಮಿಸಲಿದೆ.

ಬೆಂಗಳೂರು-ಪೂನಾ ಬಸ್

ಬೆಂಗಳೂರು-ಪೂನಾ ಬಸ್

ಬೆಂಗಳೂರು-ಪೂನಾ ನಡುವೆ ಅಂಬಾರಿ ಡ್ರೀಮ್‌ ಕ್ಲಾಸ್ (ಎಸಿ ಸ್ಲೀಪರ್) ಬಸ್ ಸಂಚಾರ ನಡೆಸಲಿದ್ದು, ದಾವಣಗೆರೆ, ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸಲಿದೆ. ಪ್ರಯಾಣದರ 1700 ರೂ.ಗಳು.

ಬೆಂಗಳೂರಿನಿಂದ ಬಸ್ 7.30ಕ್ಕೆ ಹೊರಡಲಿದೆ ಮರುದಿನ ಬೆಳಗ್ಗೆ 9.30ಕ್ಕೆ ಪೂನಾಗೆ ತಲುಪಲಿದೆ. ಪೂನಾದಿಂದ ಸಂಜೆ 6.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 8.30ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರು-ವಿಜಯವಾಡ

ಬೆಂಗಳೂರು-ವಿಜಯವಾಡ

ಬೆಂಗಳೂರು-ವಿಜಯವಾಡ ಮಾರ್ಗದಲ್ಲಿಯೂ ಅಂಬಾರಿ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ಬಸ್ ಸಂಚಾರ ನಡೆಸಲಿದೆ. ಈ ಬಸ್ ಕೋಲಾರ, ಚಿತ್ತೂರು, ತಿರುಪತಿ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಪ್ರಯಾಣದರ 1500 ರೂ.ಗಳು.

ಬೆಂಗಳೂರಿನಿಂದ ಸಂಜೆ 5.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 7.30ಕ್ಕೆ ವಿಜಯವಾಡ ತಲುಪಲಿದೆ. ಸಂಜೆ 6.30ಕ್ಕೆ ವಿಜಯವಾಡದಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 7.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ.

English summary
The Karnataka State Road Transport Corporation (KSRTC) has started new non ac sleeper bus services from Bengaluru to Munnar, Secunderabad, Pune, and Vijayawada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X